Thursday, June 18, 2020

ವಲಸೆ ಕಾರ್ಮಿಕರಿಗಾಗಿ ರೋಜಗಾರ್ ಅಭಿಯಾನ: ೫೦,೦೦೦ ಕೋಟಿ ರೂ

ವಲಸೆ ಕಾರ್ಮಿಕರಿಗಾಗಿ ರೋಜಗಾರ್ ಅಭಿಯಾನ: 
 ೫೦,೦೦೦ ಕೋಟಿ ರೂ

ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನ ಸಮಯದಲ್ಲಿ ತಮ್ಮ ಹುಟ್ಟೂರು/ ಮನೆಗಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ದೇಶದ ೧೧೬ ಜಿಲ್ಲೆಗಳಲಿ ಉದ್ಯೋಗ ಒದಗಿಸಲು ಗರಿಬ್ ಕಲ್ಯಾಣ್ ರೋಜಗಾರ್ ಅಭಿಯಾನದ ಅಡಿಯಲ್ಲಿ  ಒಟ್ಟುಗೂಡಿಲಾಗುವ ೨೫ ಯೋಜನೆಗಳಿಗೆ ಕೇಂದ್ರ ಸರ್ಕಾರವು ೫೦,೦೦೦ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದೆ. ಅಭಿಯಾನಕ್ಕೆ 2020 ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

" ೨೫ ಯೋಜನೆಗಳಿಗೆ ನಿಗದಿಪಡಿಸಿದ ಹಣವನ್ನು ಆದ್ಯತೆಯಲ್ಲಿ ಒದಗಿಸಲು ಮಾಡಲು ನಾವು ಬಯಸುತ್ತೇವೆ. ಇದರಿಂದ ಕಾರ್ಮಿಕರು ತಮ್ಮ ಕೆಲಸವನ್ನು ಪಡೆಯುತ್ತಾರೆ. ಗ್ರಾಮೀಣಾಭಿವೃದ್ಧಿಯ ಉದ್ದೇಶದಿಂದ ನಡೆಸಲಾಗುವ ಕಾಮಗಾರಿಗಳಲ್ಲಿ ಸ್ವತ್ತುಗಳನ್ನು ನಿರ್ಮಿಸಲಾಗುವುದುಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  2020 ಜೂನ್ 18ರ ಗುರುವಾರ ಹೇಳಿದರು.

" ೧೧೬ ಜಿಲ್ಲೆಗಳಲ್ಲಿ ಅಗತ್ಯವಿರುವ ಪ್ರತಿಯೊಬ್ಬರಿಗೂ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದ ಅಡಿಯಲ್ಲಿ ಕೆಲಸ ನೀಡಲಾಗುವುದು, ಯೋಜನೆಯ ಅಂದಾಜು ವೆಚ್ಚ ೫೦,೦೦೦ ಕೋಟಿ ರೂಪಾಯಿಗಳು. ಇದಕ್ಕಾಗಿ ನಿಗದಿಪಡಿಸಿದ ಹಣವನ್ನು ಆದ್ಯತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ" ಎಂದು ಸೀತಾರಾಮನ್ ಹೇಳಿದರು.

ಮನೆಗೆ ಮರಳಿದ ವಲಸೆ ಕಾರ್ಮಿಕರ ಕೌಶಲ್ಯಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ೧೧೬ ಜಿಲ್ಲೆಗಳು ವ್ಯಾಪಿಸಿವೆ.

"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯಗಳ ೧೧೬ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಳಿದ ವಲಸೆ ಕಾರ್ಮಿಕರ ಕೌಶಲ್ಯಗಳನ್ನು ನಿಖರವಾಗಿ ಗುರುತಿಸಿವೆಎಂದು ಸೀತಾರಾಮನ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೨೦ ರಂದು ಪ್ರಾರಂಭಿಸಲಿರುವ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನವು ಹುಟ್ಟೂರುಗಳಿಗೆ ಮರಳಿದ ಕಾರ್ಮಿಕರಿಗೆ ಅರ್ಥಪೂರ್ಣ ಉದ್ಯೋಗವನ್ನು ಒದಗಿಸುವ ಗುರಿ ಹೊಂದಿದೆ.

"೧೨೫ ದಿನಗಳಲ್ಲಿ, ೧೧೬ ಜಿಲ್ಲೆಗಳಿಗೆ, ಸರ್ಕಾರದ ಸುಮಾರು ೨೫ ಯೋಜನೆಗಳನ್ನು ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನದ ಅಡಿಯಲ್ಲಿ ತರಲಾಗುವುದು, ನಾವು ೧೨೫ ದಿನಗಳಲ್ಲಿ ಪ್ರತಿಯೊಂದು ಯೋಜನೆಗಳಲ್ಲೂ ಪೂರ್ಣತೆಯ ಮಟ್ಟವನ್ನು ತಲುಪುತ್ತೇವೆ. ಹುಟ್ಟೂರುಗಳಿಗೆ ವಾಪಸಾದ ಕಾರ್ಮಿಕರನ್ನು ಬಳಸಿಕೊಂಡು ಸೊತ್ತುಗಳನ್ನು ನಿರ್ಮಿಸಲಾಗುತ್ತದೆಎಂದು ವಿತ್ತ ಸಚಿವೆ ಹೇಳಿದರು.

ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ೨೫ ಸಾವಿರ ಕಾರ್ಮಿಕರು ಮನೆಗಳಿಗೆ ಮರಳಿದ್ದಾರೆ.

No comments:

Advertisement