Tuesday, June 2, 2020

ವಕ್ರ ದೃಷ್ಟಿಯ ರಾಹುಲ್‌: ಅಮಿತ್ ಶಾ ಟೀಕೆ

ವಕ್ರ ದೃಷ್ಟಿಯ ರಾಹುಲ್‌:  ಅಮಿತ್ ಶಾ ಟೀಕೆ

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ವಕ್ರ ದೃಷ್ಟಿ ಹೊಂದಿದ್ದಾರೆ, ಅವರ ನ್ಯಾಯ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020 ಜೂನ್ 02ರ ಮಂಗಳವಾರ ಇಲ್ಲಿ ಹೇಳಿದರು.

ಬಡ ಮತ್ತು ವಲಸೆ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಸಲಹೆಗಳನ್ನು ದೇಶದ ಜನರು ಈಗಾಗಲೇ ತಿರಸ್ಕರಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಿದ್ದ ಶಾ, ‘ಕೆಲವು ಜನರಿಗೆ ವಕ್ರ ದೃಷ್ಟಿ ಇರುತ್ತದೆ. ಮುಂದಿನ ಆರು ತಿಂಗಳವರೆಗೆ ಸರ್ಕಾರವು ,೫೦೦ ರೂಗಳನ್ನು ನೇರವಾಗಿ ವಲಸೆ ಕಾರ್ಮಿಕರ ಖಾತೆಗೆ ವರ್ಗಾಯಿಸಬೇಕು ಎಂಬ ರಾಹುಲ್ ಗಾಂಧಿಯವರ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ  ಶಾಕೆಲವು ಜನರಿಗೆ ವಕ್ರ ದೃಷ್ಟಿ ಇರುತ್ತದೆ ಅವರು ನೇರವಾಗಿ ಏನನ್ನೂ ನೋಡಲಾಗುವುದಿಲ್ಲಎಂದು ನುಡಿದರು.

ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಖ್ಯಾತ ಅರ್ಥಶಾಸ್ತ್ರಜ್ಞರಾದ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಸಲಹೆ ಡೆದುಕೊಂಡು, ದಿಗ್ಬಂಧನದಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಬೇಕು ಎಂದು  ಕೋರಿದ್ದಾರೆ. ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗಿಂತ ಮುಂಚಿತವಾಗಿಯೇ ರಾಹುಲ್ ಗಾಂಧಿಯವರು ಪ್ರತಿ ಬ್ಯಾಕ್ ಖಾತೆಗೆ ೭೫೦೦ ರೂಗಳನ್ನು ಹಾಕುವ ಯೋಜನೆಯೊಂದಿಗೆ ಸುತ್ತುತ್ತಿದ್ದಾರೆ ಎಂದು ಗೃಹ ಸಚಿವರು ಉಲ್ಲೇಖಿಸಿದರು.

ಚುನಾವಣೆಗೆ ಮುಂಚೆಯೇ, ಅವರು ಯೋಜನೆಯನ್ನುನ್ಯಾಯಎಂಬ ಹೆಸರಿನೊಂದಿಗೆ ಪ್ರಸ್ತಾಪಿಸಿದ್ದರು. ಆದರೆ ದೇಶದ ಜನರು ಇದನ್ನು ತಿರಸ್ಕರಿಸಿದರು. ಅದನ್ನು ತಿರಸ್ಕರಿಸಲಾಗಿದೆ ಮತ್ತು ಅದಾಗಿ  ಒಂದು ವರ್ಷ ಕಳೆದಿದೆ ಎಂಬುದು ಅವರಿಗೆ ತಿಳಿದಿಲ್ಲದಿರಬಹುದು. ಅವರ ಕ್ಯಾಸೆಟ್ ಅಲ್ಲಿ ಸಿಕ್ಕಿಹಾಕಿಕೊಂಡು ಅಲ್ಲಿಯೇ ಗಿರಕಿ ಹೊಡೆಯುತ್ತಿದೆಎಂದು ಅಮಿತ್ ಶಾ ನುಡಿದರು.

ನೇರ ಲಾಭ ವರ್ಗಾವಣೆ ಯೋಜನೆಯ ಮೂಲಕ ೫೩ ಕೋಟಿ ರೂ.ಗಳನ್ನು ೪೧ ಕೋಟಿ ಬಡವರಿಗೆ ವರ್ಗಾಯಿಸಿದ್ದು, ೨೦ ಕೋಟಿ ಜನಧನ್ ಖಾತೆದಾರರಿಗೆ ೨೦,೦೦೦ ಕೋಟಿ ರೂ.ಗಳ ವರ್ಗಾವಣೆ ಮತ್ತು ,೮೧೪ ಕೋಟಿ ರೂಗಳನ್ನು ಇತರ ಹಂತಗಳಲ್ಲಿ ಕೋಟಿ ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಒದಗಿಸಿದ್ದು ಸೇರಿದಂತೆ ಕೊರೊನಾವೈರಸ್ ಪ್ರಕರಣಗಳಲ್ಲಿ ಬಡವರಿಗೆ ಸಹಾಯ ಮಾಡಲು ಸರ್ಕಾರ ಕೈಗೊಂಡ ಕ್ರಮಗಳನ್ನು ಅಮಿತ್ ಶಾ ವಿವರಿಸಿದರು.

ಕೇಂದ್ರವು . ಕೋಟಿ ರೈತರಿಗೆ ೧೬,೩೯೪ ಕೋಟಿ ರೂ. ಮತ್ತು ನಿರ್ಮಾಣ ಕಾರ್ಮಿಕರಿಗೆ ,೦೦೦ ಕೋಟಿ ರೂ. ನೀಡಿದೆ. ಇದರ ಜೊತೆಗೆ, ನಾವು . ಕೋಟಿ ಉಚಿತ ಸಿಲಿಂಡರುಗಳನ್ನು ನೀಡಿದ್ದೇವೆ. ಇದರ ವೆಚ್ಚವನ್ನು ಸೇರಿಸಿದರೆ ಅದು ಪ್ರತಿ ಕುಟುಂಬಕ್ಕೆ ,೬೦೦ ರೂ. ಒದಗಿಸಿದಂತಾಗಿದೆಎಂದು ಶಾ ಹೇಳಿದರು.

ಸರ್ಕಾರವು ೯೮ ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು ಅಕ್ಕಿ ಜೊತೆಗೆ .೭೫ ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ವಿತರಿಸುತ್ತಿದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಹೆಚ್ಚಿನ ನಗದು ವರ್ಗಾವಣೆಯನ್ನು ಪರಿಗಣಿಸಲಾಗುತ್ತದೆಯೇ ಎಂದು ಕೇಳಿದಾಗ "ನಗದು ಬೆಂಬಲ ಅಲ್ಲದೇ ಇದ್ದರೆ ಇದೆಲ್ಲ ಏನು?" ಎಂದು ಅವರು ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ವಕ್ರ ದೃಷ್ಟಿ ಹೊಂದಿರುವವರು ಎಂದು ಹೇಳಿದ ಶಾ, " ದೇಶದ ಜನರು ವಕ್ರ ದೃಷ್ಟಿ ಹೊಂದಿರುವ ಜನರನ್ನು ಚೆನ್ನಾಗಿ ತಿಳಿದುಕೊಂಡಿದ್ದರೆ ಮತ್ತು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅವರ ಪ್ರತಿಪಾದನೆಗಳನ್ನು ನಂಬುವುದಿಲ್ಲಎಂದು ಹೇಳಿದರು.

No comments:

Advertisement