Thursday, July 2, 2020

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್ ಭೇಟಿ ಮುಂದೂಡಿಕೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್ ಭೇಟಿ ಮುಂದೂಡಿಕೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಲಡಾಖ್ ಭೇಟಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸೇನೆ ವಾಪಸಾತಿ ಬಗ್ಗೆ ನೀಡಿರುವ ಬದ್ಧತೆಯನ್ನು ಚೀನಾ ಈಡೇರಿಸುತ್ತದೆಯೇ ಎಂಬುದಾಗಿ ಕಾದು ನೋಡುವ ತಂತ್ರವಾಗಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಯಿತು.

ಕಳೆದ ತಿಂಗಳು ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಲು ಮತ್ತು ಸೇನೆಯ ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಲು ರಾಜನಾತ್ ಸಿಂಗ್ ಅವರು 2020 ಜುಲೈ 3ರ ಶುಕ್ರವಾರ ಮುಂಜಾನೆ ಲೆಹ್‌ಗೆ ಭೇಟಿ ನೀಡಬೇಕಾಗಿತ್ತು.

ಪ್ರವಾಸವನ್ನು ಏತಕ್ಕಾಗಿ "ಮರುಹೊಂದಾಣಿಕೆ ಮಾಡಲಾಗಿದೆಎಂದು ಯಾರಿಗೂ ಸಂಪೂರ್ಣ ಸ್ಪಷ್ಟತೆ ಇಲ್ಲ. ಜೂನ್ , ಜೂನ್ ೨೨ ಮತ್ತು ಜೂನ್ ೩೦ ರಂದು ಮೂರು ಸುತ್ತುಗಳ ಕೋರ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ತಾನು ವ್ಯಕ್ತ ಪಡಿಸಿದ ಬದ್ಧತೆಯನ್ನು ಚೀನಾ ಗೌರವಿಸುವುದೇ ಎಂಬುದಾಗಿ ಕಾದು ನೋಡಲು ಭಾರತದ ಬಯಸಿದೆ ಎಂದು ಮೂಲಗಳು ಸೂಚಿಸಿವೆ.

"ಮುಂಚೂಣಿಯಲ್ಲಿ ನಿಯೋಜಿಸಲಾಗಿರುವ ಸೈನಿಕರನ್ನು ಭೇಟಿ ಮಾಡಲು ರಕ್ಷಣಾ ಸಚಿವರು ಬಂದಾಗ, ಇದು ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಉದ್ವಿಗ್ನತೆ ಉಲ್ಬಣಗೊಂಡರೆ ನಾವು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ ಎಂಬುದಾಗಿ ಶತ್ರುಗಳಿಗೆ ನೀಡುವ ಸಂಕೇತ ಇದಾಗುತ್ತದೆ. ಚೀನಾ ತನ್ನ ಬದ್ಧತೆ ಈಡೇರಿಸುವವರೆಗೆ  ನಾವು ನಮ್ಮ ಸಿಬ್ಬಂದಿಯನ್ನು ಕಡಿಮೆ ಮಾಡುವುದಿಲ್ಲ ಎಂಬುದು ಇದರ ಸ್ಪಷ್ಟ ಸೂಚನೆಎಂದು ಮೂಲವೊಂದು ತಿಳಿಸಿದೆ.

ಜೂನ್ ೩೦ ರಂದು ಚುಶುಲ್‌ನಲ್ಲಿ ನಡೆದ ಮೂರನೇ ಸುತ್ತಿನ ಸಭೆಯ ಬಳಿಕ ಭಾರತೀಯ ಸೇನೆಯು ಎಚ್ಚರಿಕೆಯ ಹೇಳಿಕೆಯನ್ನು ಬಿಡುಗಡೆ ಮಾಡಿತು. "ಎರಡೂ ಕಡೆಯವರು ತ್ವರಿತ ಹಾಗೂ ಹಂತ ಹಂತವಾಗಿ ಉದ್ವಿಗ್ನತೆ ಶಮನಕ್ಕೆ ಆದ್ಯತೆ ನೀಡುವುದಾಗಿಒತ್ತಿ ಹೇಳಿದ್ದಾರೆ. ಮಾತುಕತೆಗಳು ನೈಜ ನಿಯಂತ್ರಣ ರೇಖೆಯ  (ಎಲ್‌ಎಸಿ) ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ಕಡೆಗಳೂ ಬದ್ಧವಾಗಿರುವುದನ್ನು ಪ್ರತಿಬಿಂಬಿಸಿವೆ. ಸೇನೆ ವಾಪಸಾತಿಯಲ್ಲಿನ ತೊಡಗಿಸಿಕೊಳ್ಳುವಿಕೆಯ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ಅಂತಹ ಸಂದರ್ಭದಲ್ಲಿ, ಋಣಾತ್ಮಕ ಮತ್ತು ಆಧಾರರಹಿತ ವರದಿಗಳನ್ನು ತಪ್ಪಿಸಬೇಕಾಗಿz’ ಎಂದು ಮೂಲ ಹೇಳಿದೆ.

ಜೂನ್ ೩೦ ರಂದು ನಡೆದ ಸಭೆಯ ಫಲಿತಾಂಶಗಳ ಬಗ್ಗೆ ಚೀನಿಯರು ಹೆಚ್ಚು ಆಶಾವಾದಿಗಳಾಗಿದ್ದಂತಿದೆ. ಕಮ್ಯುನಿಸ್ಟ್ ಆಡಳಿತದ  ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್, "ಚೀನಾ ಮತ್ತು ಭಾರತವು ಮುಂಚೂಣಿಯ ಗಡಿ ಪಡೆಗಳನ್ನು ತಂಡಗಳಲ್ಲಿ ಹಿಂದಕ್ಕೆ ಕಳುಹಿಸಲು ಮತ್ತು ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಒಪ್ಪಿವೆಎಂದು ಬರೆದಿದೆ.

ಗಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗೊಂಗ್ ತ್ಸೋಗಳಿಂದ ಚೀನಿಯರು ಸ್ವಲ್ಪ ಹಿಂದೆ ಸರಿಯಲು ಒಪ್ಪಿಕೊಂಡಿದ್ದಾರೆ ಎಂದು ಸೌತ್ ಬ್ಲಾಕ್‌ನ ಮೂಲಗಳು ಖಚಿತಪಡಿಸಿವೆ. ಫ್ಲ್ಯಾಷ್ ಪಾಯಿಂಟ್‌ಗಳಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸ್ವಲ್ಪ ಹೆಚ್ಚಿನ ಅಂತರವನ್ನು ಸೃಷ್ಟಿಸಲು ಮತ್ತು ಮತ್ತಷ್ಟು ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಲು ಬಫರ್ ವಲಯವನ್ನು ರಚಿಸಲು ಉಭಯರಲ್ಲಿ ಒಮ್ಮತವಿದೆ ಎಂದು ಮೂಲಗಳು ಹೇಳಿವೆ.

ಆದರೂ ಸೇನೆ ಏಕೆ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ?

"ಕಳೆದ ಬಾರಿ ನಾವು ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಮೇಜ್ ಜನರಲ್ ಲುಯಿ ಲಿನ್ ಅವರು ಒಪ್ಪಿಕೊಂಡಿದ್ದನ್ನು ಆಧರಿಸಿ ಆಶಾವಾದಿ ಹೇಳಿಕೆ ನೀಡಿದ್ದೇವೆ ಮತ್ತು ನಂತರ ಮುಂದಿನ ೧೦ ದಿನಗಳವರೆಗೆ ಚೀನಾದ ಕಡೆಯಿಂದ ಗೌರವಿಸುವ ಯಾವುದೇ ಕುರುಹು ಇರಲಿಲ್ಲ. ಇಬ್ಬರು ಕಮಾಂಡರ್‌ಗಳು ಮಾತನಾಡುತ್ತಿರುವಾಗ, ರಕ್ತಸಿಕ್ತ ಘರ್ಷಣೆ ನಡೆದ ಗಲ್ವಾನ್ ಕಣಿವೆಯ ಪಿಪಿ ೧೪ಕ್ಕೆ ಚೀನಿಯರು ಬಂದಿದ್ದರು ಮತ್ತು ಗೋಡೆ ನಿರ್ಮಿಸಿ ಡೇರೆಗಳನ್ನು ಹಾಕಿದರು ಎಂದು ನಂತರ ತಿಳಿದುಬಂದಿದೆ. ಈಗ ಅವರು ಮ್ಯಾಂಡರಿನ್‌ನಲ್ಲಿಚೀನಾ ಅಟ್ ಪಿಂಗೊಂಗ್ ತ್ಸೊ ಫಿಂಗರ್ ಎಂಬ ಫಲಕ ಹಾಕಿದ್ದಾರೆ. ಅವರು ಸಭೆಗಳಲ್ಲಿ ಏನಾದರೂ ಹೇಳುತ್ತಾರೆ, ಆದರೆ ವಾಪಸಾದ ಬಳಿಕ ಏನನ್ನೂ ಮಾಡುವುದಿಲ್ಲ. ಅವರು ಹೇಳಿದ ಮಾತು ಈಡೇರುವವರೆಗೆ ನಾವುಸೇನೆ ವಾಪಸಾತಿಪದವನ್ನೇ ಬಳಸಬಾರದು ಎಂದು ನಿರ್ಧರಿಸಿದ್ದೇವೆಎಂದು ಸೇನಾ ಮೂಲಗಳು ತಿಳಿಸಿವೆ.

ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ದೀರ್ಘ, ಬೇಸರದ ಕ್ರಿಯೆಯಾಗಿದ್ದು, ವಿವಿಧ ಹಂತಗಳಲ್ಲಿ ಇರುತ್ತದೆ. ಪ್ರತಿ ಹೆಜ್ಜೆಯನ್ನು ಹಿಂಪಡೆದ ಬಳಿಕ ಪರಿಶೀಲನೆ ಇರುತ್ತದೆ ಮತ್ತು ಅದರ ನಂತರ ಮತ್ತೊಂದು ಹೆಜ್ಜೆ ಇಡಲಾಗುತ್ತದೆ.

ಚೀನಾ ಸೇನೆಯ ಬೃಹತ್ ಜಮಾವಣೆಗೆ ಪ್ರತಿಕ್ರಿಯೆಯಾಗಿ ಪೂರ್ವ ಲಡಾಕ್‌ನಲ್ಲಿ ನಿಯೋಜಿಸಲಾಗಿರುವ ೪೦,೦೦೦ ಹೆಚ್ಚುವರಿ ಸೈನಿಕರಿಗಾಗಿ ಭಾರತೀಯ ಸೇನೆಯು ಈಗಾಗಲೇ ಚಳಿಗಾಲಕ್ಕಾಗಿ ದಾಸ್ತಾನು ಮಾಡಲು ಪ್ರಾರಂಭಿಸಿದೆ. ಪ್ರತಿದಿನ, ಪುರುಷರು ಮತ್ತು ಸಾಮಗ್ರಿಗಳೊಂದಿಗೆ ಹೆಚ್ಚಿನ ಬೆಂಗಾವಲುಗಳು ಪರ್ವತಗಳತ್ತ ಸಾಗುತ್ತಿವೆ.

"ನಾವು ಕಾಯೋಣ ಮತ್ತು ನೋಡೋಣ" ಮತ್ತು " ಇದು ದೀರ್ಘ ಪ್ರಯಾಣಎಂಬ ಮಾತುಗಳನ್ನು ಸೇನಾ ಅಧಿಕಾರಿಗಳು ಅನುಸರಿಸುತ್ತಿದ್ದಾರೆ.

No comments:

Advertisement