Thursday, July 23, 2020

ಚೇತರಿಕೆಯಲ್ಲಿ ದಾಖಲೆ, ೨೯,೫೫೭ ಮಂದಿ ಒಂದೇದಿನ ಗುಣಮುಖ

ಚೇತರಿಕೆಯಲ್ಲಿ ದಾಖಲೆ, ೨೯,೫೫೭ ಮಂದಿ ಒಂದೇದಿನ ಗುಣಮುಖ

ನವದೆಹಲಿ: ಒಂದೇ ದಿನದಲ್ಲಿ ೨೯,೫೫೭ ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಚೇತರಿಸುವುದರೊಂದಿಗೆ ಭಾರತವು ಕೋವಿಡ್-೧೯ ಚೇತರಿಕೆಯಲ್ಲಿ 2020 ಜುಲೈ 23ರ ಗುರುವಾರ ದಾಖಲೆ ನಿರ್ಮಿಸಿದೆ. ಒಟ್ಟು ಸೋಂಕಿತರ ಪೈಕಿ ,೮೨,೬೦೬ ಮಂದಿ ಚೇತರಿಸಿದ್ದು, ಚೇತರಿಕೆ ಪ್ರಮಾಣ ಶೇಕಡಾ ೬೩.೧೮ಕ್ಕೆ ಏರಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ ದೇಶದಲ್ಲಿ ಈಗ ,೫೬ಮ೪೩೯ ಸಕ್ರಿಯ ಕೊರೋನಾವೈರಸ್ ಪ್ರಕರಣಗಳು ಇವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೨,೩೮,೬೩೫.

ದೇಶದಲ್ಲಿ ಕೋವಿಡ್-೧೯ ಪತ್ತೆಗಾಗಿ ನಡೆಸಲಾಗುತ್ತಿರುವ ಪರೀಕ್ಷೆಗಳ ಪ್ರಮಾಣವನ್ನೂ ಹೆಚ್ಚಿಸಲಾಗಿದ್ದು ಒಟ್ಟು ೧೫ ಮಿಲಿಯನ್ (೧೫೦ ಲಕ್ಷ) ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಜುಲೈ ೨೨ ರವರೆಗೆ ಒಟ್ಟು ,೫೦,೭೫,೩೬೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ,೫೦,೮೨೩ ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿಗಳು ತಿಳಿಸಿದ್ದಾರೆ.

"ಬುಧವಾರದವರೆಗೆ ಮೂರು ದಿನಗಳಲ್ಲಿ ಒಂದು ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ ಸುಮಾರು ಲಕ್ಷಕ್ಕೆ ಹೆಚ್ಚಿಸಲಾಗಿದೆಎಂದು ಐಸಿಎಂಆರ್ ವಿಜ್ಞಾನಿ ಮತ್ತು ಮಾಧ್ಯಮ ಸಂಯೋಜಕ ಲೋಕೇಶ್ ಶರ್ಮಾ ಹೇಳಿದರು.

"ಚೇತರಿಸಿಕೊಂಡ ಒಟ್ಟು ಪ್ರಕರಣಗಳ ಸಂಖ್ಯೆ ,೮೨,೬೦೬ ಕ್ಕೆ ಏರಿದ್ದು, ಚೇತರಿಕೆ ಪ್ರಮಾಣದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ, ಇದು ಶೇಕಡಾ ೬೩.೧೮ ರಷ್ಟಿದೆ" ಎಂದು ಸಚಿವಾಲಯ ತಿಳಿಸಿತು.

ಸಾಧನೆಗೆ ಕೇಂದ್ರ ಸರ್ಕಾರದ ನೇತೃತ್ವದ ಕೋವಿಡ್ -೧೯ ನಿರ್ವಹಣಾ ತಂತ್ರಗಳು ಕಾರಣ ಎಂದು ಅದು ಹೇಳಿತು.

ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿ) ನಿರಂತರ ಪ್ರಯತ್ನಗಳು, ಹೆಚ್ಚು ಪರಿಣಾಮಕಾರಿಯಾದ ನಿಯಂತ್ರಣ, ಆಕ್ರಮಣಕಾರಿ ಪರೀಕ್ಷೆ ಮತ್ತು ತ್ವರಿತ ಮತ್ತು ಪರಿಣಾಮಕಾರಿ ಕ್ಲಿನಿಕಲ್ ಚಿಕಿತ್ಸಾ ತಂತ್ರUಳು ಕೋವಿಡ್ ನಿಯಂತ್ರಣಕ್ಕೆ ಕಾರಣವಾಗಿವೆ.

ಜಂಟಿ ನಿಗಾ ತಂಡದಂತಹ (ಜೆಎಂಜಿ) ಆರೋಗ್ಯ ಸಚಿವಾಲಯದ ಡೊಮೇನ್ ತಜ್ಞರ ತಂಡಗಳು ಇವುಗಳಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ಏಮ್ಸ್-ನವದೆಹಲಿಯ ತಾಂತ್ರಿಕ ತಜ್ಞರು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಐಸಿಎಂಆರ್ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಗಳು (ಎನ್ ಸಿಡಿಸಿ) ಪೂರಕವಾಗಿ ಕಾರ್ ನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರವು ಹೊಸ ದೆಹಲಿಯ ಏಮ್ಸ್ ನೇತೃತ್ವದ ದೂರ ಸಮಾಲೋಚನೆ (ಟೆಲಿ-ಕನ್ಸಲ್ಟೇಶನ್) ಕಾರ್ಯಕ್ರಮದ ಮೂಲಕ ರಾಜ್ಯಗಳಲ್ಲಿನ ಪ್ರಕರಣಗಳ ಹೆಚ್ಚಳ ಮತ್ತು ಕೋವಿಡ್ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ತಜ್ಞರ ತಂಡಗಳನ್ನು ಕಳುಹಿಸುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಮನ್ವಯ ಸಾಧಿಸುತ್ತಿದೆ.

" ಸಂಯೋಜಿತ ಪ್ರಯತ್ನಗಳು ಪ್ರಕರಣಗಳ ಮರಣ ಪ್ರಮಾಣ ಕಡಿಮೆಗೊಳಿಸಲು ಕಾರಣವಾಗಿವೆ. ದೇಶದಲ್ಲಿ ಪ್ರಸ್ತುತ ಮರಣ ಪ್ರಮಾಣ ಶೇಕಡಾ .೪೧ ರಷ್ಟಿದ್ದು, ಇದು ಸ್ಥಿರವಾಗಿ ಕುಸಿಯುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

೪೫,೭೨೦ ಹೊಸ ಪ್ರಕರಣಗಳೊಂದಿಗೆ ಭಾರತದ ಕೋವಿಡ್ -೧೯ ಸಂಖ್ಯೆ ಗುರುವಾರ ೧೨ ಲಕ್ಷದ ಗಡಿ ದಾಟಿದೆ, ಸಾವಿನ ಸಂಖ್ಯೆ ೨೯,೮೬೧ ಕ್ಕೆ ಏರಿತು, ದಾಖಲಾದ ,೧೨೯ ಸಾವುಗಳು ೨೪ ಗಂಟೆಗಳಲ್ಲಿ ವರದಿಯಾಗಿದೆ ಎಂದು ನವೀಕರಿಸಿದ ಮಾಹಿತಿ ತಿಳಿಸಿದೆ.

No comments:

Advertisement