Tuesday, June 2, 2020

ಕೋವಿಡ್ ಉತ್ತುಂಗದಿಂದ ಭಾರತ ದೂರ, ಸಾವಿನ ಪ್ರಮಾಣ ವಿಶ್ವದಲ್ಲೇ ಕಡಿಮೆ

ಕೋವಿಡ್ ಉತ್ತುಂಗದಿಂದ  ಭಾರತ ದೂರ, ಸಾವಿನ ಪ್ರಮಾಣ ವಿಶ್ವದಲ್ಲೇ ಕಡಿಮೆ

ನವದೆಹಲಿ: ರೋಗಿಗಳ ಸಂಖ್ಯೆ ಲಕ್ಷದ ಸನಿಹಕ್ಕೆ ಬಂದಿದ್ದರೂ, ಭಾರತವು ಕೋವಿಡ್ -೧೯ ಶಿಖರದಿಂದ ದೂರವಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ತಜ್ಞೆ ಡಾ.ನಿವೇದಿತಾ ಗುಪ್ತ ಅವರು  2020 ಜೂನ್ 02ರ ಮಂಗಳವಾರ ಇಲ್ಲಿ ಹೇಳಿದರು.

ಕೋವಿಡ್ -೧೯ಕ್ಕೆ ಸಂಬಂಧಿಸಿದ ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಾ. ನಿವೇದಿತಾ ಗುಪ್ತ ಮಾತನಾಡುತ್ತಿದ್ದರು.

ರೋಗವನ್ನು ದಮನಿಸುವಲ್ಲಿ ಭಾರತದ ಕ್ರಮಗಳು ಪರಿಣಾಮಕಾರಿಯಾಗಿವೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ನುಡಿದರು.

ಸಮುದಾಯ ಪ್ರಸರಣಎಂಬ ಪದವನ್ನು ಬಳಸುವ ಮುನ್ನ, ರೋಗದ ಹರಡುವಿಕೆಯ ವ್ಯಾಪ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಉತ್ತುಂಗದಿಂದ ದೂರವಿದ್ದೇವೆಎಂದು ಅವರು ಹೇಳಿದರು.

ಭಾರತದಲ್ಲಿ ಕೋವಿಡ್ -೧೯ ಸಾವಿನ ಪ್ರಮಾಣ .೮೨% ಆಗಿದ್ದು, ಇದು ವಿಶ್ವದ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.

ಭಾರತದಲ್ಲಿ  ಶೇಕಡಾ ೭೩ ರಷ್ಟು ಕೋವಿಡ್ -೧೯ ಸಾವುಗಳು ಸಹ-ಅಸ್ವಸ್ಥತೆ ಹೊಂದಿರುವ ಜನರಲ್ಲಿ ಸಂಭವಿಸಿವೆಎಂದು  ಅಗರವಾಲ್  ನುಡಿದರು.

ಭಾರತದ ಜನಸಂಖ್ಯೆಯ ೧೦% ರಷ್ಟು ದೇಶದ ಕೋವಿಡ್ -೧೯ ಸಂಬಂಧಿತ ಸಾವುಗಳ ಶೇಕಡಾ ೫೦% ರಷ್ಟು ಆಗುತ್ತದೆ. ದೇಶಾದ್ಯಂತ ೯೫,೫೨೭ ಕೊರೋನವೈರಸ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಚೇತರಿಕೆ ಪ್ರಮಾಣವು ಈಗ ಶೇಕಡಾ ೪೮.೦೭ಕ್ಕೆ ಏರಿದೆ ಎಂದು ಅಗರವಾಲ್ ನುಡಿದರು.

ಕೋವಿಡ್ -೧೯ ಪರೀಕ್ಷೆಯನ್ನು ದೇಶದಲ್ಲಿ ಹೆಚ್ಚಿಸಲಾಗಿದೆ. "ಕೋವಿಡ್ -೧೯ ಪರೀಕ್ಷೆಗಳನ್ನು ನಡೆಸಲು ಅನುಮೋದನೆ ಪಡೆದ ೬೮೧ ಪ್ರಯೋಗಾಲಯಗಳನ್ನು ನಾವು ಹೊಂದಿದ್ದೇವೆ- ಸರ್ಕಾರಿ ವಲಯದಲ್ಲಿ ೪೭೬ ಮತ್ತು ಖಾಸಗಿ ವಲಯದಲ್ಲಿ ೨೦೫, ೨೦೨೦ ಜೂನ್ ಹೊತ್ತಿಗೆ. ಇಂದು ನಾವು ಪ್ರತಿದಿನ ಲಕ್ಷ ೨೦ ಸಾವಿರ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ" ಎಂದು ವಿಜ್ಞಾನಿ ನಿವೇದಿತಾ ಗುಪ್ತ ಹೇಳಿದರು.

ಕೋವಿಡ್ -೧೯ ಪ್ರಕರಣಗಳ ಪಥವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರಗಳನ್ನು ಕೇಳಲಾಗಿದೆ ಎಂದು ಅಗರ್ವಾಲ್ ನುಡಿದರು.

"ತಾತ್ಕಾಲಿಕ ಕೋವಿಡ್ -೧೯ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಒಂದು ರಾಜ್ಯ ಭಾವಿಸಿದರೆ ಅದು ಹಾಗೆ ಮಾಡಬೇಕು" ಎಂದು ಅವರು ಹೇಳಿದರು.

ಭಾರತದ ಕೋವಿಡ್ -೧೯ ಪ್ರಕರಣಗಳು ಮಂಗಳವಾರ ,೯೮,೭೦೬ ಕ್ಕೆ ತಲುಪಿದೆ. ಭಾರತದಾದ್ಯಂತ ೯೫,೫೨೬ ಜನರು ಚೇತರಿಸಿಕೊಂಡಿದ್ದಾರೆ ಅಥವಾ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ,೫೯೮ ಜನರು ಕೋವಿಡ್ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೊಸದಾಗಿ ,೧೭೧ ಪ್ರಕರಣಗಳು ದಾಖಲಾಗಿವೆ.

ವಿಶ್ವಾದ್ಯಂತ ಲಾಕ್ ಡೌನ್ ತೆರವು

ಕೋವಿಡ್ -೧೯ ಲಾಕ್ಡೌನ್ಗಳನ್ನು ಕ್ರಮೇಣ ಜಾಗತಿಕವಾಗಿ ತೆಗೆದುಹಾಕಲಾಗುತ್ತಿದೆ. ಕೆಲವು ದೇಶಗಳು ಮತ್ತೆ ಕಚೇರಿಗಳಿಗೆ ಬರುವಂತೆ ನೌಕgರಿಗೆ ಸೂಚಿಸಿದರೆ, ಕೆಲವು ಪ್ರವಾಸೋದ್ಯಮಕ್ಕಾಗಿ ನಾಗರಿಕರು ಆಗಮಿಸಬಹುದಾದ ರಾಷ್ಟ್ರಗಳ ಪಟ್ಟಿಯನ್ನು ನವೀಕರಿಸಿವೆ.

ಜೆಕ್ ಗಣರಾಜ್ಯವು ಜೆಕ್ ಗಣರಾಜ್ಯಕ್ಕೆ ಬರಬಹುದಾದ ೨೯ ರಾಷ್ಟ್ರಗಳ ಪಟ್ಟಿಯನ್ನು ತಯಾರಿಸಿದೆ. ಪ್ರವಾಸಿಗಳನ್ನೇ ನೆಚ್ಚಿಕೊಂಡಿರುವ ದ್ವೀಪ-ರಾಷ್ಟ್ರ ಮಾಲ್ಟಾ, ಅಮೆರಿಕದ ಫ್ಲೋರಿಡಾ ಕೀಸ್ ಮತ್ತು ಇಟಲಿಯ ಪ್ರವಾಸಿ ತಾಣಗಳು ಕೂಡಾ ಕೋವಿಡ್ -೧೯ ಮೂಲಕ ಹೆಚ್ಚು ಹಾನಿಗೊಳಗಾದ ಕ್ಷೇತ್ರಗಳಿಗೆ ಬೇಡಿಕೆಯನ್ನು ಮರಳಿ ತರುವ ಉದ್ದೇಶದಿಂದ ಪ್ರವಾಸಿಗರಿಗೆ ಮತ್ತೆ ತೆರೆದುಕೊಳ್ಳುತ್ತಿವೆ.

ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕ, ಬ್ರೆಜಿಲ್, ಪೆರು, ಚಿಲಿ ಮತ್ತು ಮೆಕ್ಸಿಕೊ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿವೆ ಎಂದು ಅದು ಎತ್ತಿ ತೋರಿಸಿದೆ.

ಕೊರೋನಾ ಬಾಧೆಯಿಂದ ಕಂಗೆಟ್ಟಿದ ಸ್ಪೇನ್ ಮತ್ತು ಇಟಲಿ ಕಳೆದ ೨೪ ಗಂಟೆಗಳಲ್ಲಿ ಒಂದೇ ಸಾವನ್ನು ಕೂಡಾ ದಾಖಲಿಸದೇ ಇರುವ ಮೂಲಕ ವೈರಸ್ಸನ್ನು ಕಡಿಮೆ ಮಾಡುವ ಲಕ್ಷಣಗಳನ್ನು ತೋರಿಸಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೬೪,೦೬,೦೭೮೪, ಸಾವು ,೭೮,೧೮೬

ಚೇತರಿಸಿಕೊಂಡವರು- ೨೯,೩೪,೨೦೪

ಅಮೆರಿಕ ಸೋಂಕಿತರು ೧೮,೬೧,೪೭೪, ಸಾವು ,೦೬,೯೯೦

ಸ್ಪೇನ್ ಸೋಂಕಿತರು ,೮೬,೭೧೮, ಸಾವು ೨೭,೧೨೭

ಇಟಲಿ ಸೋಂಕಿತರು ,೩೩,೧೯೭, ಸಾವು ೩೩,೪೭೫

ಜರ್ಮನಿ ಸೋಂಕಿತರು ,೮೩,೮೨೦, ಸಾವು ,೬೨೪

ಚೀನಾ ಸೋಂಕಿತರು ೮೩,೦೨೨, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೭೬,೩೩೨, ಸಾವು ೩೯,೦೪೫

 ಅಮೆರಿಕದಲ್ಲಿ ೬೫, ಇರಾನಿನಲ್ಲಿ ೬೪, ಬೆಲ್ಜಿಯಂನಲ್ಲಿ ೧೯, ಇಂಡೋನೇಷ್ಯ ೨೨, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೮೨, ಸ್ವೀಡನ್ನಲ್ಲಿ ೬೫, ಮೆಕ್ಸಿಕೋದಲ್ಲಿ ೨೩೭ ಒಟ್ಟಾರೆ ವಿಶ್ವಾದ್ಯಂತ ೯೯೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement