ದೇಶದಲ್ಲಿ ಸೋಂಕೂ ಹೆಚ್ಚು, ಚೇತರಿಕೆಯೂ ಹೆಚ್ಚು
ನವದೆಹಲಿ: ಭಾರತವು ಗುರುವಾರ ಕೋವಿಡ್-೧೯ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಹೆಚ್ಚಳವನ್ನು ದಾಖಲಿಸಿದ್ದು, ೧೬,೦೦೦ ಕ್ಕೂ ಹೆಚ್ಚು ಕೊರೋನವೈರಸ್ ಸೋಂಕುಗಳನ್ನು ದಾಖಲಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೪.೭೩ ಲಕ್ಷಕ್ಕೆ ಏರಿದೆ. 2020 ಜೂನ್ 25ರ ಗುರುವಾರ ಒಂದೇ ದಿನ ಅತ್ಯಧಿಕ ಅಂದರೆ ೪೧೮ ರಷ್ಟು ದಾಖಲಾಗಿದೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.
ಕೊರೋನವೈರಸ್
ಪ್ರಕರಣಗಳು ೧೪,೦೦೦ ಕ್ಕಿಂತ
ಹೆಚ್ಚಾಗಿರುವುದು ಇದು ಸತತ ಆರನೇ ದಿನವಾಗಿದೆ. ಜೂನ್ ೨೦ ರಂದು ದೇಶವು
೧೪,೫೧೬ ಪ್ರಕರಣಗಳ ಹೆಚ್ಚಳ ದಾಖಲಿಸಿತ್ತು. ಜೂನ್ ೨೧ ರಂದು, ೧೫,೪೧೩ ಪ್ರಕರಣಗಳ ಹೆಚ್ಚಳವಾಗಿದೆ; ಜೂನ್ ೨೨ ರಂದು ೧೪,೮೨೧ ಪ್ರಕರಣಗಳು, ಜೂನ್ ೨೩ ರಂದು ೧೪,೯೩೩ ಪ್ರಕರಣಗಳು ಮತ್ತು ಜೂನ್ ೨೪ ರಂದು ೧೫,೯೬೮ ಪ್ರಕರಣಗಳು ದಾಖಲಾಗಿವೆ.
ಇದರ
ಪರಿಣಾಮವಾಗಿ, ಜೂನ್ ೨೦ ರಿಂದ ಭಾರತ
೯೨,೫೭೩ ಪ್ರಕರಣಗಳನ್ನು ಮತ್ತು ಜೂನ್ ೧ ರಿಂದ ಈ
ತಿಂಗಳು ೨.೮೨ ಲಕ್ಷ
ಪ್ರಕರಣಗಳನ್ನು ಸೇರಿಸಿದೆ.
ಗುರುವಾರ
ಬೆಳಿಗ್ಗೆ ೮ ಗಂಟೆಗೆ ನವೀಕರಿಸಿದ
ಆರೋಗ್ಯ ಸಚಿವಾಲಯದ ಮಾಹಿತಿಯು, ದಿನನಿತ್ಯದ ೧೬,೯೨೨ ಪ್ರಕರಣಗಳೊಂದಿಗೆ
ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ ೪,೭೩,೧೦೫ಕ್ಕೆ
ತಲುಪಿದೆ ಎಂದು ತೋರಿಸಿತು. ೪೧೮ ಹೊಸ ಸಾವುಗಳೊಂದಿಗೆ ಒಟ್ಟು ಸಾವುಗಳು ೧೪೮೮೪ ಕ್ಕೆ ಏರಿದವು.
ಆದಾಗ್ಯೂ,
ಮಾಹಿತಿಯ ಪ್ರಕಾರ, ಚೇತರಿಕೆ ಪ್ರಮಾಣವು ಶೇಕಡಾ ೫೭.೪೩ ಕ್ಕೆ
ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೧,೮೬,೫೧೪
ಆಗಿದ್ದು, ೨,೭೧,೬೯೬
ಜನರು ಚೇತರಿಸಿಕೊಂಡಿದ್ದಾರೆ.
ಐಸಿಎಂಆರ್
ಪ್ರಕಾರ, ಜೂನ್ ೨೪ ರವರೆಗೆ ಒಟ್ಟು
೭೫,೬೦,೭೮೨ ಮಾದರಿಗಳನ್ನು
ಪರೀಕ್ಷಿಸಲಾಗಿದ್ದು, ೨,೦೭,೮೭೧
ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಗಿದೆ.
ಹೊಸ
೪೧೮ ಸಾವುಗಳ ಪೈಕಿ, ಮಹಾರಾಷ್ಟ್ರzಲ್ಲಿ ೨೦೮, ದೆಹಲಿಯಲ್ಲಿ ೬೪, ತಮಿಳುನಾಡಿನಲ್ಲಿ ೩೩, ಗುಜರಾತಿನಲ್ಲಿ ೨೫,
ಕರ್ನಾಟಕದಲ್ಲಿ ೧೪, ಪಶ್ಚಿಮ ಬಂಗಾಳದಲ್ಲಿ ೧೧, ರಾಜಸ್ಥಾನ ಮತ್ತು ಹರಿಯಾಣದಲ್ಲಿ ತಲಾ ೧೦, ಮಧ್ಯಪ್ರದೇಶದಲ್ಲಿ ಒಂಬತ್ತು, ಉತ್ತರಪ್ರದೇಶದಲ್ಲಿ ತಲಾ ಎಂಟು ಮತ್ತು ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರಾಖಂಡದಲ್ಲಿ ತಲಾ ಐದು, ಬಿಹಾರ, ಗೋವಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಕೋವಿಡ್-೧೯ ಸಾವು ಸಂಭವಿಸಿದೆ
ಎಂದು ವರದಿ ತಿಳಿಸಿದೆ.
ಒಟ್ಟು
ಸಾವುನೋವುಗಳಲ್ಲಿ ೬,೭೩೯ ಸಾವುಗಳೊಂದಿಗೆ
ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ, ದೆಹಲಿ (೨,೩೬೫), ಗುಜರಾತ್
(೧,೭೩೫), ತಮಿಳುನಾಡು (೮೬೬), ಉತ್ತರ ಪ್ರದೇಶ (೫೯೬), ಪಶ್ಚಿಮ ಬಂಗಾಳ (೫೯೧), ಮಧ್ಯಪ್ರದೇಶ (೫೩೪), ರಾಜಸ್ಥಾನ ( ೩೭೫) ಮತ್ತು ತೆಲಂಗಾಣ (೨೨೫) ನಂತರದ ಸ್ಥಾನಗಳಲ್ಲಿ ಇವೆ.
ಕೋವಿಡ್-೧೯ ಸಾವಿನ ಸಂಖ್ಯೆ
ಹರಿಯಾಣದಲ್ಲಿ ೧೮೮, ಕರ್ನಾಟಕದಲ್ಲಿ ೧೬೪, ಆಂಧ್ರಪ್ರದೇಶದಲ್ಲಿ ೧೨೪, ಪಂಜಾಬ್ನಲ್ಲಿ ೧೧೩, ಜಮ್ಮು ಮತ್ತು ಕಾಶ್ಮೀರದಲ್ಲಿ ೮೮, ಬಿಹಾರದಲ್ಲಿ ೫೭, ಉತ್ತರಾಖಂಡದಲ್ಲಿ ೩೫, ಕೇರಳದಲ್ಲಿ ೨೨ ಮತ್ತು ಒಡಿಶಾದಲ್ಲಿ
೧೭ ಕ್ಕೆ ತಲುಪಿದೆ.
ಛತ್ತೀಸ್
ಗಢದಲ್ಲಿ ೧೨ ಸಾವು, ಜಾರ್ಖಂಡ್
೧೧, ಅಸ್ಸಾಂ ಮತ್ತು ಪುದುಚೇರಿ ತಲಾ ಒಂಬತ್ತು, ಹಿಮಾಚಲ ಪ್ರದೇಶ ಎಂಟು, ಚಂಡೀಗಡದಲ್ಲಿ ಆರು, ಗೋವಾ ಎರಡು ಮತ್ತು ಮೇಘಾಲಯ, ತ್ರಿಪುರ ಮತ್ತು ಲಡಾಖ್ ತಲಾ ಒಂದು ಸಾವು ಸಂಭವಿಸಿದೆ.
ಸಹ
ಆರೋಗ್ಯ ಸಮಸ್ಯೆಗಳಿಂದಾಗಿ ಶೇಕಡಾ ೭೦ ಕ್ಕೂ ಹೆಚ್ಚು
ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ
ಅತಿ ಹೆಚ್ಚು ಪ್ರಕರಣಗಳು ೧,೪೨,೯೦೦,
ದೆಹಲಿ ೭೦,೩೯೦, ತಮಿಳುನಾಡು
೬೭,೪೬೮, ಗುಜರಾತ್ ೨೮,೯೪೩, ಉತ್ತರ
ಪ್ರದೇಶ ೧೯,೫೫೭, ರಾಜಸ್ಥಾನ
೧೬,೦೦೯ ಮತ್ತು ಪಶ್ಚಿಮ ಬಂಗಾಳ ೧೫,೧೭೩ ಪ್ರಕರಣಗಳು
ದಾಖಲಾಗಿವೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೋವಿಡ್-೧೯ ಪ್ರಕರಣಗಳ ಸಂಖ್ಯೆ
ಮಧ್ಯಪ್ರದೇಶದಲ್ಲಿ ೧೨,೪೪೮, ಹರಿಯಾಣದಲ್ಲಿ
೧೨,೦೧೦, ತೆಲಂಗಾಣದಲ್ಲಿ ೧೦,೪೪೪, ಆಂಧ್ರಪ್ರದೇಶದಲ್ಲಿ
೧೦,೩೩೧ ಮತ್ತು ಕರ್ನಾಟಕದಲ್ಲಿ ೧೦,೧೧೮ ಪ್ರಕರಣಗಳಿಗೆ
ಏರಿದೆ.
ಇದು
ಬಿಹಾರದಲ್ಲಿ ೮,೨೦೯, ಜಮ್ಮು
ಮತ್ತು ಕಾಶ್ಮೀರದಲ್ಲಿ ೬,೪೨೨, ಅಸ್ಸಾಂನಲ್ಲಿ
೬,೧೯೮ ಮತ್ತು ಒಡಿಶಾದಲ್ಲಿ ೫,೭೫೨ ಕ್ಕೆ
ಏರಿದೆ. ಪಂಜಾಬ್ ಇದುವರೆಗೆ ೪,೬೨೭ ಕೊರೋನಾವೈರಸ್
ಸೋಂಕುಗಳನ್ನು ವರದಿ ಮಾಡಿದ್ದರೆ, ಕೇರಳದಲ್ಲಿ ೩,೬೦೩ ಪ್ರಕರಣಗಳು
ದಾಖಲಾಗಿವೆ.
ಉತ್ತರಾಖಂಡದಲ್ಲಿ
೨,೬೨೩ ಜನರು, ಛತ್ತೀಸ್ ಗಢದಲ್ಲಿ ೨,೪೧೯, ಜಾರ್ಖಂಡ್ನಲ್ಲಿ ೨,೨೦೭, ತ್ರಿಪುರಾದಲ್ಲಿ
೧,೨೫೯, ಮಣಿಪುರದಲ್ಲಿ ೯೭೦, ಗೋವಾದಲ್ಲಿ ೯೫೧, ಲಡಾಖ್ನಲ್ಲಿ ೯೪೧ ಮತ್ತು ಹಿಮಾಚಲ ಪ್ರದೇಶದಲ್ಲಿ ೮೦೬ ಜನರಿಗೆ ಈ ವೈರಸ್ ಸೋಂಕು
ತಗುಲಿದೆ.
ಪುದುಚೇರಿಯಲ್ಲಿ
೪೬೧ ಕೋವಿಡ್ -೧೯ ಪ್ರಕರಣಗಳು, ಚಂಡೀಗಢದಲ್ಲಿ
೪೨೦, ನಾಗಾಲ್ಯಾಂಡಿನಲ್ಲಿ ೩೪೭, ಅರುಣಾಚಲ ಪ್ರದೇಶದಲ್ಲಿ ೧೫೮ ಮತ್ತು ಮಿಜೋರಾಂನಲ್ಲಿ ೧೪೨ ಪ್ರಕರಣಗಳು ದಾಖಲಾಗಿವೆ.
ದಾದ್ರಾ
ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಒಟ್ಟಿಗೆ ೧೨೦ ಕೋವಿಡ್-೧೯ ಪ್ರಕರಣಗಳನ್ನು ವರದಿ
ಮಾಡಿವೆ.
ಸಿಕ್ಕಿಂನಲ್ಲಿ
೮೪, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈವರೆಗೆ ೫೬ ಸೋಂಕುಗಳನ್ನು ದಾಖಲಿಸಿದರೆ,
ಮೇಘಾಲಯದಲ್ಲಿ ೪೬ ಪ್ರಕರಣಗಳು ದಾಖಲಾಗಿವೆ.
ವಿಶ್ವಾದ್ಯಂತ
ಕೊರೋನಾವೈರಸ್ ಸೋಂಕಿತರು ೯೫,೬೬,೧೨೪,
ಸಾವು ೪,೮೫,೭೨೪
ಚೇತರಿಸಿಕೊಂಡವರು- ೫೨,೦೭,೯೨೯
ಅಮೆರಿಕ
ಸೋಂಕಿತರು ೨೪,೬೩,೯೨೩,
ಸಾವು ೧,೨೪,೩೦೮
ಸ್ಪೇನ್
ಸೋಂಕಿತರು ೨,೯೪,೧೬೬,
ಸಾವು ೨೮,೩೨೭
ಇಟಲಿ
ಸೋಂಕಿತರು ೨,೩೯,೪೧೦,
ಸಾವು ೩೪,೬೪೪
ಜರ್ಮನಿ
ಸೋಂಕಿತರು ೧,೯೩,೨೮೧,
ಸಾವು ೯,೦೦೩
ಚೀನಾ
ಸೋಂಕಿತರು ೮೩,೪೪೯, ಸಾವು
೪,೬೩೪
ಇಂಗ್ಲೆಂಡ್
ಸೋಂಕಿತರು ೩,೦೬,೮೬೨,
ಸಾವು ೪೩,೦೮೧
ಭಾರತ
ಸೋಂಕಿತರು ೪,೭೪,೫೮೭,
ಸಾವು ೧೪,೯೧೫
ಅಮೆರಿಕದಲ್ಲಿ ೨೭, ಇರಾನಿನಲ್ಲಿ ೧೩೪, ಬೆಲ್ಜಿಯಂನಲ್ಲಿ ೪, ಇಂಡೋನೇಷ್ಯ ೪೭, ನೆದರ್ ಲ್ಯಾಂಡ್ಸ್ನಲ್ಲಿ ೩, ರಶ್ಯಾದಲ್ಲಿ ೯೨, ಪಾಕಿಸ್ತಾನದಲ್ಲಿ ೧೪೮, ಮೆಕ್ಸಿಕೋದಲ್ಲಿ ೭೪೭, ಭಾರತದಲ್ಲಿ ೮, ಒಟ್ಟಾರೆ ವಿಶ್ವಾದ್ಯಂತ ೧,೭೪೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೨,೭೨,೬೩೬ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment