Wednesday, June 17, 2020

ಗಲ್ವಾನ್ ಘರ್ಷಣೆ: ಚೀನಾಕ್ಕೆ ಮೋದಿ ಖಡಕ್ ಮಾತು

ಗಲ್ವಾನ್ ಘರ್ಷಣೆ: ಚೀನಾಕ್ಕೆ ಮೋದಿ ಖಡಕ್ ಮಾತು

ನವದೆಹಲಿ: ಭಾರತವು ಶಾಂತಿಯನ್ನು ಬಯಸಿದೆ ಆದರೆ ಪ್ರಚೋದಿಸಿದರೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಸ್ಪಷ್ಟ ಹಾಗೂ ತೀಕ್ಷ್ಣ ಸಂದೇಶವನ್ನು 2020 ಜೂನ್ 17ರ ಬುಧವಾರ ನೀಡಿದರು.

ಸೋಮವಾರ ಸಂಜೆ ಪೂರ್ವ ಲಡಾಕ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಗಡಿ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಚೊಚ್ಚಲ ಹೇಳಿಕೆ ಇದಾಗಿದೆ.

ಗಲ್ವಾನ್ ಕಣಿವೆಯಲ್ಲಿ ಸಾವನ್ನಪ್ಪಿದ ೨೦ ಸೈನಿಕರಿಗೆ ಗೌರವ ಸೂಚಕವಾಗಿ ಪ್ರಧಾನ ಮಂತ್ರಿಯವರು ಎರಡು ನಿಮಿಷಗಳ ಮೌನದೊಂದಿಗೆ ಕೊರೋನಾವೈರಸ್ ನಿಭಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆಗಿನ ತಮ್ಮ ಸಭೆಯನ್ನು ಆರಂಭಿಸಿದರು.

ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾಗಿದೆಎಂದು ಪ್ರಧಾನಿ ಮೋದಿ ಹೇಳಿದರು.

ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು.

ಪೂರ್ವ ಲಡಾಕ್ನಲ್ಲಿ ಸೋಮವಾರ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಸೇನೆಯ ಮಧ್ಯೆ ಕಲ್ಲು ತೂರಾಟ, ಸರಳುಗಳೊಂದಿಗೆ ಹೊಡೆದಾಟ ಕೂಡಾ ನಡೆಯಿತು. ಘರ್ಷಣೆಯ ನಂತರ, ಉಭಯ ಕಡೆಯವರು ಹೋರಾಟ ನಡೆದ ಸ್ಥಳದಿಂದ ಹಿಂದಕ್ಕೆ ಹೋದರು ಎಂದು  ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ.

ಮುಖಾಮುಖಿಯ ಬಳಿಕ ನಾಲ್ವರು ಭಾರತೀಯ ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದ ಕಡೆಯಲ್ಲಿ  ೪೩ ಸಾವು ನೋವುಗಳು ಸಂಭವಿಸಿವೆ ಎಂದು  ಸುದ್ದಿ ಸಂಸ್ಥೆಯ ವರದಿ ಹೇಳಿತು.

ಭಾರತದ ೨೦ ಸೈನಿಕರ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.

 "ಗಲ್ವಾನಿನಲ್ಲಿ ಆಗಿರುವ ಸೈನಿಕರ ನಷ್ಟವು ತುಂಬಾ ಆತಂಕ ಮತ್ತು ನೋವಿನ ಸಂಗತಿಯಾಗಿದೆ. ನಮ್ಮ ಸೈನಿಕರು ಕರ್ತವ್ಯ ನಿಷ್ಠೆಯಲ್ಲಿ ಅನುಕರಣೀಯವಾದ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಹುತಾತ್ಮರಾಗುವ ಮೂಲಕ ಭಾರತೀಯ ಸೇನೆಯ ಉನ್ನತ ಪರಂಪರೆಯನ್ನು ಮೆರೆದರುಎಂದು ಅವರು ಹೇಳಿಕೆಯಲ್ಲಿ ತಿಳಿಸಿದರು.

ರಾಷ್ಟ್ರವು ಹುತಾತ್ಮ ಯೋಧರ ಶೌರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ. ಹುತಾತ್ಮ ಸೈನಿಕರ ಕುಟುಂಬU ಜೊತೆಗೆ ನಾವಿದ್ದೇವೆ. ಕಷ್ಟದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತದೆ. ಭಾರತದ ಯೋಧರ ಧೈರ್ಯ ಮತ್ತು ಶೌರ್ಯದ  ಬಗ್ಗೆ ನಮಗೆ ಹೆಮ್ಮೆ ಇದೆಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

೧೯೭೫ರ ಅಕ್ಟೋಬರಿನಲ್ಲಿ ಅರುಣಾಚಲ ಪ್ರದೇಶದ ತುಲುಂಗ್ ಲಾ ಸೆಕ್ಟರ್ನಲ್ಲಿ ಚೀನಾದ ಸೈನಿಕರು ಭಾರತದ ನಾಲ್ವರು ಗಸ್ತು ನಿರತ  ಸೈನಿಕರನ್ನು ಹೊಡೆದುರುಳಿಸಿದ ನಂತರ ಪಿಎಲ್ ಜೊತೆಗಿನ ಗಡಿ ಚಕಮಕಿಯಲ್ಲಿ ಸಂಭವಿಸಿದ ಮೊದಲ ಭಾರತೀಯ ಸಾವುಗಳು ಇವು.

No comments:

Advertisement