Wednesday, July 8, 2020

ಇನ್ನೂ ಮೂರು ತಿಂಗಳು ಇಪಿಎಫ್ ಸಡಿಲಿಕೆ: ಕೇಂದ್ರ ಅಸ್ತು

ಇನ್ನೂ ಮೂರು ತಿಂಗಳು ಇಪಿಎಫ್ ಸಡಿಲಿಕೆ: ಕೇಂದ್ರ ಅಸ್ತು

ನವದೆಹಲಿ: ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನೌಕರರ ಭವಿಷ್ಯನಿಧಿ ಅಡಿಯಲ್ಲಿ ಪಾವತಿ ಮಾಡಲಾಗುವ ಶೇಕಡಾ ೧೨ರಷ್ಟು ನೌಕರರ ಪಾಲು ಮತ್ತು ಶೇಕಡಾ ೧೨ರಷ್ಟು ಮಾಲೀಕರ ಪಾಲು ಸೇರಿದಂತೆ ಒಟ್ಟು ಶೇಕಡಾ ೨೪ರಷ್ಟು ವಂತಿಗೆಗೆ ಸಂಬಂಧಿಸಿದಂತೆ ನೀಡಲಾದ ರಿಯಾಯ್ತಿಯನ್ನು ಜೂನ್ ತಿಂಗಳಿನಿಂದ ಆಗಸ್ಟ್ವರೆಗೆ ಮುಂದಿನ ಮೂರು ತಿಂಗಳುಗಳಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು 2020 ಜುಲೈ 8ರ ಬುಧವಾರ ಅನುಮೋದನೆ ನೀಡಿತು.

ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯ (ಪಿಎಂಜಿಕೆವೈ) ಅಡಿಯಲ್ಲಿ ಸರ್ಕಾರ ಪ್ರಕಟಿಸಿದ ಕೊಡುಗೆಯ ವಿವಿಧ ಕ್ರಮಗಳನ್ನು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ವಿವರಿಸಿದರು.

ಮಾಸಿಕ ೧೫,೦೦೦ ರೂಪಾಯಿಗಳಿಗಿಂತ ಕಡಿಮೆ ವೇತನ ಪಡೆಯುವ ಶೇಕಡಾ ೯೦ರಷ್ಟು ನೌಕರರು ಮತ್ತು ೧೦೦ ಮಂದಿಯವರೆಗೆ ನೌಕರರು ಇರುವ ಸಂಸ್ಥೆಗಳಲ್ಲಿ ನೌಕರರು ಪಡೆಯುವ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ವೇತನಗಳಿಗೆ ಯೋಜನೆ ಅನ್ವಯವಾಗಲಿದೆ.

.೬೭ ಲಕ್ಷ ಸಂಸ್ಥೆಗಳಲ್ಲಿ ಕೆಲಸ ಮಾಡುವ ೭೨.೨೨ ಲಕ್ಷ ಕಾರ್ಮಿಕರು ಕೇಂದ್ರ ಸಚಿವ ಸಂಪುಟದ ನಿರ್ಣಯದಿಂದ ಅನುಕೂಲ ಪಡೆಯಲಿದ್ದು ಅಸ್ತವ್ಯಸ್ತತೆಯ ಹೊರತಾಗಿಯೂ ವೇತನ ಪಟ್ಟಿಯಲ್ಲಿ ಮುಂದುವರೆಯಲಿದ್ದಾರೆ. ಉದ್ದೇಶಕ್ಕಾಗಿ ಸರ್ಕಾರವು ೨೦೨೧ರ ಸಾಲಿನಲ್ಲಿ ,೮೦೦ ಕೋಟಿ ರೂಪಾಯಿ ಮೊತ್ತದ ಮುಂಗಡಪತ್ರ ಹಂಚಿಕೆ ಮಾಡಲಿದೆ.

ಪ್ರಧಾನ ಮಂತ್ರಿ ರೋಜಗಾರ್ ಪ್ರೋತ್ಸಾಹನ್ ಯೋಜನಾ (ಪಿಎಂಆರ್ಪಿವೈ) ಅಡಿಯಲ್ಲಿ ಜೂನ್ನಿಂದ ಆಗಸ್ಟ್ ತಿಂಗಳವರೆಗಿನ ತಿಂಗಳುಗಳಲ್ಲಿ ಉದ್ಯೋಗದಾತರ ಪಾಲಿನ ಶೇಕಡಾ ೧೨ರಷ್ಟು ವಂತಿಗೆಗೆ ಅರ್ಹರಾಗಿರುವ  ಫಲಾನುಭವಿಗಳನ್ನು ಯೋಜನೆಯ ಲಾಭವು ಒಂದರ ಮೇಲೊಂದಾಗದಂತೆ ನೋಡಿಕೊಳ್ಳುವ ಸಲುವಾಗಿ ಹೊರಗಿಡಲಾಗುವುದು.

ಸುದೀರ್ಘ ಲಾಕ್ ಡೌನ್ ಪರಿಣಾಮವಾಗಿ ಕೆಲಸ ಪುನಾರಂಭಿಸಿದ್ದರೂ, ವ್ಯವಹಾರ ಸಂಸ್ಥೆಗಳು ಇನ್ನೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆತ್ಮ ನಿರ್ಭರ ಭಾರತದ ಅಂಗವಾಗಿ ಮೇ ೧೫ರಂದು ವ್ಯವಹಾರ ಸಂಸ್ಥೆಗಳಿಗೆ ಮತ್ತು ಕಾರ್ಮಿಕರಿಗೆ ಇಪಿಎಫ್ ಬೆಂಬಲವನ್ನು ಪ್ರಕಟಿಸಿದ್ದರು. ಈಗ ಅದನ್ನು ೨೦೨೦ರ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ವೇತನಕ್ಕೂ ವಿಸ್ತರಿಸಲಾಗಿದೆ.

ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಯೋಜನೆಯ ಅಡಿಯಲ್ಲಿ ೨೦೨೦ರ ಜುಲೈಯಿಂದ ನವೆಂಬರ್ವರೆಗಿನ ಐದು ತಿಂಗಳುಗಳಲ್ಲಿ ಹೆಚ್ಚುವರಿ ಆಹಾರ ಧಾನ್ಯವನ್ನು ಹಂಚಿಕೆ ಮಾಡಲು ಅವಕಾಶ ಕಲ್ಪಿಸುವ ಸಲುವಾಗಿ ಯೋಜನೆಯ ವಿಸ್ತರಣೆಗೂ ಸಂಪುಟವು ಒಪ್ಪಿಗೆ ನೀಡಿತು ಎಂದು ಜಾವಡೇಕರ್ ನುಡಿದರು.

ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಡವರು ಮತ್ತು ಅಗತ್ಯ ಉಳ್ಳವರಿಗಾಗಿ ಜೂನ್ ೩೦ರಂದು ಮೊತ್ತ ಮೊದಲಿಗೆ ಪ್ರಕಟಿಸಿದ್ದರು.

ಯೋಜನೆಯ ಅಡಿಯಲ್ಲಿ ಈವರೆಗೆ ಏಪ್ರಿಲ್ ತಿಂಗಳಲ್ಲಿ ೭೪. ಕೋಟಿ, ಮೇ ತಿಂಗಳಲ್ಲಿ ೭೪.೭೫ ಕೋಟಿ ಮತ್ತು ಜೂನ್ ತಿಂಗಳಲ್ಲಿ ೬೪.೭೨ ಕೋಟಿ ಫಲಾನುಭವಿಗಳಿಗೆ ಯೋಜನೆಯ ಲಾಭ ಲಭಿಸಿದೆ.

ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಯೋಜನೆಯ ಅಡಿಯಲ್ಲಿನ ಲಾಭಗಳನ್ನು ಪಡೆಯುವ ಕಾಲ ಮಿತಿಯನ್ನು ಉಜ್ವಲ ಫಲಾನುಭವಿಗಳಿಗೂ ೨೦೨೦ರ ಜುಲೈ ೧ರಿಂದ ಜಾರಿಯಾಗುವಂತೆ ಮೂರು ತಿಂಗಳುಗಳಿಗೆ ವಿಸ್ತರಿಸಲೂ ಕೇಂದ್ರ ಸಂಪುಟ ಒಪ್ಪಿಗೆ ನೀಡಿತು.

ಸಾರ್ವಜನಿಕ ರಂಗದ ಮೂರು ಸಾಮಾನ್ಯ ವಿಮಾ ಕಂಪೆನಿಗಳಾದ ಓರಿಯಂಟಲ್ ಇನ್ಶ್ಯೂರೆನ್ಸ್ ಕಂಪೆನಿ ಲಿಮಿಟೆಡ್, ನ್ಯಾಷನಲ್ ಇನ್ ಶ್ಯೂರೆನ್ಸ್ ಕಂಪೆನಿ ಲಿಮಿಟೆಡ್ ಮತ್ತು ಯುನೈಟೆಡ್ ಇಂಡಿಯಾ ಇನ್ಶ್ಯೂರೆನ್ಸ್  ಕಂಪೆನಿ ಲಿಮಿಟೆಡ್ ಇವುಗಳಿಗೆ ೨೦೧೯-೨೦ರ ಸಾಲಿನಲ್ಲಿ ಒದಗಿಸಿದ ೨೫೦೦ ಕೋಟಿ ರೂಪಾಯಿ ಬಂಡವಾಳ ಸೇರಿದಂತೆ ೧೨,೪೫೦ ಕೋಟಿ ರೂಪಾಯಿ ಬಂಡವಾಳ ಒದಗಿಸಲೂ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ಜಾವಡೇಕರ್ ನುಡಿದರು.

No comments:

Advertisement