Thursday, August 20, 2020

ದೇಶದಲ್ಲಿ ಕೊರೋನಾ ಮರಣ ಪ್ರಮಾಣ ಶೇ.1.90ಕ್ಕೆ ಇಳಿಕೆ

 ದೇಶದಲ್ಲಿ ಕೊರೋನಾ ಮರಣ ಪ್ರಮಾಣ ಶೇ.1.90ಕ್ಕೆ ಇಳಿಕೆ

ನವದೆಹಲಿ: ಭಾರತದಲ್ಲಿ ಹೊಸದಾಗಿ ೫೩,೮೬೬ ಪ್ರಕರಣಗಳು ದಾಖಲಾಗುವುದರೊಂದಿಗೆ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ  2020 ಆಗಸ್ಟ್ 20ರ ಗುರುವಾರ ೨೮ ಲಕ್ಷವನ್ನು ದಾಟಿತು. ಇದೇ ವೇಳೆಗೆ ಚೇತರಿಸಿಕೊಂಡವರ ಸಂಖ್ಯೆ ೨೧ ಲಕ್ಷಕ್ಕೆ ಏರಿತು. ಮರಣ ಪ್ರಮಾಣ ಶೇ.1.90ಕ್ಕೆ ಇಳಿಯಿತು.

ಕೊರೋನಾವೈರಸ್ ಸೋಂಕಿನ ಒಟ್ಟು ಪ್ರಕರಣಗಳು ೨೮,೩೬,೯೨೫ ಕ್ಕೆ ಏರಿದರೆ, ಸಾವಿನ ಸಂಖ್ಯೆ ೫೩,೮೬೬ ಕ್ಕೆ ಏರಿದೆ. ಒಂದು ದಿನದಲ್ಲಿ ೯೭೭ ಹೊಸ ಸಾವುಗಳು ವರದಿಯಾಗಿವೆ ಎಂದು ಗುರುವಾರ ಬೆಳಗ್ಗೆ ಗಂಟೆಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು.

ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಪರಿಣಾಮವಾಗಿ ಸಂಭವಿಸುತ್ತಿರುವ ಸಾವಿನ ಪ್ರಮಾಣ ಶೇಕಡಾ .೯೦ ಕ್ಕೆ ಇಳಿದಿದೆ ಎಂದು ಮಾಹಿತಿ ಹೇಳಿತು.

ದೇಶದಲ್ಲಿ ಪ್ರಸ್ತುತ ಕೊರೋನಾವೈರಸ್ ಸೋಂಕಿನ ,೮೬,೩೯೫ ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇಕಡಾ ೨೪.೨೦ ರಷ್ಟಿದೆ ಎಂದು ಮಾಹಿತಿ ತಿಳಿಸಿತು.

ಭಾರತದ ಕೋವಿಡ್-೧೯ ಪ್ರಕರಣಗಳ ಸಂಖ್ಯೆಯು ಆಗಸ್ಟ್ ರಂದು ೨೦ ಲಕ್ಷ ದಾಟಿತ್ತು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ -ಐಸಿಎಂಆರ್) ಪ್ರಕಾರ, ಆಗಸ್ಟ್ ೧೯ ರವರೆಗೆ ಒಟ್ಟು ,೨೬,೬೧,೨೫೨ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಬುಧವಾರ ,೧೮,೪೭೦ ಮಾದರಿಗಳನ್ನು ಪರೀಕ್ಷಿಸಲಾಗಿದೆ.

No comments:

Advertisement