ಕೊರೋನಾ: ಭಾರತದಲ್ಲಿ ೨೩ ಲಕ್ಷ, ಚೇತರಿಕೆ 16 ಲಕ್ಷ
ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ ೬೦,೯೬೩ ಹೊಸ ಪ್ರಕರಣಗಳೊಂದಿಗೆ ಕೋವಿಡ್-೧೯ ಸೋಂಕು ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 12ರ ಬುಧವಾರ ೨೩ ಲಕ್ಷ ದಾಟಿತು.
ಇದೇ ವೇಳೆಗೆ ಗುಣಮುಖರಾಗಿ ಚೇತರಿಸಿದ ಪ್ರಕರಣಗಳ ಸಂಖ್ಯೆ ಒಟ್ಟು ೧೬,೩೯,೫೯೯ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.
ದೇಶದ ಒಟ್ಟು ಕೊರೋನಾವೈರಸ್ ಪ್ರಕರಣಗಳು ೨೩,೨೯,೬೩೮ಕ್ಕೆ ಏರಿವೆ, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮೩೦ ಮಂದಿ ಸಾವನ್ನಪ್ಪುವುದರೊಂದಿಗೆ ಕೊರೋನಾ ಸಾವಿನ ಸಂಖ್ಯೆ ೪೬,೦೯೧ಕ್ಕೆ ಏರಿದೆ ಎಂದು ಬೆಳಗ್ಗೆ ೮ ಗಂಟೆಗೆ ನವೀಕರಿಸಿದ ಮಾಹಿತಿ ತಿಳಿಸಿದೆ.
ಆಗಸ್ಟ್ ೭
ರಂದು ಭಾರತದಲ್ಲಿ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೨೦ ಲಕ್ಷದ ಗಡಿ ದಾಟಿತ್ತು.
ದೇಶದಲ್ಲಿ ಪ್ರಸ್ತುತ ೬,೪೩,೯೪೮ ಸಕ್ರಿಯ ಕೊರೋನಾವೈರಸ್ ಸೋಂಕಿನ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೨೭.೬೪ ರಷ್ಟಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.
ಐಸಿಎಂಆರ್ ಪ್ರಕಾರ, ಆಗಸ್ಟ್ ೧೧
ರವರೆಗೆ ಒಟ್ಟು ೨,೬೦,೧೫,೨೯೭ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೭,೩೩,೪೪೯ ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.
No comments:
Post a Comment