Monday, July 20, 2020

ಅಯೋಧ್ಯಾ ರಾಮಮಂದಿರ: ಭೂಮಿ ಪೂಜೆಗೆ ಭರದ ಸಿದ್ಧತೆ

ಅಯೋಧ್ಯಾ ರಾಮಮಂದಿರ: ಭೂಮಿ ಪೂಜೆಗೆ ಭರದ ಸಿದ್ಧತೆ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ  ನಿರ್ಮಾಣಕ್ಕೆ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ಅಯೋಧ್ಯಾ ಮಂದಿರದ ಅರ್ಚಕರು ಹೇಳಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೂಡಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು 2020 ಜುಲೈ 20ರ ಸೋಮವಾರ ತಿಳಿಸಿದವು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರಿಗೂ ಆಹ್ವಾನಗಳನ್ನು ಕಳುಹಿಸಲಾಗಿದೆ. ಪಟ್ಟಿಯಲ್ಲಿ ಇತರ ಮುಖ್ಯಮಂತ್ರಿಗ ಜೊತೆಗೆ ನಿತೀಶ್ ಕುಮಾರ್ ಹೆಸರ ಕೂಡಾ ಇದೆ. ಒಟ್ಟಾರೆಯಾಗಿ, ಸುಮಾರು ೩೦೦ ಜನರಿಗೆ ಆಹ್ವಾನವನ್ನು ಕಳುಹಿಸುವ ಸಾಧ್ಯತೆಯಿದೆ.

ಆಗಸ್ಟ್ ರಿಂದ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಮೂರು ದಿನಗಳ ವೈದಿಕ ಆಚರಣೆಗಳೊಂದಿಗೆ ನಡೆಯುವ ಸಮಾರಂಭದ ವಿಸ್ತಾರವಾದ ಯೋಜನೆಯನ್ನು ಅರ್ಚಕರು ಸಿದ್ಧಪಡಿಸಿದ್ದಾರೆ. ಬಳಿಕ ಆಗಸ್ಟ್ ರಂದು ರಾಮಚಾರ್ಯ ಪೂಜೆಮತ್ತು ಆಗಸ್ಟ್ ರಂದು ಭೂಮಿ ಪೂಜೆನಡೆಯಲಿದೆ. ಭೂಮಿ ಪೂಜೆಯು ಮಧ್ಯಾಹ್ನ ೧೨.೧೫ರ ವೇಳೆಗೆ ನಡೆಯಲಿದೆ.

ಪ್ರಧಾನಿ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಯೋಧ್ಯೆ ಮತ್ತು ರಾಮ ಮಂದಿರ ನೀಡುತ್ತಿರುವ ಮೊದಲ ಭೇಟಿ ಇದು. ಫೆಬ್ರವರಿ ರಂದು ಪ್ರಧಾನಿಯವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆ ಘೋಷಿಸಿದ್ದರು.

ಭೂಮಿ ಪೂಜೆಸಮಾರಂಭದಲ್ಲಿ ಗರ್ಭಗೃಹದೊಳಗೆ ಐದು ಬೆಳ್ಳಿ ಇಟ್ಟಿಗೆಗಳನ್ನು ಸ್ಥಾಪಿಸಲಾಗುವುದು. ಮೊದಲನೆಯದನ್ನು ಪ್ರಧಾನಿ ಮೋದಿ ಇಡಲಿದ್ದಾರೆ. ಐದು ಇಟ್ಟಿಗೆಗಳು ಹಿಂದೂ ಪುರಾಣದ ಪ್ರಕಾರ ಐದು ಗ್ರಹಗಳನ್ನು ಸಂಕೇತಿಸುತ್ತವೆ ಎಂದು ನಂಬಲಾಗಿದೆ. ದೇವಾಲಯದ ವಿನ್ಯಾಸ ಮತ್ತು ವಾಸ್ತುಶಿಲ್ಪವು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರಸ್ತಾಪಿಸಿದಂತೆಯೇ ಇರುತ್ತದೆ. ವಿನ್ಯಾಸವು ವಿಷ್ಣು ದೇವಾಲಯದ ನಾಗರ ಶೈಲಿಯನ್ನು ಅನುಸರಿಸುತ್ತದೆ ಮತ್ತು ಗರ್ಭ ಗೃಹಅಷ್ಟ ಭುಜಾಕೃತಿಯಾಗಿರುತ್ತದೆ.

ಆದಾಗ್ಯೂ, ಹಿಂದಿನ ಮಾದರಿಗೆ ಹೋಲಿಸಿದರೆ, ಉದ್ದ, ಅಗಲ ಮತ್ತು ಎತ್ತರವನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಹಿಂದೆ ಕಲ್ಪಿಸಲಾದ ಮೂರರ ಬದಲು ಐದು ಗುಮ್ಮಟಗಳು ಇರುತ್ತವೆ. ದೇವಾಲಯದ ಒಟ್ಟು ವಿಸ್ತೀರ್ಣ ೭೬,೦೦೦ ರಿಂದ ೮೪,೦೦೦ ಚದರ ಅಡಿಗಳಷ್ಟಿದೆ. ಮೊದಲು ಇದು ಸುಮಾರು ೩೮,೦೦೦ ಚದರ ಅಡಿ ಎಂದು ಅಂದಾಜಿಸಲಾಗಿತ್ತು.

ರಾಮಮಂದಿರ ಚಳವಳಿಯೊಂದಿಗೆ ಶಿವಸೇನೆಯ ಮೂರು ದಶಕಗಳ ಒಡನಾಟವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನವನ್ನು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ವಿಶೇಷವೆಂದರೆ, ಉದ್ಧವ್ ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಅವರನ್ನು ವಿವಾದಾತ್ಮಕ Pಟ್ಟಡ ಧ್ವಂಸಗೊಳಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲಾಗಿತ್ತು. ಆದರೆ ಮರಣದ ನಂತರ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿತ್ತು.

ವರ್ಷದ ಮಾರ್ಚ್ ತಿಂಗಳಲ್ಲಿ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿ ರಾಮಮಂದಿರ ನಿರ್ಮಾಣಕ್ಕೆ ಕೋಟಿ ರೂ.ಗಳ ನೆರವು ಘೋಷಿಸಿದ್ದರು. ತಮ್ಮ ಪಕ್ಷವಾದ ಶಿವಸೇನೆಯು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದಿದ್ದರೂ ಹಿಂದುತ್ವಕ್ಕೆ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದರು.

No comments:

Advertisement