ದೆಹಲಿಯಲ್ಲಿ
ಕೊರೋನಾ: ಕೇಂದ್ರ ಆಪ್ ಮುಸುಕಿನ ಗುದ್ದಾಟ
ನವದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕು ಸಮುದಾಯ ಪ್ರಸರಣ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರವು 2020 ಜೂನ್ 09ರ ಮಂಗಳವಾರ ಪ್ರತಿಪಾದಿಸಿತು. ಇದರ ಬೆನ್ನಲ್ಲೇ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನಿಶ್ ಸೊಸೋಡಿಯಾ ಅವರು ರಾಜಧಾನಿಯಲ್ಲಿ ಕೋವಿಡ್-೧೯ ಪ್ರಕರಣಗಳು ಯದ್ವಾತದ್ವ ಏರುತ್ತಿದ್ದು ಜುಲೈ ಅಂತ್ಯದ ವೇಳೆಗೆ ೫.೫ ಲಕ್ಷಕ್ಕೆ ಏರುವ ಸಾಧ್ಯತೆಗಳಿವೆ ಎಂದು ಹೇಳಿದರು.
ದೆಹಲಿ
ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಭೆಯ ಬಳಿಕ ವರದಿಗಾರರ ಜೊತೆಗೆ ಮಾತನಾಡಿದ ಸಿಸೋಡಿಯಾ ಜುಲೈ ೩೧ರ ವೇಳೆಗೆ ನಗರದಲ್ಲಿ ೫.೫ ಲಕ್ಷ
ಕೋವಿಡ್-೧೯ ಪ್ರಕರಣಗಳು ದಾಖಲಾಗುವ
ನಿರೀಕ್ಷೆ ಇದೆ ಎಂದು ಹೇಳಿದರು.
ದೆಹಲಿ
ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
’ಕೇಂದ್ರ
ಸರ್ಕಾರದ ಪ್ರತಿನಿಧಿಗಳು ದೆಹಲಿಯಲ್ಲಿ ಕೋವಿಡ್ -೧೯ ಸಮುದಾಯ ಪ್ರಸರಣ
ಆಗುತ್ತಿಲ್ಲ ಎಂದು ಸಭೆಯಲ್ಲಿ ಹೇಳಿದರು’ ಸಿಸೋಡಿಯಾ ನುಡಿದರು.
ದೆಹಲಿಯ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ದೆಹಲಿ ನಿವಾಸಿಗಳಿಗೆ ಮಾತ್ರವೇ ಮೀಸಲುಗೊಳಿಸುವಂತೆ ರಾಜ್ಯ ಸರ್ಕಾರ ಮಾಡಿದ್ದ ಆದೇಶವನ್ನು ರದ್ದು ಪಡಿಸಿದ ಕ್ರಮವನ್ನು ಪುನರ್ ಪರಿಶೀಲಿಸಲು ಲೆಪ್ಟಿನೆಂಟ್ ಗವರ್ನರ್ ನಿರಾಕರಿಸಿದರು ಎಂದೂ ಉಪಮುಖ್ಯಮಂತ್ರಿ ಹೇಳಿದರು.
ಇದಕ್ಕೆ
ಮುನ್ನ, ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಹೊಸದಾಗಿ ವರದಿಯಾಗುತ್ತಿರುವ ಪ್ರಕರಣಗಳ ಅರ್ಧದಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲ ಯಾವುದೆಂದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು.
ಜೂನ್
ಅಂತ್ಯದ ವೇಳೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚಬಹುದಾದ ಕೊರೋನಾ ಪ್ರಕರಣಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇಜ್ರಿವಾಲ್ ಸರ್ಕಾರವು ಈಗಾಗಲೇ ಸರ್ವ ಪ್ರಯತ್ನಗಳನ್ನು ಆರಂಭಿಸಿದೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಜೈನ್ ಹೇಳಿದ್ದರು.
ದೆಹಲಿಯು
ಕೊರೋನಾವೈರಸ್ ಸೋಂಕಿಗೆ ಸಂಬಂಧಿಸಿದಂತೆ ಸಮುದಾಯ ಪ್ರಸರಣದ ಹಂತಕ್ಕೆ ತಲುಪಿದೆಯೇ ಎಂಬ ಪ್ರಶ್ನೆಗೆ ’ಈ ಬಗ್ಗೆ ಕೇಂದ್ರ
ಸರ್ಕಾರವು ಘೋಷಣೆ ಮಾಡಿದೆ’ ಎಂದು ಅವರು ನುಡಿದರು.
"ಸಾಂಕ್ರಾಮಿಕ
ರೋಗಶಾಸ್ತ್ರೀಯವಾಗಿ, ಸಮುದಾಯ ಹರಡುವಿಕೆಯು ಸೋಂಕಿನ ಮೂರನೇ ಹಂತವಾಗಿದೆ ... ದೆಹಲಿಯಲ್ಲಿ, ಹೊಸ ಪ್ರಕರಣಗಳು ವರದಿಯಾಗುತ್ತಿವೆ, ಸುಮಾರು ಅರ್ಧದಷ್ಟು ಪ್ರಕರಣಗಳ ಸೋಂಕಿನ ಮೂಲ ತಿಳಿದಿಲ್ಲ"
ಎಂದು ಅವರು ಹೇಳಿದರು.
ರಾಷ್ಟ್ರ
ರಾಜಧಾನಿ ಸೋಮವಾರ ೧,೦೦೭ ಹೊಸ
ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ನಗರದಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ,
೨೯,೦೦೦ವನ್ನು ದಾಟಿದೆ. ರೋಗದ ಸಾವಿನ ಸಂಖ್ಯೆ ೮೭೪ ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರದ
ಕೋವಿಡ್ -೧೯ ಪರಿಸ್ಥಿತಿ ಮತ್ತು
ಭಯಭೀತಗೊಳಿಸುತ್ತಿರುವ ವೈರಸ್ ಪ್ರಸರಣದ ವಿಚಾರವೂ ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಚರ್ಚಿಸಲು ಬೈಜಾಲ್ ಅವರು ಸರ್ವಪಕ್ಷ ಸಭೆಯನ್ನೂ ಕರೆದಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳು ಕೇವಲ ಕಳವಳಕ್ಕೆ ಮಾತ್ರವಲ್ಲದೆ ರಾಜಕೀಯ ಮೇಲಾಟಕ್ಕೂ ನಾಂದಿ ಹಾಡಿದೆ, ರಾಷ್ಟ್ರ ರಾಜಧಾನಿಯಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ದೆಹಲಿ ನಿವಾಸಿಗಳಿಗೆ ಮೀಸಲಿಡಬೇಕೆಂದು ದೆಹಲಿಯನ್ನು ಆಳುತ್ತಿರುವ ಆಪ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ಲೆಫ್ಟಿನೆಂಟ್ ಗವರ್ನರ್ ಅವರು ಸೋಮವಾರ ರದ್ದುಪಡಿಸಿದ್ದಾರೆ.
No comments:
Post a Comment