ಭಾರತ-ಜಪಾನ್ ಶೃಂಗಸಭೆ ಅಕ್ಟೋಬರಿನಲ್ಲಿ
ಚೀನಾ ದಿಗ್ಬಂಧನಕ್ಕೆ ಮೋದಿ-ಅಬೆ ಯೋಜನೆ?
ನವದೆಹಲಿ: ಉಭಯರಾಷ್ಟ್ರಗಳ ಸಮಾನ ಶತ್ರುವಾದ ಚೀನಾವನ್ನು ಕಟ್ಟಿಹಾಕಲು ಭಾರv ಮತ್ತು ಜಪಾನ್ ಹೊಸ ದಾರಿಗಳನ್ನು ಹುಡುಕುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಮುಂದಿನ ಅಕ್ಟೋಬರಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶೃಂಗಸಭೆ ನಡೆಸಲು ಯೋಜಿಸಿದ್ದಾರೆ.
ಚೀನಾದ ಪ್ರಾಬಲ್ಯ ತಗ್ಗಿಸುವ ಬಗೆಗೇ ಉಭಯ ನಾಯಕರು ಚಿಂತಿಸುವ ಸಾಧ್ಯತೆ ಇದೆ ಎಂದು ಮೂಲಗಳು 2020 ಜುಲೈ 18ರ ಶನಿವಾರ ಹೇಳಿದವು.
ಕೊರೊನಾ ಸೋಂಕು ಹಾವಳಿ ನಡುವೆಯೇ ಚೀನಾವು ಗಡಿ ತಕರಾರು ಎತ್ತುತ್ತಿದೆ. ಲಡಾಖ್‌ನಲ್ಲಿ ಭಾರತದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದರೆ, ಅತ್ತ ಪೂರ್ವ ಮತ್ತು ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಹಲವು ರಾಷ್ಟ್ರಗಳ ಹಿತಾಸಕ್ತಿಯನ್ನು ದಮನ ಮಾqಹೊರಟಿದೆ. ವಿಸ್ತರಣಾವಾದದ ಹುಚ್ಚು ಚೀನಾ ನೆತ್ತಿಗೇರಿದೆ. ಇದನ್ನು ನಿಯಂತ್ರಿಸಲೇಬೇಕು ಎಂಬ ಅಭಿಪ್ರಾಯವನ್ನು ಭಾರತ-ಜಪಾನ್ ವ್ಯಕ್ತಪಡಿಸಿವೆ.
ಮೋದಿ-ಅಬೆ ವಾರ್ಷಿಕ ಶೃಂಗಸಭೆ ಕಳೆದ ಡಿಸೆಂಬರಿನಲ್ಲಿ ನಡೆಯಬೇಕಾಗಿತ್ತು. ಅದಕ್ಕಾಗಿ ಅಸ್ಸಾಮಿನ ಗುವಾಹಟಿಯನ್ನು ನಿಗದಿ ಪಡಿಸಲಾಗಿತ್ತು.
ಆದರೆ ದಿಢೀರನೆ ಭುಗಿಲೆದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಪ್ರತಿಭಟನೆಯಿಂದ ಸಭೆ ಮುಂದೂಡಿಕೆಯಾಗಿತ್ತು. ಆ ಬಳಿಕ ಕೊರೊನಾ ಸೋಂಕು ಹಾವಳಿ ಶುರುವಾದದ್ದರಿಂದ ಮಾತುಕತೆ ಅನಿಶ್ಚಿತಾವಧಿಗೆ ಮುಂದೂಡಲ್ಪಟ್ಟಿತ್ತು. ಈಗ ಮುಖಾಮುಖಿ ಭೇಟಿಯ ಬದಲು ವಿಡಿಯೊ ಕಾನ್ಫರೆನ್ಸ್ ಮೂಲಕ ಅಕ್ಟೋಬರಿನಲ್ಲಿ ಉಭಯ ಪ್ರಧಾನಿಗಳ ಶೃಂಗಸಭೆ ಏರ್ಪಡಿಸಲು ಚಿಂತನೆ ನಡೆದಿದೆ.
ಚೀನಾಕ್ಕೆ ತನ್ನ ನೆರೆಹೊರೆಯ ಯಾವ ರಾಷ್ಟ್ರದ ಜೊತೆಗೂ ಸೌಹಾರ್ದಯುತವಾದ ಸ್ನೇಹ ಸಂಬಂಧ ಇಲ್ಲ. ಭಾರತದ ಜತೆ ಭೂ ಗಡಿ ತಗಾದೆ ಇಟ್ಟುಕೊಂಡಿದ್ದರೆ ಅತ್ತ ಜಪಾನ್, ತೈವಾನ್, ಫಿಲಿಪ್ಪೀನ್ಸ್ ಆದಿಯಾಗಿ ಹಲವು ರಾಷ್ಟ್ರಗಳ ಜತೆ ಜಲ ಗಡಿಗಳ ಜಗಳ ತೆಗೆಯುತ್ತಿದೆ.
ಕಮ್ಯೂನಿಸ್ಟ್ ರಾಷ್ಟ್ರದ ಈ ವಿಸ್ತರಣಾವಾದದ ದುರಾಶೆಗೆ ಕಡಿವಾಣ ಹಾಕುವುದಕ್ಕಾಗಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಬಲವಾದ ಸೂತ್ರಗಳನ್ನು ಪ್ರಸ್ತಾಪಿಸಿದ್ದಾರೆ. ಇಂಡೊ-ಫೆಸಿಪಿಕ್ ವಲಯದ ಭದ್ರತೆಯನ್ನು ಪ್ರಧಾನವಾಗಿಟ್ಟುಕೊಂಡು ಅವರು, ‘ಚತುರ್ಭುಜ ಭದ್ರತಾ ಸಂಧಾನ’ ಶುರು ಮಾಡಿದ್ದಾರೆ. ಅಮೆರಿಕ, ಜಪಾನ್, ಭಾರತ ಮತ್ತು ಆಸ್ಪ್ರೇಲಿಯಾ ಒಳಗೊಂಡ ‘ಸ್ಕಾಡ್’ ಕೂಟಕ್ಕೆ ವಿಸ್ತರಣಾವಾzಕ್ಕೆ ಕಡಿವಾಣ ಹಾಕುವುದೇ ಮುಖ್ಯ ಕಾರ್‍ಯಸೂಚಿಯಾಗಿದೆ.
No comments:
Post a Comment