5 ರಫೇಲ್ ಜೆಟ್
ಗಳು ಭಾರತದ ಹಾದಿಯಲ್ಲಿ
ನವದೆಹಲಿ: ಫ್ರಾನ್ಸಿನಿಂದ ಭಾರತದತ್ತ ಹೊರಟಿರುವ ಮೊದಲ ಕಂತಿನ ಐದು ರಫೇಲ್ ಯುದ್ಧ ವಿಮಾನಗಳಿಗೆ ಫ್ರೆಂಚ್ ವಾಯುಪಡೆಯ ಟ್ಯಾಂಕರಿನಿಂದ ಆಗಸದಲ್ಲೇ ೩೦,೦೦೦ ಅಡಿಗಳ ಎತ್ತರದಲ್ಲಿ ಮರುಇಂಧನ ಭರ್ತಿ ಮಾಡಲಾಗಿದ್ದು, ಆಗಸದಲ್ಲೇ ಇಂಧನ ಭರ್ತಿಮಾಡುವ ಚಿತ್ರಗಳನ್ನು ಫ್ರಾನ್ಸಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್ 2020 ಜುಲೈ 28ರ ಮಂಗಳವಾರ ಮಾಡಿತು.
’ಭಾರತಕ್ಕೆ
ಹೊರಟಿರುವ ನಮ್ಮ ಯುದ್ಧ ವಿಮಾನಗಳಿಗೆ ಫ್ರೆಂಚ್ ವಾಯುಪಡೆಯು ನೀಡಿರುವ ಬೆಂಬಲವನ್ನು ಭಾರತೀಯ ವಾಯುಪಡೆಯು ಶ್ಲಾಘಿಸುತ್ತದೆ’ ಎಂದು
ಭಾರತೀಯ ವಾಯುಪಡೆ ಟ್ವೀಟ್ ಮಾಡಿತು.
ಈ
ಐದು ಯುದ್ಧ ವಿಮಾನಗಳಲ್ಲಿ ೩ ವಿಮಾನಗಳು ಏಕ
ಆಸನ (ಸಿಂಗಲ್-ಸೀಟರ್) ವಿಮಾನವಾಗಿದ್ದರೆ, ಎರಡು ಅವಳಿ
ಆಸನಗಳ ವಿಮಾನಗಳಾಗಿವೆ.
ರಫೇಲ್
ಯುದ್ಧ ವಿಮಾನಗಳು ಎರಡು ಹಂತಗಳ ಹಾರಾಟದಲ್ಲಿ ೭೦೦೦ ಕಿಮೀ ಕ್ರಮಿಸಲಿವೆ. ಸೋಮವಾರ ಸಂಜೆ ಫ್ರಾನ್ಸ್‌ನಿಂದ ಹೊರಟ ಐವರು ಯೋಧರು ಏಳು ಗಂಟೆಗಳ ಹಾರಾಟದ ನಂತರ ಸುರಕ್ಷಿತವಾಗಿ ಅಲ್ ಧಫ್ರಾಕ್ಕೆ ಆಗಮಿಸಿದರು.
ಫ್ರೆಂಚ್
ವಾಯುಪಡೆಯು ತನ್ನ ಏರ್‌ಬಸ್ ಎ ೩೩೦ ಮಲ್ಟಿ-ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ (ಎಂಆರ್‌ಟಿಟಿ) ಮೂಲಕ ಅಲ್ ದಫ್ರಾಕ್ಕೆ ಹೋಗುವ ಮಾರ್ಗದಲ್ಲಿ ಭಾರತೀಯ ಯೋಧರಿದ್ದ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿತು. ಅಲ್ ಧಫ್ರಾದಿಂದ ಅಂಬಾಲಾವರೆಗಿನ ಪ್ರಯಾಣದ ಎರಡನೇ ಹಂತಕ್ಕೆ ಭಾರತೀಯ ವಾಯುಪಡೆಯ (ಐಎಎಫ್) ರಷ್ಯನ್ ಇಲ್ಯುಶಿನ್ -೭೮ ಇಂಧನ ತುಂಬು
ಮೂಲಕ ಬೆಂಬಲವನ್ನು ಒದಗಿಸಲಿದೆ.
ವಿಮಾನದ
ಬಗ್ಗೆ ಸಮಗ್ರ ತರಬೇತಿ ಪಡೆದ ಪೈಲಟ್‌ಗಳು ಜೆಟ್‌ಗಳನ್ನು ಹಾರಿಸುತ್ತಿದ್ದಾರೆ ಎಂದು ಐಎಎಫ್ ತಿಳಿಸಿದೆ. ಭಾರತಕ್ಕೆ ಬರುತ್ತಿರುವ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ’ಸ್ವರ್ಣ ಬಾಣಗಳು’
(ಗೋಲ್ಡನ್ ಏರ್ರೋಸ್) ಎಂಬುದಾಗಿ ಕರೆಯಲಾಗುವ ನಂ ೧೭ ಸ್ಕ್ವಾಡ್ರನ್ನಿನ
ಒಂದು ಭಾಗವಾಗಲಿದೆ, ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಸಿದ ಮೊದಲ ಐದು ರಫೇಲ್ ಯುದ್ಧ ವಿಮಾನಗಳೊಂದಿಗೆ ಭಾರತವು "ತನ್ನ ವಾಯು ಶಕ್ತಿ ಮತ್ತು ರಕ್ಷಣಾ ಸಿದ್ಧತೆಯನ್ನು ಬಲಪಡಿಸುವ ನಿಟ್ಟಿನಲ್ಲಿ’ ಮಹತ್ವದ
ಹೆಜ್ಜೆ ಇಟ್ಟಿದೆ.
ಬೋರ್ಡೆಕ್ಸ್‌ನ
ಮೆರಿಗ್ನಾಕ್ ವಾಯುನೆಲದಿಂದ ಯುದ್ಧ ವಿಮಾನಗಳು ಬಾನಿಗೇರಿದವು ಎಂದು ಫ್ರಾನ್ಸಿನ ಭಾರತೀಯ
ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿತು.
"ನಿಜವಾದ
ಸೌಂದರ್ಯ ಮತ್ತು ಪ್ರಾಣಿ!’ ಎಂದು ಬೋರ್ಡೆಕ್ಸ್‌ನಲ್ಲಿ ವಿಮಾನಗಳು ಹೊರಡುತ್ತಿದ್ದಾಗ ಫ್ರಾನ್ಸಿನಲ್ಲಿನ ಭಾರತೀಯ
ರಾಯಭಾರಿ ಜಾವೇದ್ ಅಶ್ರಫ್ ಬಣ್ಣಿಸಿದರು. "ಭಾರತಕ್ಕೆ ತ್ವರಿತ ವೇಗದ, ಸುಧಾರಿತ ಬಹುಮುಖ ಮಾರಕ ಶಕ್ತಿಯ ಐದು ರಫೇಲ್‌ಗಳು’
ಎಂದು ಅವರು ಹೇಳಿದರು.
"ಇದು
ಪ್ರಬಲವಾಗಿ ಬೆಳೆಯುತ್ತಿರುವ ಭಾರತ-ಫ್ರಾನ್ಸ್ ರಕ್ಷಣಾ ಸಹಕಾರದಲ್ಲಿನ ಹೊಸ ಮೈಲಿಗಲ್ಲನ್ನು ಸೂಚಿಸುತ್ತದೆ" ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿತು.
ಹೊಸ ವಿಮಾನಗಳು, ಜೂನ್ ೧೯೯೭ ರಲ್ಲಿ ರಷ್ಯಾದ ಸುಖೋಯ್ -೩೦ ಜೆಟ್‌ಗಳು ಸೇವೆಗೆ ಪ್ರವೇಶಿಸಿದ ೨೩ ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿರುವ ಮೊದಲ ಜೆಟ್‌ಗಳಾಗಿದ್ದು, ಐಎಎಫ್‌ನ ಆಕ್ರಮಣಕಾರಿ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
No comments:
Post a Comment