ನವದೆಹಲಿ: ಎರಡು ನೆರೆಹೊರೆ ದೇಶಗಳ ನಡುವಣ ಉದ್ವಿಗ್ನತೆಗಳಿಗೆ ಪರಿಹಾರ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವು ಹಿಮಾಲಯದಲ್ಲಿನ ಚೀನಾ ಜೊತೆಗಿನ ತನ್ನ ವಿವಾದಿತ ಗಡಿಯಲ್ಲಿ ೩೫,೦೦೦ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ.
ಈ ಕ್ರಮವು ವಿವಾದಾತ್ಮಕವಾದ ೩,೪೮೮ ಕಿಲೋಮೀಟರ್ (೨,೧೬೨ ಮೈಲಿ) ಉದ್ಧದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸುತ್ತದೆ ಮತ್ತು ಈಗಾಗಲೇ ಬಿಗಿಯಾಗಿರುವ ರಾಷ್ಟ್ರದ ಮಿಲಿಟರಿ ಬಜೆಟನ್ನು ಹೆಚ್ಚಿಸುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಭಾರತದ ಹಿರಿಯ ಅಧಿಕಾರಿಗಳು 2020 ಜುಲೈ 30ರ ಗುರುವಾರ ಹೇಳಿದರು.
ಜೂನ್ ೧೫ ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಹಿಂಸಾತ್ಮಕ ಚಕಮಕಿಯಲ್ಲಿ ಭಾರತದ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರೆ ಚೀನಾ ಕಡೆಯಲ್ಲಿ ಅಸಂಖ್ಯಾತ ಸೈನಿಕರು ಸಾವನ್ನಪ್ಪಿದ್ದಾರೆ.
ಆ ಬಳಿಕದಿಂದ ಉಭಯ ಕಡೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರು, ಫಿರಂಗಿ, ಬಂದೂಕು ಮತ್ತು ಮತ್ತು ಸಮರ ಟ್ಯಾಂಕ್ಗಳನ್ನು ಈ ಪ್ರದೇಶಕ್ಕೆ
ಒಯ್ದಿದ್ದಾರೆ.
ಭಾರತ-ಚೀನಾ ಗಡಿ ಒಪ್ಪಂದಗಳು ರೂಪುಗೊಳ್ಳದ ಕಾರಣ, ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ಸೈನಿಕರ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಕನಿಷ್ಠ ಪಕ್ಷ ಲಡಾಖ್ನಲ್ಲಿ ನೈಜ ನಿಯಂತ್ರಣ ರೇಖೆಯ ಸ್ವರೂಪ ಶಾಶ್ವತವಾಗಿ ಬದಲಾಗಿದೆ’ ಎಂದು ದೆಹಲಿ ಮೂಲದ ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಚಿಂತನ ಕೊಳದ (ಥಿಂಕ್-ಟ್ಯಾಂಕ್) ನಿರ್ದೇಶP ಮತ್ತು ನಿವೃತ್ತ ಮೇಜರ್ ಜನರಲ್ ಬಿ ಕೆ ಶರ್ಮಾ ಹೇಳಿದ್ದಾರೆ.
"ಉನ್ನತ ರಾಜಕೀಯ ಮಟ್ಟದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಎರಡೂ ಕಡೆಯಿಂದ ಧಾವಿಸುವ ಹೆಚ್ಚುವರಿ ಪಡೆಗಳು ಹಿಂದಕ್ಕೆ ಸರಿಯಲು ಸಾಧ್ಯವಿಲ್ಲ. ಸದ್ಯಕ್ಕೆ, ಚಕಮಕಿಗಳು ನಿಂತಿವೆ. ಮತ್ತು ಹಲವಾರು ಹಂತದ ಉನ್ನತ ಮಟ್ಟದ ಸೇನಾ ಮಾತುಕತೆಗಳ ಬಳಿಕ, ಬೀಜಿಂಗ್ ಹೆಚ್ಚಿನ ಸ್ಥಳಗಳಲ್ಲಿ ಸೇನೆ ಜಮಾವಣೆಯನ್ನು ಕಡಿಮೆಗೊಳಿಸುತ್ತಿದೆ ಎಂದು ಅವರು ಹೇಳಿದರು.
’ಸಮಸ್ಯೆಗಳನ್ನು ಬಗೆಹರಿಸಲು ಪ್ರಸ್ತುತ ಉಭಯ ಕಡೆಯವರು ಐದನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗಳಿಗೆ ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದಾರೆ’ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಂಗಳವಾರ ಬೀಜಿಂಗ್ನಲ್ಲಿ ನಡೆದ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
"ಭಾರತೀಯ ತಂಡವು ಚೀನಾದೊಂದಿಗೆ ಒಂದೇ ಗುರಿ ಸಾಧನೆ ಸಲುವಾಗಿ ಕೆಲಸ ಮಾಡುತ್ತದೆ, ಉಭಯ ಕಡೆಯ ಒಮ್ಮತವನ್ನು ಕಾರ್ಯಗತಗೊಳಿಸುತ್ತದೆ ಮತ್ತು ಗಡಿಯಲ್ಲಿ ಶಾಂತಿಯನ್ನು ಜಂಟಿಯಾಗಿ ಎತ್ತಿಹಿಡಿಯುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ವಾಂಗ್ ಹೇಳಿದ್ದರು.
ಆದಾಗ್ಯೂ ಪ್ರತಿಕ್ರಿಯಿಸುವಂತೆ ಮಾಡಿದ ಕೋರಿಕೆಗಳಿಗೆ ಭಾರತೀಯ ಸೇನೆ ತಕ್ಷಣ ಸ್ಪಂದಿಸಲಿಲ್ಲ.
ವಿಸ್ತರಿಸಿದ ಬಜೆಟ್:
ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಲಾಗಿರುವ ೭೪೨ ಕಿಲೋಮೀಟರ್ (೪೬೦ ಮೈಲಿ) ವಿವಾದಿತ ಗಡಿಯ ರಕ್ಷಣೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಬಂಡಾಯ ಕಾರ್ಯಾಚರಣೆಯನ್ನು ಎದುರಿಸಲು ಬೇಕಾದ ಸಿದ್ಧತೆ ಮತ್ತು ಚೀನಾ ಜೊತೆಗಿನ ಗಡಿಯುದ್ದಕ್ಕೂ ಪ್ರತಿ ಪ್ರವೇಶದ ಸ್ಥಳದ ಮೇಲ್ವಿಚಾರಣೆ ಕಾರ್ಯಗಳಿಗೆ ಭಾರತೀಯ ಸೇನೆಯು ಹೆಚ್ಚು ಬದ್ಧವಾಗಿರುವುದರಿಂದ, ಪೂರ್ವ ಲಡಾಖ್ಗೆ ಹೆಚ್ಚುವರಿ
ಪಡೆಗಳ ನಿಯೋಜನೆಯು ಮುಂಗಡಪತ್ರದ ಮೇಲಿನ ಹೆಚ್ಚುವರಿ ಹೊರೆಯಾಗುತ್ತದೆ.
ಗಡಿ ರಕ್ಷಣೆಯನ್ನು ಬಲಪಡಿಸುವುದು ಭಾರೀ ವೆಚ್ಚದಾಯಕವಾಗುತ್ತದೆ ಮತ್ತು ರಾಷ್ಟ್ರದ ಮಿಲಿಟರಿ ಆಧುನೀಕರಣ ಕಾರ್ಯಕ್ರಮದ ಮೇಲೆ ಹೊಸ ಒತ್ತಡವನ್ನು ಉಂಟು ಮಾಡುತ್ತದೆ.
ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಸೇನಾ ವೆಚ್ಚ ಮಾಡುವ ರಾಷ್ಟ್ರವಾಗಿದ್ದರೂ, ಅದರ ವಾಯುಪಡೆ, ನೌಕಾಪಡೆ ಮತ್ತು ಸೇನೆಯು ಇನ್ನೂ ಹಳೆಯ ಶಸ್ತ್ರಾಸ್ತ್ರಗಳನ್ನೇ ಹೊಂದಿದೆ.
No comments:
Post a Comment