Thursday, August 27, 2020

ಮೊಹರಂ ಮೆರವಣಿಗೆ: ಸುಪ್ರೀಂ ನಿರಾಕರಣೆ

 ಮೊಹರಂ ಮೆರವಣಿಗೆ: ಸುಪ್ರೀಂ ನಿರಾಕರಣೆ


ನವದೆಹಲಿ: ದೇಶಾದ್ಯಂತ ಮೊಹರಂ ಮೆರವಣಿಗೆಗಳನ್ನು ನಡೆಸಲು ಅನುಮತಿ ನೀಡಲು ಸುಪ್ರೀಂ ಕೋರ್ಟ್ 2020 ಆಗಸ್ಟ್ 27ರ ಗುರುವಾರ ನಿರಾಕರಿಸಿತು.

ಇದು ಅವ್ಯವಸ್ಥೆಗೆ ಕಾರಣವಾಗಬಹುದು ಮತ್ತು ಕೋವಿಡ್ -೧೯ರ ಹರಡುವಿಕೆಗೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಬಹುದು. ಸಂವಿಧಾನದ ೩೨ ನೇ ಪರಿಚ್ಛೇದದ ಪ್ರಕಾರ ಇಂತಹ ಸಾಮಾನ್ಯ ನಿರ್ದೇಶನಗಳನ್ನು ನೀಡಲಾಗದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ಪೀಠವು ಸ್ಪಷ್ಟ ಪಡಿಸಿತು.

" ಸಮುದಾಯದ ಸಲುವಾಗಿ ನೀವು ಇಡೀ ದೇಶಕ್ಕೆ ಅಸ್ಪಷ್ಟ ನಿರ್ದೇಶನಗಳನ್ನು ಕೇಳುತ್ತಿದ್ದೀರಿಎಂದು ಪೀಠವು ಶಿಯಾ ನಾಯಕ ಲಕ್ನೋ ಮೂಲದ ಅರ್ಜಿದಾರ ಸೈಯದ್ ಕಲ್ಬೆ ಜವಾದ್ ಅವರಿಗೆ ತಿಳಿಸಿತು.

ಮನವಿಯನ್ನು ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸುವಂತೆಯೂ ಪೀಠವು ಅರ್ಜಿದಾರರಿಗೆ ನಿರ್ದೇಶನ ನೀಡಿತು.

ಅರ್ಜಿದಾರರ ವಕೀಲರು ಜಗನ್ನಾಥ ಪುರಿ ರಥಯಾತ್ರೆಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಲು ಯತ್ನಿಸುತ್ತಿದ್ದಂತೆಯೇ  ಪ್ರಕರಣವು ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಪೀಠ ಹೇಳಿತು.

"ಜಗನ್ನಾಥ ಪುರಿ ಪ್ರಕರಣವು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ರಥವು ಹೋಗಬೇಕಾದ ಒಂದು ನಿರ್ದಿಷ್ಟ ಸ್ಥಳವಾಗಿತ್ತು. ಹೀಗಾಗಿ ನಮಗೆ ಅಪಾಯವನ್ನು ನಿರ್ಣಯಿಸಲು ಸಾಧ್ಯವಿತ್ತು ಮತ್ತು ಆದೇಶ ನೀಡಿದ್ದೇವೆ. ಇದು ಅಂತಹ ಪ್ರಕರಣವಲ್ಲಎಂದು ಸಿಜೆಐ ಬೋಬ್ಡೆ ಹೇಳಿದರು.

ನಾವು ಸಾಮಾನ್ಯ ಆದೇಶಗಳನ್ನು ನೀಡಲು ಸಾಧ್ಯವಿಲ್ಲ. ಸಾಮಾನ್ಯ ನಿರ್ದೇಶನಗಳು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಕೋವಿಡ್ -೧೯ ಹರಡಲು ನಿರ್ದಿಷ್ಟ ಸಮುದಾಯವನ್ನು ಗುರಿ ಡಿಸಲು ಅನುವು ಕಲ್ಪಿಸುತ್ತದೆಎಂದು ಪೀಠ ಹೇಳಿತು.

"ನೀವು ಪುರಿ ಜಗನ್ನಾಥ ರಥಯಾತ್ರೆಯನ್ನು ಉಲ್ಲೇಖಿಸುತ್ತಿದ್ದೀರಿ, ಅದು ಒಂದೇ ಸ್ಥಳದಲ್ಲಿ ಮತ್ತು ಒಂದು ನಿಗದಿತ ಮಾರ್ಗದಲ್ಲಿತ್ತು. ಸಂದರ್ಭದಲ್ಲಿ ನಾವು ಅಪಾಯವನ್ನು ನಿರ್ಣಯಿಸಬಹುದು ಮತ್ತು ಆದೇಶಗಳನ್ನು ರವಾನಿಸಬಹುದು. ಕಷ್ಟವೆಂದರೆ ನೀವು ಇಡೀ ದೇಶಕ್ಕೆ ಸಾಮಾನ್ಯ ಆದೇಶವನ್ನು ಕೇಳುತ್ತಿದ್ದೀರಿ. ನಾವು ಎಲ್ಲ ಜನರ ಆರೋಗ್ಯವನ್ನು ಅಪಾಯಕ್ಕೆ ತಳ್ಳುವಂತಿಲ್ಲಎಂದು ಪೀಠ ಸ್ಪಷ್ಟ ಪಡಿಸಿತು.

ಲಕ್ನೋದಲ್ಲಿ ಮೆರವಣಿಗೆ ನಡೆಸುವ ಸೀಮಿತ ಪ್ರಾರ್ಥನೆಯೊಂದಿಗೆ ಹೈಕೋರ್ಟನ್ನು ಸಂಪರ್ಕಿಸುವ ಸ್ವಾತಂತ್ರ್ಯದೊಂದಿಗೆ ಅರ್ಜಿಯನ್ನು ಹಿಂಪಡೆಯಲು ಪೀಠವು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟಿತು.

ಒಡಿಶಾದಲ್ಲಿ ರಥಯಾತ್ರೆಗೆ ಅನುಮತಿ ನೀಡಿದ ಜೂನ್ ತಿಂಗಳ ಆದೇಶವನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಸೈಯದ್ ಕಲ್ಬೆ ಜವಾದ್ ಅವರು ದೇಶಾದ್ಯಂತ ಮೊಹರಂ ಮೆರವಣಿಗೆಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ದೇಶಕ್ಕೆ ಸಾರಾಸಗಟು ಅನುಮತಿ ನೀಡುವ ಕಷ್ಟದ ಬಗ್ಗೆ ಪ್ರಸ್ತಾಪಿಸಿದ ಸಿಜೆಐ, ರಾಜ್ಯ ಸರ್ಕಾರಗಳು ಸಹ ಅರ್ಜಿಯಲ್ಲಿ ಕಕ್ಷಿದಾರರಾಗಿಲ್ಲ ಎಂದು ಹೇಳಿದರು.

ಶಿಯಾ ಸಮುದಾಯದ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಯುಪಿ ರಾಜಧಾನಿಯಲ್ಲಿ ವಾಸಿಸುತ್ತಿರುವುದನ್ನು ಉಲ್ಲೇಖಿಸಿ ಅರ್ಜಿದಾರರು ಲಕ್ನೋದಲ್ಲಿ ಮೆರವಣಿಗೆಗೆ ಅನುಮತಿ ಕೇಳಿದ್ದಾರೆ. ಅನುಮತಿಗಾಗಿ ಅಲಹಾಬಾದ್ ಹೈಕೋರ್ಟ್ಗೆ ಹೋಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.

ಮುಖ್ಯ ನ್ಯಾಯಮೂರ್ತಿಗಳಲ್ಲದೆ, ನ್ಯಾಯಮೂರ್ತಿಗಳಾದ .ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರೂ ಪೀಠದಲ್ಲಿ ಇದ್ದರು.

ಕೊರೋನಾವೈರಸ್ ಸಾಂಕ್ರಾಮಿಕ ಪ್ರಸರಣ ತಡೆಯಲು ಮಾರ್ಚ್ ಅಂತ್ಯದಲ್ಲಿ ದೇಶವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದಾಗ ಪೂಜಾ ಸ್ಥಳಗಳು, ಧಾರ್ಮಿಕ ಕೂಟಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಲಾಗಿದೆ.

ಜೂನ್ನಲ್ಲಿ, ದೇಶವು ಇನ್ನೂ ಕಠಿಣ ಲಾಕ್ಡೌನ್ನಿಂದ ಹೊರ ಬರುತ್ತಿರುವ ಹಂತದಲ್ಲಿ, ಸುಪ್ರೀಂ ಕೋರ್ಟ್ ಮೊದಲಿಗೆ ವಾರ್ಷಿಕ ಜಗನ್ನಾಥ ರಥಯಾತ್ರೆಗೆ ಅನುಮತಿಯನ್ನು ನಿರಾಕರಿಸಿತ್ತು.

"ನಾವು ರಥಯಾತ್ರೆಗೆ ಅವಕಾಶ ನೀಡಿದರೆ ಭಗವಾನ್ ಜಗನ್ನಾಥನು ನಮ್ಮನ್ನು ಕ್ಷಮಿಸುವುದಿಲ್ಲಎಂದು ಹೇಳಿದ್ದ ಸುಪ್ರೀಂಕೋರ್ಟ್ ಐದು ದಿನಗಳ ನಂತರ, ಕೇಂದ್ರದ ಮೇಲ್ಮನವಿಯನ್ನು ಅನುಸರಿಸಿ ಅದಕ್ಕೆ ಅನುಮತಿ ನೀಡಿತ್ತು.

ಕಳೆದ ವಾರ, ಎಂಟು ದಿನಗಳ ಪರಿಷಣ್ ಹಬ್ಬದ ಅಂಗವಾಗಿ ಮುಂಬೈಯ ಯಾವುದೇ ಮೂರು ದೇವಾಲಯಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಉನ್ನತ ನ್ಯಾಯಾಲಯ ಜೈನರಿಗೆ ಅನುಮತಿ ನೀಡಿತ್ತು. ಮುಖಗವಸುಗಳ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

"ನಮ್ಮನ್ನು ಭಗವಾನ್ ಜಗನ್ನಾಥನು ಕ್ಷಮಿಸಿದ್ದಾನೆ. ನಮ್ಮನ್ನು ಮತ್ತೆ ಭಗವಂತನು ಕ್ಷಮಿಸುವನುಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

No comments:

Advertisement