ಹಿರಿಯರು,
ಕೋವಿಡ್ ರೋಗಿಗಳಿಗೆ ಅಂಚೆ ಮತದಾನ
ಸೌಲಭ್ಯ
ನವದೆಹಲಿ: ೬೫ ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು ಕೊರೋನಾವೈರಸ್ ಸೋಂಕಿತ ಅಥವಾ ಸೋಂಕು ತಗುಲಿದೆ ಎಂಬ ಶಂಕೆಗೆ ಒಳಗಾದ ವ್ಯಕ್ತಿಗಳಿಗೆ ಚುನಾವಣೆಗಳಲ್ಲಿ ಅಂಚೆ ಮೂಲಕ ಮತದಾನ (ಪೋಸ್ಟಲ್ ಬ್ಯಾಲೆಟ್) ಮಾಡಲು ಸರ್ಕಾರ 2020 ಜುಲೈ 02ರ ಗುರುವಾರ ಅನುಮತಿ ನೀಡಿತು. ಈ ಸಂಬಂಧ ೧೯೬೧ರ ಚುನಾವಣಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.
ಕೋರೋನಾವೈರಸ್
ಸೋಂಕಿನ ಲಘು ಲಕ್ಷಣಗಳಿರುವ ಮತು ಯಾವುದೇ ವೈದ್ಯಕೀಯ ಸವಲತ್ತು ಕೇಂದ್ರದಲ್ಲಿ ಇರದೆ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾದ ವ್ಯಕ್ತಿಗಳು ಕೂಡಾ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಲವಾರು
ಆರೋಗ್ಯ ಮಾರ್ಗಸೂಚಿಗಳು ೬೫ ವರ್ಷ ದಾಟಿದ
ಜನರಿಗೆ ಮನೆಯಿಂದ ಹೊರಕ್ಕೆ ಹೋಗದಂತೆ ಸೂಚನೆ ನೀಡಿವೆ. ನಿರ್ದಿಷ್ಟವಾಗಿ ಈ
ವಯಸ್ಸಿನ ವ್ಯಕ್ತಿಗಳು ಬಹುಬೇಗನೆ ಅಂಟುವ ಕೊರೋನಾವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದು ಮಾರ್ಗಸೂಚಿಗಳು ಹೇಳಿವೆ.
ಬಿಹಾರ
ಚುನಾವಣೆಗಳಿಗೆ ಮುಂಚಿತವಾಗಿ ಚುನಾವಣಾ ನಿಯಮಗಳಿಗೆ ಈ ತಿದ್ದುಪಡಿಗಳನ್ನು ತರಲಾಗಿದೆ. ಕೊರೋನಾವೈರಸ್
ಸಾಂಕ್ರಾಮಿಕವು ರಾಜಕೀಯ
ಚಟುವಟಿಕೆಗಳನ್ನು ಬಹುತೇಕ ಸ್ಥಗಿತಗೊಳಿಸಿದೆ.
ಈ
ಹಿಂದಿನ ನಿಯಮಾವಳಿಗಳ ಪ್ರಕಾರ ಸಶಸ್ತ್ರ ಪಡೆಗಳು ಮತ್ತು ಚುನಾವಣಾ ಕರ್ತವ್ಯಗಳಲ್ಲಿ ನಿಯೋಜಿತರಾದ ಅಧಿಕಾರಿಗಳಿಗೆ ಮಾತ್ರವೆ ಅಂಚೆ ಮೂಲಕ ಮತದಾನ ಮಾಡುವ ಸೌಲಭ್ಯವಿತ್ತು.
ಫೆಬ್ರುವರಿಯಲ್ಲಿ ತೀವ್ರ
ಅಸ್ವಸ್ಥರಾದವರು ಅಥವಾ ೮೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ
ಅಂಚೆ ಮೂಲಕ ಮತದಾನದ ಅವಕಾಶ ಕಲ್ಪಿಸುವ ಪ್ರಯೋಗವನ್ನು ಪ್ರಪ್ರಥಮ
ಬಾರಿಗೆ ದೆಹಲಿ ರಾಜ್ಯದಲ್ಲಿ ಮಾಡಲಾಗಿತ್ತು.
೯ ರಾಜ್ಯಗಳಲ್ಲಿ ತೆರವಾಗಿದ್ದ ೧೯ ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ಚುನಾವಣೆಗಳನ್ನು ಕೋವಿಡ್ -೧೯ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಬಳಿಕ ಜೂನ್ ತಿಂಗಳಲ್ಲಿ ಈ ಚುನಾವಣೆಗಳನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಸ್ವಸ್ಥ ಸದಸ್ಯರಿಗೆ ಅಂಚೆ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು.
No comments:
Post a Comment