೪೦೦ ಕೋಟಿ ಡಾಲರ್ ಹೂಡಿಕೆ: ರಿಲಯನ್ಸಿಗೆ ಗೂಗಲ್ ಬಲ
ನವದೆಹಲಿ: ಭಾರತದ ಸಂಘಟಿತ ವ್ಯಾಪಾರೀ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಡಿಜಿಟಲ್ ವಿಭಾಗಕ್ಕೆ ಆಲ್ಫಾಬೆಟ್ ಇಂಟರ್‌ನ್ಯಾಷನಲ್ ಕಾರ್ಪೋರೇಷನ್‌ನ (ಐಎನ್‌ಸಿ) ಗೂಗಲ್ ೪ ಶತಕೋಟಿ (೪ ಬಿಲಿಯನ್) ಡಾಲರ್ ಹೂಡಿಕೆ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್ 2020 ಜುಲೈ 14ರ ಮಂಗಳವಾರ ವರದಿ ಮಾಡಿತು.
ಮುಂದಿನ ಕೆಲವು ವಾರಗಳಲ್ಲಿ ಈ ಕುರಿತ ಪ್ರಕಟಣೆ ಬರಬಹುದು ಎಂದು ವರದಿ ತಿಳಿಸಿತು.
ವರದಿ ಬಗ್ಗೆ ಪ್ರತಿಕ್ರಿಯಿಸಲು ಗೂಗಲ್ ನಿರಾಕರಿಸಿದೆ, ರಿಲಯನ್ಸ್ ಪ್ರತಿಕ್ರಿಯೆ ಕೋರಿಕೆಗೆ ತತ್ ಕ್ಷಣ ಪ್ರತಿಕ್ರಿಯಿಸಿಲ್ಲ.
ಫೇಸ್‌ಬುಕ್ ಮತ್ತು ಕೆಕೆಆರ್ ಅಂಡ್ ಕೋ ಸೇರಿದಂತೆ ಹಲವಾರು ಹೂಡಿಕೆದಾರರು ಈಗಾಗಲೇ ಕೇವಲ ಶೇಕಡಾ ೨೫ರಷ್ಟು ಜಿಯೋ ವೇದಿಕೆUಳಿಗೆ ಒಟ್ಟು ೧೫.೬೪ ಬಿಲಿಯನ್ (೧೫೬೪ ಕೋಟಿ) ಡಾಲರುಗಳನ್ನು ಸುರಿದಿದ್ದಾರೆ.
ಏಪ್ರಿಲ್ ಅಂತ್ಯದಲ್ಲಿ ಪ್ರಾರಂಭವಾದ ಧನಸಹಾಯ ಪ್ರಕ್ರಿಯೆ ಮತ್ತು ರಿಲಯನ್ಸ್‌ನ ಷೇರು ಮಾರಾಟವು ಮಾರುಕಟ್ಟೆ ಮೌಲ್ಯದ ನಿವ್ವಳ-ಸಾಲದಿಂದ ಮುಕ್ತಗೊಳಿಸಿ ಭಾರತದ ಅತಿದೊಡ್ಡ ಕಂಪನಿಯಾಗಲು ರಿಲಯನ್ಸ್‌ಗೆ ಸಹಾಯ ಮಾಡಿದೆ.
ಮುಂದಿನ ಐದು ರಿಂದ ಏಳು ವರ್ಷಗಳಲ್ಲಿ ಈಕ್ವಿಟಿ ಹೂಡಿಕೆ ಮತ್ತು ಸಹಯೋಗಗಳ ಮೂಲಕ ಭಾರತದಲ್ಲಿ ಸುಮಾರು ೧೦ ಶತಕೋಟಿ (ಬಿಲಿಯನ್) ಡಾಲರ್ ಮೊತ್ತದ ಹಣವನ್ನು ಭಾರತದಲ್ಲಿ ಡಿಜಿಟಲೀಕರಣಕ್ಕಾಗಿ ಖರ್ಚು ಮಾಡುವುದಾಗಿ ಗೂಗಲ್ ಸಿಇಒ ಸುಂದರ ಪಿಚೈ ಅವರು ಪ್ರಕಟಿಸಿದ ಒಂದು ದಿನದ ನಂತರ ಬಂದಿರುವ ಈ ವರದಿಯು ಪ್ರಮುಖ ಬೆಳವಣಿಗೆಯ ಮಾರುಕಟ್ಟೆ ಜೊತೆಗಿನ ಅದರ ದೊಡ್ಡ ಬದ್ಧತೆಯಾಗಿದೆ ಎಂದು ಪರಿಗಣಿಸಲಾಗಿದೆ.
ರಿಲಯನ್ಸ್ ಷೇರುಗಳು ಮಂಗಳವಾರ ಬೆಳಗ್ಗೆ ವಹಿವಾಟು ಕುಸಿತದ ಹಿನ್ನೆಲೆಯಲ್ಲಿ ಶೇಕಡಾ ೦.೭ರಷ್ಟು ನಷ್ಟ ಅನುಭವಿಸಿದೆ. ವಿಶಾಲ ಮಾರುಕಟ್ಟೆ ಶೇಕಡಾ ೧.೬೮ರಷ್ಟು ಕುಸಿದಿದೆ.
No comments:
Post a Comment