Wednesday, August 19, 2020

10,000 ಅರೆ ಸೇನಾ ಯೋಧರು ಜಮ್ಮು –ಕಾಶ್ಮೀರದಿಂದ ವಾಪಸ್

 10,000 ಅರೆ ಸೇನಾ ಯೋಧರು ಜಮ್ಮುಕಾಶ್ಮೀರದಿಂದ ವಾಪಸ್

ನವದೆಹಲಿ:  ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿ ಪ್ರದೇಶದಿಂದ ಭದ್ರತಾ ಪಡೆಗಳ ೧೦೦ ಕಂಪೆನಿಗಳನ್ನು (10,000 ಯೋಧರು) ಹಿಂಪಡೆಯಲು ಕೇಂದ್ರ ಸರ್ಕಾರ 2020 ಆಗಸ್ಟ್ 19ರ ಬುಧವಾರ ನಿರ್ಧರಿಸಿತು..

ಗೃಹ ಸಚಿವಾಲಯದ (ಎಂಎಚ್) ಭದ್ರತಾ ಪರಿಶೀಲನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಯಿತು. ಹಿಂತೆಗೆದುಕೊಳ್ಳಬೇಕಾದ ಅರೆಸೈನಿಕ ಸಿಬ್ಬಂದಿಯ ಕಂಪೆನಿಗಳಲ್ಲಿ ಸಿಆರ್ಪಿಎಫ್ ೪೦ ಕಂಪೆನಿಗಳು ಮತ್ತು ಕಾಶ್ಮೀರ ಕಣಿವೆಯ ತಲಾ ೨೦ ಬಿಎಸ್ಎಫ್, ಸಿಐಎಸ್ಎಫ್ ಮತ್ತು ಎಸ್ಎಸ್ಬಿ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದರು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಕೇಂದ್ರಾಡಳಿತ ಪ್ರದೇಶದಲ್ಲಿ ನಿಯೋಜಿಸುವುದನ್ನು ಗೃಹ ವ್ಯವಹಾರಗಳ ಸಚಿವಾಲಯವು ಪರಿಶೀಲಿಸಿದ ನಂತರ ನಿರ್ಧಾರವನ್ನು ಅಂತಿಮಗೊಳಿಸಲಾಯಿತು.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಂವಿಧಾನದ ೩೭೦ನೇ ಪರಿಚ್ಛೇದ ರದ್ದು ಪಡಿಸಿದ ಬಳಿಕ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ನಿಯೋಜಿತವಾಗಿದ್ದ ಒಟ್ಟು ೧೦೦ ಸಿಎಪಿಎಫ್ ಕಂಪೆನಿಗಳನ್ನು ತತ್ ಕ್ಷಣ ಹಿಂತೆಗೆದುಕೊಳ್ಳಲು ಮತ್ತು ದೇಶದಲ್ಲಿನ ತಮ್ಮ ಮೂಲ ಸ್ಥಳಗಳಿಗೆ ವಾಪಸಾಗಲು ಸೂಚಿಸಲಾಗಿದೆ ಎಂದು ಸುದ್ದಿ ಮೂಲಗಳು ಹೇಳಿವೆ.

ಸಿಎಪಿಎಫ್ ಕಂಪೆನಿಯು ಸಾಮಾನ್ಯವಾಗಿ ಸುಮಾರು ೧೦೦ ಭದ್ರತಾ ಸಿಬ್ಬಂದಿಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೊಂದಿರುತ್ತದೆ.

ಗೃಹ ಸಚಿವಾಲಯವು ಕೊನೆಯ ಬಾರಿಗೆ ಸುಮಾರು ೧೦ ಸಿಎಪಿಎಫ್ ಕಂಪೆನಿಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಮೇ ತಿಂಗಳಲ್ಲಿ ಹಿಂತೆಗೆದುಕೊಂಡಿತ್ತು.

ಗೃಹ ಸಚಿವಾಲಯದ ಆದೇಶದ ಪ್ರಕಾರ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಒಟ್ಟು ೪೦ ಕಂಪೆನಿಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಸಶಸ್ತ್ರ ಸೀಮಾ ಬಲದ (ಎಸ್ಎಸ್ಬಿ) ತಲಾ ೨೦ ಕಂಪೆನಿಗಳು ವಾರದ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರದಿಂದ ಹೊರಹೋಗಲಿವೆ.

ಭದ್ರತಾ ಸಿಬ್ಬಂದಿಯ ವಾಪಸಾತಿಯೊಂದಿಗೆ, ಸಿಎಪಿಎಫ್ ಸಿಬ್ಬಂದಿಯ ಕೆಲವು ಘಟಕಗಳನ್ನು ಹೊರತು ಪಡಿಸಿ, ಕಾಶ್ಮೀರ ಕಣಿವೆಯಲ್ಲಿ ಸುಮಾರು ಸಿಆರ್ಪಿಎಫ್ ೬೦ ಬೆಟಾಲಿಯನ್ (ಪ್ರತಿ ಬೆಟಾಲಿಯನ್ನಲ್ಲಿ ಸುಮಾರು ,೦೦೦ ಸಿಬ್ಬಂದಿ) ಮಾತ್ರ ಉಳಿಯುತ್ತಾರೆ.

ಅರೆ ಸೇನಾ ಪಡೆಗಳ ೧೦೦ ಕಂಪೆನಿಗಳನ್ನು ತತ್ ಕ್ಷಣದಿಂದ ಜಾರಿಯಾಗುವಂತೆ ಹಿಂತೆಗೆದುಕೊಳ್ಳುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅರೆ ಸೇನಾ ಪಡೆಗಳ ಸೈನಿಕರ ಸಂಖ್ಯೆ ೧೦,೦೦೦ ದಷ್ಟು ಕಡಿಮೆಯಾಗಲಿದೆ. (ಒಂದು ಕಂಪೆನಿ ಅಂದರೆ ೧೦೦ ಸೈನಿಕರ ಒಂದು ತುಕಡಿ).

೨೦೧೯ರ ಆಗಸ್ಟ್ ೫ರಂದು ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸ್ವಲ್ಪ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರದ ಭದ್ರತಾ ಜಾಲವನ್ನು ಹೆಚ್ಚುವರಿ ೬೦೦ಕ್ಕೂ ಹೆಚ್ಚು ಅರೆಸೇನಾ ಕಂಪೆನಿಗಳ (ಸುಮಾರು ೬೦,೦೦೦ ಸೈನಿಕರು) ಮೂಲಕ ಬಲಪಡಿಸಲಾಗಿತ್ತು.

ಭಯೋತ್ಪಾದಕ ಘಟನೆಗಳು, ಕಲ್ಲು ತೂರಾಟದ ಘಟನೆಗಳು ವರದಿಯಾದ ವಿವಿಧ ಸ್ಥಳಗಳಲ್ಲಿ ಪಡೆಗಳನ್ನು ಇರಿಸಲಾಗಿತ್ತು.

ಸರ್ಕಾರದ ಇತ್ತೀಚಿನ ಮಾಹಿತಿಯ ಪ್ರಕಾರ, ೨೦೧೯ ಅಥವಾ ೨೦೧೮ ಕ್ಕೆ ಹೋಲಿಸಿದರೆ ವರ್ಷ ಕಲ್ಲು ತೂರಾಟದ ಘಟನೆಗಳು ತೀವ್ರವಾಗಿ ಕಡಿಮೆಯಾಗಿದೆ. ೨೦೧೮ ರಲ್ಲಿ ಕಾಶ್ಮೀರದಲ್ಲಿ ೫೩೨ ಕಲ್ಲು ತೂರಾಟ ಘಟನೆಗಳು ನಡೆದಿವೆ, ೨೦೧೯ ರಲ್ಲಿ ೩೮೯ ಆದರೆ ವರ್ಷ ಇಲ್ಲಿಯವರೆಗೆ ಕೇವಲ ೧೦೨ ಘಟನೆಗಳು ವರದಿಯಾಗಿವೆ.

ಸ್ಥಳೀಯರು ಈಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಅಡ್ಡಿಪಡಿಸುವುದಿಲ್ಲ ಮತ್ತು ಸಾಮಾನ್ಯವಾಗಿ ಸಾರ್ವಜನಿಕರಿಂದ ಹೆಚ್ಚಿನ ಬೆಂಬಲ ಲಭ್ಯವಾಗುತ್ತಿದೆ ಎಂದು ಕಣಿವೆಯಲ್ಲಿ ನಿಯೋಜಿಸಲಾದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈಗಿನ ನಿರ್ಧಾರದೊಂದಿಗೆ, ಸಿಆರ್ಪಿಎಫ್ ನಿಯಮಿತ ೬೭ ಬೆಟಾಲಿಯನ್ಗಳು (ಸುಮಾರು ೬೭,೦೦೦ ಸಿಬ್ಬಂದಿ) ಮತ್ತು ಸೈನ್ಯ ಮತ್ತು ಜೆ-ಕೆ ಪೊಲೀಸರಿಗೆ ಹೆಚ್ಚುವರಿಯಾಗಿ ಸುಮಾರು ೪೦೦ ಹೆಚ್ಚುವರಿ ಅರೆಸೈನಿಕ ಪಡೆಗಳನ್ನು ಜಮ್ಮು - ಕಾಶ್ಮೀರದಲ್ಲಿ ಈಗ ಉಳಿಯುತ್ತವೆ.

No comments:

Advertisement