Monday, July 27, 2020

ಚೀನಾದ ಇನ್ನೂ 47 ಆಪ್ ನಿಷೇಧ

ಚೀನಾದ ಇನ್ನೂ 47 ಆಪ್ ನಿಷೇಧ

ಟಿಕ್ ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಔಟ್

ನವದೆಹಲಿ: ಟಿಕ್ ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್ವೈ ಲೈಟ್ ಸೇರಿದಂತೆ ಚೀನಾದ ೪೭ ಅಪ್ಲಿಕೇಷನ್‌ಗಳನ್ನು (ಆಪ್) ಕೇಂದ್ರ ಸರ್ಕಾರ 2020 ಜುಲೈ 27ರ ಸೋಮವಾರ ನಿಷೇಧಿಸಿತು.

ಚೀನಾದ ೫೯ ಆಪ್‌ಗಳನ್ನು ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಆಪ್‌ಗಳ ಮಾದರಿಯ ಮತ್ತಷ್ಟು ಅಪ್ಲಿಕೇಷನ್‌ಗಳನ್ನು ಇದೀಗ ನಿಷೇಧಿಸಲಾಗಿದೆ.

ಟಿಕ್ ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿ-ಚಾಟ್ ಸೇರಿದಂತೆ ೫೯ ಮೊಬೈಲ್ ಆಪ್‌ಗಳ ಮೇಲೆ ಜೂನ್ ೩೦ರಂದು ನಿಷೇಧ ಹೇರಲಾಗಿತ್ತು.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತಿದ್ದ ಕಾರಣ ಇವುಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿತ್ತು.

ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆ ಜತೆ ನಡೆದ ಸಂಘರ್ಷದ ಬಳಿಕ ಸರ್ಕಾರ ಕ್ರಮ ಕೈಗೊಂಡಿತ್ತು.

No comments:

Advertisement