38,900 ಕೋಟಿ
ರೂ ವೆಚ್ಚ: ರಷ್ಯಾದಿಂದ
ಮಿಗ್ ಯುದ್ಧ ವಿಮಾನ ಖರೀದಿಗೆ
ನವದೆಹಲಿ: ೧೨ ಸು-೩೦ ಎಂಕೆಐ ಮತ್ತು ೨೧ ಮಿಗ್-೨೯ ವಿಮಾನಗಳು ಸೇರಿದಂತೆ ೩೩ ಹೊಸ ಯುದ್ಧ ವಿಮಾನಗಳನ್ನು ಖರೀದಿ ಮತ್ತು ೧೮,೧೪೮ ಕೋಟಿ ರೂಪಾಯಿ ವೆಚ್ಚದಲ್ಲಿ ೫೯ ಮಿಗ್-೨೯ ವಿಮಾನಗಳನ್ನು ನವೀಕರಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ 2020 ಜುಲೈ 02ರ ಗುರುವಾರ ಅನುಮೋದನೆ ನೀಡಿದೆ.
"ಭಾರತೀಯ
ವಾಯುಪಡೆಯ ತನ್ನ ಸಮರದಳಗಳನ್ನು ಹೆಚ್ಚಿಸುವ ದೀರ್ಘಕಾಲದ ಅಗತ್ಯವನ್ನು ತಿಳಿಸಿದ ಡಿಎಸಿ, ೨೧ ಮಿಗ್-೨೯
ಖರೀದಿ ಪ್ರಸ್ತಾಪವನ್ನು ಅಂಗೀಕರಿಸಿತು ಮತ್ತು ಬಳಕೆಯಲ್ಲಿರುವ ೫೯ ಮಿಗ್-೨೯
ವಿಮಾನಗಳನ್ನು ನವೀಕರಿಸುವುದು ಮತ್ತು ೧೨ ಸು-೩೦
ಎಂಕೆಐ ವಿಮಾನಗಳನ್ನು ಖರೀದಿಸುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯ ಬಳಿಕ ರಕ್ಷಣಾ ಸಚಿವಾಲಯ ಗುರುವಾರ ಹೇಳಿಕೆ ನೀಡಿತು.
ರಷ್ಯಾದಿಂದ
ಮಿಗ್-೨೯ ಖರೀದಿ ಮತ್ತು
ನವೀಕರಣಕ್ಕೆ ೭೪೧೮ ಕೋಟಿ, ಎಚ್‌ಎಎಲ್‌ನಿಂದ ರೂ. ಸು-೩೦ ಎಂಕೆಐ
ಖರೀದಿಗೆ ೧೦೭೩೦ ಕೋಟಿ ರೂ. ವೆಚ್ಚವಾಗಲಿದೆ.
ಲಡಾಖ್‌ನಲ್ಲಿನ
ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಮತ್ತು ಮತ್ತು ಚೀನೀ ಸೈನಿಕರ ಮಧ್ಯೆ ಹಲವಾರು ವಾರಗಳಿಂದ ಘರ್ಷಣೆ ನಡೆದಿದ್ದು, ಪ್ರಕ್ಷುಬ್ದತೆಯ ಸ್ಥಿತಿ ಇದೆ.
ಅಂದಾಜು
೩೮,೯೦೦ ಕೋಟಿ ರೂ. ವೆಚ್ಚದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಿವಿಧ ವೇದಿಕೆಗಳು ಮತ್ತು ಉಪಕರಣಗಳನ್ನು ಪಡೆದುಪಡಿಸಿಕೊಳ್ಳಲು ಡಿಎಸಿ ಅನುಮೋದನೆ ನೀಡಿತು.
ಭಾರತೀಯ
ವಾಯುಪಡೆ ಮತ್ತು ನೌಕಾಪಡೆಗಾಗಿ ೨೪೮ ಅಸ್ಟ್ರಾ ಬಿಯಾಂಡ್ ವಿಷುಯಲ್ ರೇಂಜ್ ಬಾನಿನಿಂದ ಬಾನಿಗೆ ಹಾರಬಲ್ಲ ಕ್ಷಿಪಣಿಗಳನ್ನು ಖರೀದಿಸಲು ಈ ಪ್ರಸ್ತಾವದಿಂದ ಅನುಮತಿ
ಲಭಿಸಿದೆ. ಡಿಆರ್‌ಡಿಒ ಹೊಸ ೧,೦೦೦ ಕಿಲೋಮೀಟರ್
ದೂರಕ್ಕೆ ದಾಳಿ ನಡೆಸಬಲ್ಲ ಭೂ ದಾಳಿ ಕ್ರೂಸ್
ಕ್ಷಿಪಣಿಯ ವಿನ್ಯಾಸ ಮತ್ತು ಅಭಿವೃದ್ಧಿಗೆ ಡಿಎಸಿ ಒಪ್ಪಿಗೆ ಕೊಟ್ಟಿದೆ.
"ಹೊಸ
/ ಹೆಚ್ಚುವರಿ ಕ್ಷಿಪಣಿ ವ್ಯವಸ್ಥೆಗಳ ಖರೀದಿಯು ಮೂರು ಸೇವೆಗಳ ಸಮರ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿನಾಕಾ ಕ್ಷಿಪಣಿ ವ್ಯವಸ್ಥೆಗಳ ಖರೀದಿಯಿಂದ ಈಗಾಗಲೇ ಇರುವ ರೆಜಿಮೆಂಟ್‌ಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಾಲಿ ಶಸ್ತ್ರಾಗಾರಕ್ಕೆ ೧೦೦೦ ಕಿ.ಮೀ.ನ
ಗುಂಡಿನ ವ್ಯಾಪ್ತಿಯನ್ನು ಹೊಂದಿರುವ ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ಷಿಪಣಿ ವ್ಯವಸ್ಥೆಗಳ ಸೇರ್ಪಡೆಯಿಂದ ನೌಕಾಪಡೆ ಮತ್ತು ವಾಯುಪಡೆಯ ಆಕ್ರಮಣ ಸಾಮರ್ಥ್ಯ ಹೆಚ್ಚುತ್ತದೆ. ಕಣ್ಣೋಟ ವಲಯದಾಚೆ ದಾಳಿ ನಡೆಸಬಲ್ಲ ಅಸ್ಟ್ರಾ ಕ್ಷಿಪಣಿಗಳ ಸೇರ್ಪಡೆ ನೌಕಾಪಡೆ ಮತ್ತು ವಾಯುಪಡೆಯ ದಾಳಿ ಸಾಮರ್ಥ್ಯವನ್ನು ಅಪಾರವಾಗಿ ಹೆಚ್ಚುತ್ತದೆ’ ಎಂದು
ಹೇಳಿಕೆ ತಿಳಿಸಿತು.
ಚೀನಾದ
ಪಡೆಗಳ ಯಾವುದೇ ಮಿಲಿಟರಿ ಪ್ರಚೋದನೆಯನ್ನು ಎದುರಿಸಲು ಐಎಎಫ್ ತನ್ನ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿದೆ
ಮತ್ತು ಮುಂಚೂಣಿಯ ನೆಲೆಗಳನ್ನು ಅತ್ಯುನ್ನತ ಸ್ಥಿತಿಯಲ್ಲಿರಲು ಆದೇಶಿಸಿದೆ. ಸುಖೋಯ್-೩೦ ಮತ್ತು ನವೀಕರಿಸಿದ
ಮಿಗ್-೨೯ ಫೈಟರ್ ಜೆಟ್‌ಗಳ
ಹೊರತಾಗಿ, ತೆಹ್ ಐಎಎಫ್ ಅಪಾಚೆ ಎಹೆಚ್ -೬೪ ಇ ದಾಳಿ
ಹೆಲಿಕಾಪ್ಟರ್‌ಗಳು ಮತ್ತು ಸಿಎಚ್ -೪೭ ಎಫ್ (ಐ)
ಚಿನೂಕ್ ಮಲ್ಟಿ-ಮಿಷನ್ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ.
ಪೀಪಲ್ ಲಿಬರೇಶನ್ ಆರ್ಮಿ-ಏರ್ ಫೋರ್ಸ್ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶ ಎರಡರಲ್ಲೂ ತನ್ನ ಹಲವಾರು ನೆಲೆಗಳನ್ನು ಸಕ್ರಿಯಗೊಳಿಸಿದ್ದರಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಪೂರ್ವ ಲಡಾಖ್‌ನಲ್ಲಿ ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿವೆ.
No comments:
Post a Comment