Saturday, July 11, 2020

ಕೋವಿಡ್: ರಿಯಲ್ ಟೈಮ್ ರಾಷ್ಟ್ರೀಯ ನಿಗಾ, ಮೋದಿ ನಿರ್ದೇಶನ

ಕೋವಿಡ್: ರಿಯಲ್ ಟೈಮ್ ರಾಷ್ಟ್ರೀಯ ನಿಗಾ, ಮೋದಿ ನಿರ್ದೇಶನ

ನವದೆಹಲಿ: ಭಾರತ ಒಕ್ಕೂಟದ ಎಲ್ಲ ಕೋವಿಡ್-೧೯ ಸಂತ್ರಸ್ಥ ರಾಜ್ಯಗಳಿಗೆ ರಾಷ್ಟ್ರೀಯ ಮಟ್ಟದ ರಿಯಲ್ ಟೈಮ್ ನಿಗಾ ಮತ್ತು ಮಾರ್ಗದರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು 2020 ಜುಲೈ 11ರ ಶನಿವಾರ ನಿರ್ದೇಶನ ನೀಡಿದರು.

ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯ ಸ್ಥಿತಿಗತಿ ಬಗ್ಗೆ ನಡೆದ ಪುನರ್ ಪರಿಶೀಲನಾ ಸಭೆಯಲ್ಲಿ ಮಧ್ಯಪ್ರವೇಶ ಮಾಡಿದ ಪ್ರಧಾನಿ ನಿರ್ದೇಶನ ಕೊಟ್ಟರು.

ದೆಹಲಿಯಲ್ಲಿ ಸಾಂಕ್ರಾಮಿಕವನ್ನು ಹತೋಟಿಯಲ್ಲಿ ಇಡಲು ಅಧಿಕಾರಿಗಳು ಕೈಗೊಂಡಿರುವ ಸಮನ್ವಯಿತ ಪ್ರಯತ್ನಗಳನ್ನೂ ಪ್ರಧಾನಿ ಸಂದರ್ಭದಲ್ಲಿ  ಶ್ಲಾಘಿಸಿದರು ಮತ್ತು ಇದೇ ಮಾದರಿಯ ಕಾರ್ಯತಂತ್ರವನ್ನು ನೆರೆಯ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ನ್ಯಾಷನಲ್ ಕ್ಯಾಪಿಟಲ್ ರೀಜನ್ -ಎನ್ ಸಿಆರ್) ಅನುಸರಿಸುವಂತೆ ಸೂಚಿಸಿದರು.

ದೆಹಲಿಯಲ್ಲಿ  ಸಾಂಕ್ರಾಮಿಕವನ್ನು ಹತೋಟಿಯಲ್ಲಿ ಇಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ಒಗ್ಗೂಡುವಿಕೆಯ ಪ್ರಯತ್ನಗಳನ್ನು ಪ್ರಧಾನಿ ಮೆಚ್ಚಿದರು. ಇದೇ ಮಾದರಿಯ ಕಾರ್ಯತಂತ್ರವನ್ನು ಸಂಪೂರ್ಣ ಎನ್ಸಿಆರ್ನಲ್ಲಿ ಅನುಸರಿಸುವಂತೆ ಇತರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದರು ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿತು.

ಪುನರ್ ಪರಿಶೀಲನಾ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್, ನೀತಿ ಆಯೋಗದ ಸದಸ್ಯರು, ಸಂಪುಟ ಕಾರ್ಯದರ್ಶಿ ಮತ್ತು ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ರಾಷ್ಟ್ರದ ವಿವಿಧ ಭಾಗಗಳ ಪರಿಸ್ಥಿತಿಯನ್ನು ಗಮನಿಸುವ ವೇಳೆಯಲ್ಲಿ ಪ್ರಧಾನಿಯವರು ವೈಯಕ್ತಿಕ ಶುಚಿತ್ವ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಶಿಸ್ತು ಪಾಲಿಸಬೇಕಾದ ಅಗತ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದರು.

ಕೋವಿಡ್ ಬಗ್ಗೆ ಹೊಸದಾಗಿ ತಿಳುವಳಿಕೆ ಅಭಿಯಾನಗಳನ್ನು ನಡೆಸುವ ಮೂಲಕ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಮತ್ತು  ಸೋಂಕು ಹರಡದಂತೆ ಮುಂಚಿತವಾಗಿಯೇ ತಡೆಯುವ ವಿಧಾನಗಳ ಬಗ್ಗೆ ಜನರಿಗೆ ತಿಳಿಸಬೇಕು. ನಿಟ್ಟಿನಲ್ಲಿ ಯಾವುದೇ ಅಸಡ್ಡೆಯಾಗಲೀ, ಸಾಧಿಸಿದ್ದೇವೆಂದು ಸಮಾಧಾನ ಪಟ್ಟುಕೊಳ್ಳುವುದಾಗಲೀ ಸಲ್ಲದು ಎಂದು ಪ್ರಧಾನಿ ಹೇಳಿದರು.

 ಧನ್ವಂತರಿ ರಥ ಮೂಲಕ ಗೃಹ ಆಧಾರಿತ ಎಚ್ಚರಿಕೆ ವಹಿಸಿದ ಮತ್ತು  ನಿಗಾ ಕ್ರಮU ಮೂಲಕ ರೋಗವನ್ನು ಹತೋಟಿಯಲ್ಲಿ ಇಡುವಲ್ಲಿ ಸಾಧಿಸಲಾದ ಅಹ್ಮದಾಬಾದ್ ಮಾದರಿಯ ಯಶಸ್ಸನ್ನು ಸಭೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಿ ಅಭಿನಂದಿಸಲಾಯಿತು. ಇತರ ಸ್ಥಳಗಳಲ್ಲೂ ಇದನ್ನು ಅನುಸರಿಸಬೇಕು ಎಂದು ಸಲಹೆ ಮಾಡಲಾಯಿತು.

ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಲಕ್ಷ ಪ್ರಕರಣಗಳನ್ನು ದಾಟಿದ ದಿನವೇ ಪುನರ್ ಪರಿಶೀಲನಾ ಸಭೆ ನಡೆದಿದೆ. ಶನಿವಾರ ಒಂದೇ ದಇನ ಭಾರತದಲ್ಲಿ ೨೭,೧೧೪ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪ್ರಕರಣಗಳು ಏಳು ಲಕ್ಷದಿಂದ ಎಂಟು ಲಕ್ಷಕ್ಕೆ ಕೇವಲ ನಾಲ್ಕು ದಿನಗಳಲ್ಲಿ ಏರಿದ್ದು ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಶನಿವಾರ ಬೆಳಗಿನವರೆಗಿನ ಅಂಕಿಸಂಖ್ಯೆಗಳ ಪ್ರಕಾರ ಭಾರತದಲ್ಲಿ ದಾಖಲಾಗಿರುವ ಕೊರೋನಾವೈರಸ್ ಪ್ರಕರಣಗಳ  ಒಟ್ಟು ಸಂಖ್ಯೆ ,೨೦,೯೧೬. ಇದರಲ್ಲಿ ೨೨,೧೨೩ ಸಾವಿನ ಸಂಖ್ಯೆಗಳೂ ಸೇರಿವೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೦೦ಕ್ಕೂ ಹೆಚ್ಚು ರೋಗಿಗಳು ಅಸು ನೀಗಿದ್ದಾರೆ.

ಪ್ರತಿದಿನ ೨೨,೦೦೦ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೇಶದಲ್ಲಿ ಸತತವಾಗಿ ದಾಖಲಾಗುತ್ತಿರುವುದು ಇದು ಎಂಟನೇ ದಿನ ಎಂದು ಅಂಕಿಸಂಖ್ಯೆಗಳು ಸೂಚಿಸಿವೆ.

No comments:

Advertisement