ಪ್ರಧಾನಿ ವಿರುದ್ಧ
ಗಾಂಧಿತ್ರಯರ ವಿಡಿಯೋ ದಾಳಿ
ನವದೆಹಲಿ: ಮೂರು ವಿಡಿಯೋ ಸಂದೇಶ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2020 ಜೂನ್ 26ರ ಶುಕ್ರವಾರ ‘ಚೀನೀ ಆಕ್ರಮಣ’ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ದಾಳಿ ನಡೆಸಿದರು.
ಸೋನಿಯಾ
ಗಾಂಧಿ, ಪುತ್ರ ರಾಹುಲ್ ಮತ್ತು ಪುತ್ರಿ ಪ್ರಿಯಾಂಕಾ ಅವರು ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡು, ಚೀನೀ ಸೇನೆಯು ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶದ ವ್ಯಾಪ್ತಿ ಬಗ್ಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
’ಚೀನಾವು
ನಮ್ಮ ಪ್ರದೇಶವನ್ನು ದಾಟಿಲ್ಲ’ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ, ’ಆದರೆ, ರಕ್ಷಣಾ ತಜ್ಞರು, ಉಪಗ್ರಹ ಚಿತ್ರಗಳು ಮತ್ತು ವಿದೇಶಾಂಗ ಸಚಿವಾಲಯದಿಂದ ಹೊರಬರುವ ಹೇಳಿಕೆಗಳ ಪ್ರಕಾರ ಚೀನಾದ ಪಡೆಗಳು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವುದು ಕಂಡುಬರುತ್ತದೆ’ ಎಂದು
ಹೇಳಿದರು.
’ಜೂನ್
ತಿಂಗಳ ಆರಂಭದಲ್ಲಿ ಪೂರ್ವ ಲಡಾಖ್ನ ಗಲ್ವಾನ್ ಪ್ರದೇಶದಲ್ಲಿ
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್ಎ) ಸೈನಿಕರೊಂದಿಗೆ ಹಿಂಸಾತ್ಮಕ
ಮುಖಾಮುಖಿಯಲ್ಲಿ ಹುತಾತ್ಮರಾದ ೨೦ ಸೈನಿಕರಿಗೆ ಗೌರವ
ಸಲ್ಲಿಕೆಯೊಂದಿಗೆ ಆರಂಭವಾಗುವ ಮೂರೂ ವಿಡಿಯೋ ಸಂದೇಶಗಳಲ್ಲಿ, ಮುಂದುವರೆದಂತೆ ತ್ರಿವಳಿ ನಾಯಕರೂ ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಹುತಾತ್ಮ
ಸೈನಿಕರಿಗೆ ದೇಶವು ಗೌರವ ಸಲ್ಲಿಸುತ್ತಿರುವಾಗ, ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳಿಂದ ಹಿಂದೆ ಸರಿಯಲು ಸಾಧ್ಯವಿಲ. ಚೀನೀ ಸೇನೆಯು ಆಕ್ರಮಿಸಿಕೊಂಡಿದೆ ಎಂದು ಹೇಳಲಾಗಿರುವ ಭಾರತೀಯ ಭೂಪ್ರದೇಶವನ್ನು ಮರಳಿ ಪಡೆಯಬೇಕು ಎಂದು ಸೋನಿಯಾ ಗಾಂಧಿ ಹೇಳಿದರು. ಸೇನೆಗೆ ಸರ್ವರೀತಿಯ ಬೆಂಬಲವನ್ನು ಸರ್ಕಾರ ನೀಡಬೇಕು. ಇದು ನಿಜವಾದ ದೇಶಭಕ್ತಿ’
ಎಂದು ತಮ್ಮ ಮೂರು ನಿಮಿಷಗಳ ವಿಡಿಯೋ ಸಂದೇಶದಲ್ಲಿ ಸೋನಿಯಾ ನುಡಿದರು.
ಕಾಂಗ್ರೆಸ್
ಪಕ್ಷದ ರಾಜೀವ್ ಗಾಂಧಿ ಪ್ರತಿಷ್ಠಾನವು (ಆರ್ ಜಿಎಫ್) ಚೀನಾ ಸರ್ಕಾರ ಮತ್ತು ನವದೆಹಲಿಯ ಚೀನೀ ರಾಯಭಾರ ಕಚೇರಿಯ ದೇಣಿಗೆಯ ಫಲಾನುಭವಿ ಎಂಬುದಾಗಿ ಭಾರತೀಯ ಜನತಾ ಪಕ್ಷದ ನಾಯಕರು ಆರೋಪಿಸಿದ ಹಿನ್ನೆಲೆಯಲ್ಲಿ ಗಾಂಧಿ ಕುಟುಂಬದ ಮೂವರು ಸದಸ್ಯರಿಂದ ಈ ವಿಡಿಯೋ ಸಂದೇಶಗಳು
ಪ್ರಕಟಗೊಂಡಿವೆ.
’ಚೀನಾದಿಂದ
ಲಭಿಸಿದ ಈ ಕೊಡುಗೆಯಿಂದಾಗಿ ಕಾಂಗ್ರೆಸ್
ಪಕ್ಷವು ಚೀನಾವನ್ನು ಬೆಂಬಲಿಸಿದೆ’ ಎಂದು
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು.
ಆರ್ಜಿಎಫ್ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿತ್ತು. ಚೀನಾದ ಪರವಾಗಿ ಮಾಡಿಕೊಳ್ಳಲಾದ ಈ ಒಪ್ಪಂದವು ಭಾರತದ
ಪಾಲಿಗೆ ಭಾರಿ ವ್ಯಾಪಾರ ಕೊರತೆಗೆ ಕಾರಣವಾಯಿತು’ ಎಂದು
ಪ್ರಸಾದ್ ಆಪಾದಿಸಿದ್ದರು.
ಶುಕ್ರವಾರ
ಬೆಳಗ್ಗೆ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ
ಅವರು ರಾಜೀವ್ ಗಾಂಧಿ ಫೌಂಡೇಶನ್ನ ವಾರ್ಷಿಕ ವರದಿಗಳ ಆಯ್ದ
ಭಾಗಗಳನ್ನು ಉಲ್ಲೇಖಿಸಿ, ಸಾರ್ವಜನಿಕರಿಂದ ದೇಣಿಗೆ ಪಡೆಯುವ ಪಿಎಂ ರಿಲೀಫ್ ಫಂಡ್ ಆರ್ಜಿಎಫ್ಗೆ ಹಣವನ್ನು ದಾನ
ಮಾಡಿದೆ. ಮನಮೋಹನ್ ಸಿಂಗ್ ನೇತೃತ್ವದ ಒಕ್ಕೂಟ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ದಾನ ನೀಡಲಾಗಿದೆ’ ರವಿಶಂಕರ
ಪ್ರಸಾದ್ ಹೇಳಿದ್ದರು.
ರಾಹುಲ್
ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವೀಡಿಯೊ ಸಂದೇಶಗಳು ಸೋನಿಯಾ ಗಾಂಧಿಯವರ ಸಂದೇಶಗಳಿಗಿಂತ ಹೆಚ್ಚು ಖಾರವಾಗಿದ್ದವು.
ಚೀನವು
ನಮ್ಮ ಭೂಮಿಯನ್ನು ಕೇವಲ ಒಂದು ಕಡೆ ಮಾತ್ರವಲ್ಲ ಮೂರು ಪ್ರದೇಶಗಳಲ್ಲಿ ಕಸಿದುಕೊಂಡಿದೆ. ಪ್ರಧಾನಿ ಜಿ, ನೀವು ಸತ್ಯವನ್ನು ಮಾತನಾಡಬೇಕು ಮತ್ತು ಚಡಪಡಿಸುವ ಅಗತ್ಯವಿಲ್ಲ, ಯಾವುದೇ ಭೂಮಿಯನ್ನು ಕಸಿದುಕೊಂಡಿಲ್ಲ ದೇಶಕ್ಕೆ ಹೇಳಬೇಕು. ನಿಮ್ಮ ಮಾತಿನಲ್ಲಿ ಸತ್ಯ ಇಲ್ಲದೆ, ನೀವು ಇದನ್ನು ಹೇಳಿದರೆ, ಅದು ಚೀನಾಕ್ಕೆ ಲಾಭವಾಗಿರುತ್ತದೆ’ ಎಂದು
ರಾಹುಲ್ ಗಾಂಧಿ ವಿಡಿಯೋ ಸಂದೇಶದಲ್ಲಿ ಹೇಳಿದರು.
ಪರಿಷ್ಕೃತ
ಹೇಳಿಕೆ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ ರಾಹುಲ್ ಗಾಂಧಿ, ಭಾರತವು ತನ್ನ ಭೂಪ್ರದೇಶದ ಆಕ್ರಮಣವನ್ನು ನಿರಾಕರಿಸುತ್ತಿದ್ದರೆ ಚೀನಾ ಅದರ ಪ್ರಮುಖ ಫಲಾನುಭವಿಯಾಗಲಿದೆ ಎಂದು ಹೇಳಿದರು.
ಪ್ರಿಯಾಂಕಾ
ಗಾಂಧಿ ಅವರು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಶೃಂಗಸಭೆಯಲ್ಲಿ ಚೀನಾದೊಂದಿಗಿನ ಸಂಬಂಧವನ್ನು ಸುಧಾರಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಗೂ ಚೀನೀ ಆಕ್ರಮಣಕ್ಕೂ ಸಂಪರ್ಕ ಕಲ್ಪಿಸಲು ಯತ್ನಿಸಿದರು.
"ಪ್ರಧಾನಿ
ಮೋದಿ ಅವರು ಚೀನಿಯರೊಂದಿಗೆ ನಡೆಸಿದ ಚರ್ಚೆಯ ಸಮಯದಲ್ಲಿ ಏನಾಯಿತು, ಅವರು ನಮ್ಮ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವಷ್ಟು ದೈರ್ಯಶಾಲಿಗಳಾದದ್ದು ಹೇಗೆ?’ ಎಂದು ಪ್ರಿಯಾಂಕಾ ಗಾಂಧಿ ಕೇಳಿದರು, ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
‘ನಮ್ಮ
ಸೈನಿಕರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಅವರ ತ್ಯಾಗಕ್ಕೆ ಅಗೌರವ ತೋರುವುದು ಅಪರಾಧ. ಇದು ಸಂಭವಿಸಲು ನಾವು ಬಿಡುವುದಿಲ್ಲ’ ಎಂದು
ಅವರು ಹೇಳಿದರು.
ಚೀನಾದ
ಸೇನೆಯು ಭಾರತೀಯ ಭೂಪ್ರದೇಶದಲ್ಲಿ ಇಲ್ಲ ಎಂಬುದಾಗಿ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಯವರ ಸಭೆಯ ಸಮಾರೋಪ ಮಾಡುತ್ತಾ ನೀಡಿದ ಹೇಳಿಕೆಯು ಸೇನಾ ಮುಖ್ಯಸ್ಥರು, ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವಾಲಯದ ಹಿಂದಿನ ಹೇಳಿಕೆಗಳಿಗೆ ತದ್ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಚೀನಾದ
ಯಾವುದೇ ಪಡೆಗಳು ನೈಜ ನಿಯಂತ್ರಣ ರೇಖೆಯನ್ನು ದಾಟಿಲ್ಲವೇ? ಹಾಗಾದರೆ ಮುಖಾಮುಖಿ ಘರ್ಷಣೆಗೆ ಕಾರಣವೇನು ಎಂದು ಅದು ಪ್ರಶ್ನಿಸಿದೆ.
ಸಶಸ್ತ್ರ
ಪಡೆಗಳ ದಿಟ್ಟತನದ ಪರಿಣಾಮದ ಪರಿಸ್ಥಿತಿಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಎಲ್ಎಸಿಯ ನಮ್ಮ ಬದಿಯಲ್ಲಿ ಯಾವುದೇ ಚೀನೀ ಪಡೆಗಳ ಉಪಸ್ಥಿತಿಯಿಲ್ಲ ಎಂಬುದನ್ನು ಪ್ರಧಾನಿ ಹೇಳಿದ್ದಾರೆ ಎಂದು ಬಳಿಕ ಪ್ರಧಾನ ಮಂತ್ರಿಯವರ ಕಾರ್ಯಾಲಯ ಸ್ಪಷ್ಟ ಪಡಿಸಿತ್ತು.
"ಡೇರೆ ನಿರ್ಮಿಸಲು ಆದಿನ ಚೀನಾ ನಡೆಸಿದ ಪ್ರಯತ್ನಗಳನ್ನು ವಿಫಲಗೊಳಿಸಲು ೧೬ ಬಿಹಾರ ರೆಜಿಮೆಂಟ್ನ ಸೈನಿಕರು ಬಲಿದಾನ ಮಾಡಿದ್ದಾರೆ ಮತ್ತು ಆ ಬಲಿದಾನದಿಂದಾಗಿ ಚೀನಾ ನಿರ್ಮಿಸಿದ್ದ ಡೇರೆಯನ್ನು ಕಿತ್ತು ಹಾಕಲಾಗಿದ್ದು, ಚೀನಾದ ಉಲ್ಲಂಘನೆ ಯತ್ನ ವಿಫಲಗೊಂಡಿದೆ’ ಎಂದು ಪ್ರಧಾನ ಮಂತ್ರಿಗಳ ಸಚಿವಾಲಯ ಹೇಳಿತ್ತು.
No comments:
Post a Comment