Thursday, July 30, 2020

ನಮ್ಮ ಅಭಿವೃದ್ಧಿ ನೆರವು ಷರತ್ತು ರಹಿತ: ಪ್ರಧಾನಿ ಮೋದಿ

ನಮ್ಮ ಅಭಿವೃದ್ಧಿ

ನವದೆಹಲಿ: ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರ ಜೊತೆಗೆ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು 2020 ಜುಲೈ 30ರ ಗುರುವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ನೆರೆಹೊರೆಯ ದೇಶಗಳಿಗೆ ಅವುಗಳ ಆದ್ಯತೆಗೆ ಅನುಗುಣವಾಗಿ ನೀಡುವ ಅಭಿವೃದ್ಧಿ ನೆರವು ಯಾವುದೇ ಷರತ್ತು ರಹಿತವಾದದ್ದು ಎಂದು ಸ್ಪಷ್ಟ ಪಡಿಸಿದರು.

ಷರತ್ತು ರಹಿತವಾಗಿ ಅಭಿವೃದ್ಧಿ ನೆರವು ನೀಡುವುದು ಭಾರತದ ದಾಖಲೆಯಾಗಿದೆ ಎಂದು, ಅಭಿವೃದ್ಧಿ ಸಹಕಾರದಲ್ಲಿ ತೊಡಗಿರುವ ಇತರ ನೆರೆಹೊರೆ ದೇಶಗಳನ್ನು ಉಲ್ಲೇಖಿಸದೆಯೇ ಪ್ರಧಾನಿ ಹೇಳಿದರು. ತನ್ಮೂಲಕ ಪ್ರಧಾನಿಯವರು ಭಾರತೀಯ ನೆರವು ಮತ್ತು ದೇಶಗಳನ್ನು ಸಾಲದ ಬಲೆಯಲ್ಲಿ ಕೆಡವುತ್ತಿರುವ ಚೀನಾ ಬೆಂಬಲಿತ ಯೋಜನೆಗಳ ನೆರವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದರು.

ರ್ಚುವಲ್ ಸಮಾರಂಭದಲ್ಲಿ ಮಾತನಾಡಿದ ಮೋದಿ, ’ಅಭಿವೃದ್ಧಿ ನಿಟ್ಟಿನಲ್ಲಿ ಭಾರತದ ನಡೆಯು ಮಾನವ ಕೇಂದ್ರಿತವಾಗಿದೆ ಮತ್ತು ಅದರ ಅಭಿವೃದ್ಧಿ ಪಾಲುದಾರಿಕೆಗಳು ರಾಷ್ಟ್ರಗಳ ಗೌರವ, ವೈವಿಧ್ಯತೆ, ಭವಿಷ್ಯದ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟಿವೆಎಂದು ಹೇಳಿದರು.

ಭಾರತಕ್ಕೆ ಸಂಬಂಧಿಸಿದಂತೆ, ಅಭಿವೃದ್ಧಿ ಸಹಕಾರದ ಅತ್ಯಂತ ಮೂಲಭೂತ ತತ್ವವೆಂದರೆ ನಮ್ಮ ಪಾಲುದಾರರನ್ನು ಗೌರವಿಸುವುದು. ಅಭಿವೃದ್ಧಿ ಪಾಠಗಳ ಹಂಚಿಕೊಳ್ಳುವಿಕೆ ನಮ್ಮ ಏಕೈಕ ಪ್ರೇರಣೆಎಂದು ಮೋದಿ ನುಡಿದರು.

"ಹೀಗಾಗಿಯೇ ನಮ್ಮ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತುಗಳೊಂದಿಗೆ ಬರುವುದಿಲ್ಲ. ಇದು ರಾಜಕೀಯ ಅಥವಾ ವಾಣಿಜ್ಯ ಪರಿಗಣನೆಗಳಿಂದ ಪ್ರಭಾವಿತವಾಗುವುದಿಲ್ಲಎಂದು ಪ್ರಧಾನಿ ಹೇಳಿದರು.

ಹಿಂದೂ ಮಹಾಸಾಗರ ಪ್ರದೇಶದಲ್ಲಿ, ಸೌಲಭ್ಯವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಚೀನಾ ನೀಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣಕ್ಕಾಗಿ ಶ್ರೀಲಂಕೆಯು ೨೦೧೭ ರಲ್ಲಿ ತನ್ನ ಆಯಕಟ್ಟಿನ ಹಂಬಂಟೋಟಾ ಬಂದರನ್ನು ಚೀನಾದ ಸಂಸ್ಥೆಗೆ ೯೯ ವರ್ಷಗಳ ಅವಧಿಗೆ ಗುತ್ತಿಗೆ ನೀಡಬೇಕಾಗಿ ಬಂದಿತ್ತು. ಹಿಂದಿನ ಆಡಳಿತವು ಚೀನಾದಿಂದ ತೆಗೆದುಕೊಂಡ ಬೃಹತ್ ಸಾಲಗಳನ್ನು ನಿಭಾಯಿಸಲು ಮಾಲ್ಡೀವ್ಸ್ ಹಾಲಿ ಸರ್ಕಾರವು ಭಾರತದ ಸಹಾಯವನ್ನು ಕೋರಿದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿಎಲ್ಲರಿಗಾಗಿ ಭದ್ರತೆ ಮತ್ತು ಬೆಳವಣಿಗೆ (ಸಾಗರ್)’ ಎಂಬುದು ತಮ್ಮ  ಸರ್ಕಾರದ ದೃಷ್ಟಿಕೋನ ಎಂದು ಮೋದಿ ವಿಷದ ಪಡಿಸಿದರು. ‘ನಮ್ಮ ಅಭಿವೃದ್ಧಿ ಪಾಲುದಾರಿಕೆಗಳು ನಮ್ಮ ಪಾಲುದಾರ ರಾಷ್ಟ್ರಗಳ ಅಭಿವೃದ್ಧಿ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆಎಂದು ಅವರು ಹೇಳಿದರು.

ಭಾರತವು ಪ್ರಸ್ತುತಕ್ಕೆ ಸಹಾಯವನ್ನು ನೀಡುವುದಲ್ಲದೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ, ಇದಕ್ಕಾಗಿ ತರಬೇತಿ ಮತ್ತು ಕೌಶಲ್ಯವು ಅಭಿವೃದ್ಧಿ ಸಹಕಾರದ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು. ಇದು ಭಾರತದ ಪಾಲುದಾರ ರಾಷ್ಟ್ರಗಳಲ್ಲಿ ಭವಿಷ್ಯದ ಪೀಳಿಗೆಗೆ ಸ್ವಾವಲಂಬಿ ಮತ್ತು ಹೆಚ್ಚು ವಿಶ್ವಾಸವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದ ಸಂಸತ್ ಕಟ್ಟಡ, ನೈಜರ್ ಮಹಾತ್ಮ ಗಾಂಧಿ ಸಮಾವೇಶ ಕೇಂದ್ರ, ನೇಪಾಳದ ತುರ್ತು ಮತ್ತು ಆಘಾತ ಆಸ್ಪತ್ರೆ, ಮತ್ತು ಶ್ರೀಲಂಕೆಯ ಎಲ್ಲ ಒಂಬತ್ತು ಪ್ರಾಂತ್ಯಗಳಲ್ಲಿ ತುರ್ತು ಆಂಬ್ಯುಲೆನ್ಸ್ ಸೇವೆಗಳು ಸೇರಿದಂತೆ ಭಾರತವು ಅಭಿವೃದ್ಧಿ ಸಹಭಾಗಿತ್ವದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕೈಗೆತ್ತಿಕೊಂಡ ಮತ್ತು ಪೂರ್ಣಗೊಂಡ ಯೋಜನೆಗಳ ಬಗ್ಗೆ ಮೋದಿ ವಿವರಿಸಿದರು.

ನೇಪಾಳದೊಂದಿಗೆ ಜಾರಿಗೆ ತರಲಾಗುತ್ತಿರುವ ತೈಲ ಪೈಪ್ಲೈನ್ ಯೋಜನೆಯು ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮತ್ತೊಂದು ಯೋಜನೆಯು ಮಾಲ್ಡೀವ್ಸ್ ೩೪ ದ್ವೀಪಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಒದಗಿಸುತ್ತದೆ. "ಕ್ರೀಡಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸಲು ಸಹಾಯ ಮಾಡುವ ಮೂಲಕ ಅಫ್ಘಾನಿಸ್ತಾನ ಮತ್ತು ಗಯಾನಾದಂತಹ ದೇಶಗಳಲ್ಲಿ ವೈವಿಧ್ಯಮಯ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲು ನಾವು ಪ್ರಯತ್ನಿಸಿದ್ದೇವೆ" ಎಂದು ಮೋದಿ ಹೇಳಿದರು.

ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟದಂತಹ ಸಂಸ್ಥೆಗಳ ಮೂಲಕ ಭಾರತವು ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸುತ್ತಿದೆ. "ಎರಡೂ ಉಪಕ್ರಮಗಳು ದ್ವೀಪ ದೇಶಗಳಿಗೆ ವಿಶೇಷ ಪ್ರಸ್ತುತತೆಯನ್ನು ಹೊಂದಿವೆ" ಎಂದು ಅವರು ಹೇಳಿದರು.

ಪೋರ್ಟ್ ಲೂಯಿಸ್ನಲ್ಲಿನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವು ೨೮.೧೨ ಮಿಲಿಯನ್ ಡಾಲರ್ (೨೮.೧೨ ಕೋಟಿ) ಡಾಲರ್ ಅನುದಾನದ ಸಹಾಯದಿಂದ ನಿರ್ಮಿಸಲ್ಪಟ್ಟಿದೆ, ಇದು ಭಾರತ ಒದಗಿಸಿದ ೩೫೩ ಮಿಲಿಯನ್ (೩೫.೩೦ ಕೋಟಿ) ಡಾಲರ್ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜಿನ ಭಾಗವಾಗಿದೆ.

೨೭೫ ಮಿಲಿಯನ್ (೨೭.೫೦ ಕೋಟಿ) ಡಾಲರ್ ಮೌಲ್ಯದ ಮೆಟ್ರೊ ಎಕ್ಸ್ಪ್ರೆಸ್ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದೆ, ೧೪ ಮಿಲಿಯನ್ (.೪೦ ಕೋಟಿ ) ಡಾಲರ್ ಮೊತ್ತದ ಇಎನ್ಟಿ ಆಸ್ಪತ್ರೆ ಪೂರ್ಣಗೊಂಡಿದೆ ಮತ್ತು ಸುಮಾರು ,೦೦೦ ಘಟಕಗಳನ್ನು ಹೊಂದಿರುವ ಸಾಮಾಜಿಕ ವಸತಿ ಯೋಜನೆ ಪ್ಯಾಕೇಜ್ ಅಡಿಯಲ್ಲಿ ಕೈಗೊಂಡ ಇತರ ಮೂಲಸೌಕರ್ಯ ಯೋಜನೆಗಳು ಎಂದು ಪ್ರಧಾನಿ ಹೇಳಿದರು.

ಮಾರಿಷಸ್ಗೆ ಭಾರತವು ಅತಿದೊಡ್ಡ ಅಭಿವೃದ್ಧಿ ಪಾಲುದಾgನಾಗಿದ್ದು, ಇದಕ್ಕಾಗಿ ೬೦೦ ಮಿಲಿಯನ್ (೬೦ ಕೋಟಿ) ಡಾಲರ್  ಮೌಲ್ಯದ ಸಾಲವನ್ನು ರಿಯಾಯಿತಿ ದರದಲ್ಲಿ ಒದಗಿಸಿದೆ. ಆರೋಗ್ಯ ಸೌಲಭ್ಯಗಳಾದ ಮೂತ್ರಪಿಂಡ ಘಟಕ, ನಾಲ್ಕು ವೈದ್ಯಕೀಯ ಚಿಕಿತ್ಸಾಲಯಗಳು ಮತ್ತು ಎರಡು ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಭಾರತ ನೆರವು ನೀಡುತ್ತಿದೆ.

ಕೋವಿಡ್ -೧೯ ಸಾಂಕ್ರಾಮಿಕದ ಸಮಯದಲ್ಲಿ ಒಗ್ಗಟ್ಟಾಗಿರುವುದಕ್ಕಾಗಿ ಜುಗ್ನಾಥ್ ತಮ್ಮ ಭಾಷಣದಲ್ಲಿ ಸರ್ಕಾರ ಮತ್ತು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಭಾರತವು ಸರಬರಾಜು ಮಾಡಿದ ಔಧಗಳು ಮತ್ತು ವೈದ್ಯಕೀಯ ಸಲಕರಣೆಗಳಿಂದ ಮಾರಿಷಸ್ ಪ್ರಯೋಜನ ಪಡೆದಿದೆ ಮತ್ತು ಮೂರು ವಾರಗಳ ಕಾಲ ವೈದ್ಯಕೀಯ ತಂಡವನ್ನು ಭಾರತೀಯ ಯುದ್ಧನೌಕೆ ಐಎನ್ಎಸ್ ಕೇಸರಿಯಲ್ಲಿ ನಿಯೋಜಿಸಲಾಗಿತ್ತು ಎಂದು ಅವರು ಹೇಳಿದರು.

ಹೊಸ ಸುಪ್ರೀಂ ಕೋರ್ಟ್ ಕಟ್ಟಡವು ಮಾರಿಷಸ್ ಮೂಲಸೌಕರ್ಯಗಳ ಆಧುನೀಕರಣದ ಒಂದು ಮೈಲಿಗಲ್ಲು. ನ್ಯಾಯಾಂಗವು ಎಲ್ಲರಿಗೂ ನ್ಯಾಯವನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹೊಸ ತಂತ್ರಜ್ಞಾನಗಳನ್ನು ಬಳಸಲು ಇದರಿಂದ  ಸಾಧ್ಯವಾಗುತ್ತದೆ. ಪ್ರಕರಣಗಳನ್ನು ಆಲಿಸಲು ನ್ಯಾಯಾಧೀಶರು ಹಳೆಯ ಕಟ್ಟಡದಲ್ಲಿ ಸೀಮಿತ ಸಂಖ್ಯೆಯ ನ್ಯಾಯಾಲಯ ಕೊಠಡಿಗಳನ್ನು ಬಳಸಲು ಕಾಯಬೇಕಾಗಿತ್ತು ಎಂದು ಮಾರಿಷಸ್ ನಾಯಕ ಹೇಳಿದರು.

No comments:

Advertisement