ಮಹಾರಾಷ್ಟ್ರದಲ್ಲಿ ಗಣಪತಿ ಉತ್ಸವ: ಸುಪ್ರೀಂ ನಕಾರ
ನವದೆಹಲಿ: ಮಹಾರಾಷ್ಟ್ರದಲ್ಲಿ ಗಣಪತಿ ಹಬ್ಬದ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸಲಾಗದ ಕಾರಣ ಗಣೇಶ ಉತ್ಸವಗಳಿಗೆ ಈ ವರ್ಷ ಅನುಮತಿ ನೀಡಲು ಒಲವು ಇಲ್ಲ ಎಂದು ಸುಪ್ರೀಂ ಕೋರ್ಟ್ 2020 ಆಗಸ್ಟ್ 21ರ ಶುಕ್ರವಾರ ಹೇಳಿತು.
ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ, ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಗಣೇಶ ಚತುರ್ಥಿ ಉತ್ಸವಗಳು ಸ್ವಭಾವತಃ ದೊಡ್ಡ ಜನಸಂದಣಿಯನ್ನು ಒಳಗೊಂಡಿರುತ್ತವೆ ಎಂದು ಸಮರ್ಥಿಸಿತು.
‘ಗಣಪತಿ ಹಬ್ಬಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದ ಕಾರಣ ನಾವು ಅದಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಸಿಜೆಐ ಹೇಳಿದರು.
ಸಮುದಾಯದ ವಾರ್ಷಿಕ ಶುದ್ಧೀಕರಣ ವಿಧಿಗಳನ್ನು ನಡೆಸುವ ಪರಿಷನ್ ಉತ್ಸವದ ಸಂದರ್ಭದಲ್ಲಿ ಮುಂಬೈಯ ಕೆಲವು ಜೈನ ದೇವಾಲಯಗಳನ್ನು ತೆರೆಯುವ ವಿಚಾರದ ಬಗ್ಗೆ ನಡೆದ ಕಲಾಪದ ವೇಳೆಯಲ್ಲಿ ಪೀಠವು ಈ ಅಭಿಪ್ರಾಯ ವ್ಯಕ್ತ ಪಡಿಸಿತು.
ಮಹಾರಾಷ್ಟ್ರ ಸರ್ಕಾರವು ಜೈನ ಮಂದಿರದಲ್ಲಿ ಪ್ರಾರ್ಥನೆ ನಡೆಸಲು ಅವಕಾಶ ಕೋರಿದ ಈ ಮನವಿಯನ್ನು ವಿರೋಧಿಸಿತು. ’ಇದು ಪಂಡೋರಾದ ಪೆಟ್ಟಿಗೆ (ಅಸ್ಥಿ ಪಂಜರಗಳ ಪೆಟ್ಟಿಗೆ). ನಿರ್ವಹಿಸಲಾಗದ ಸನ್ನಿವೇಶಗಳಿಗೆ ಕಾರಣವಾಗಬಹುದು, ಪ್ರತಿ ಸಮುದಾಯವು ತಮ್ಮ ಹಬ್ಬಗಳಿಗೆ ಕ್ರಮವಾಗಿ ಅನುಮೋದನೆ ಪಡೆಯಲು ಈ ಆದೇಶದೊಂದಿಗೆ ನ್ಯಾಯಾಲಯಕ್ಕೆ ಬರುತ್ತವೆ’ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿತು.
ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಅವರು ಮಹಾರಾಷ್ಟ್ರದ ಗಣೇಶ ಚತುರ್ಥಿ ಹಬ್ಬಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ, ಅದೇ ರಾಜ್ಯದಿಂದ ಬಂದಿರುವ ನ್ಯಾಯಮೂರ್ತಿ ಬೋಬ್ಡೆ ಅವರು ಇದಕ್ಕೂ ಅನುಮತಿ ಕೋರಿದರೆ ಏನಾಗಬಹುದು ಎಂದು ಊಹಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಗಣಪತಿ ಹಬ್ಬಗಳು ಸಂಪೂರ್ಣವಾಗಿ ವಿಭಿನ್ನ ಹೆಜ್ಜೆಯಲ್ಲಿ ನಿಲ್ಲುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಎಸ್‌ಒಪಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮತ್ತು ಒಂದೇ ಸಮಯದಲ್ಲಿ ಕೇವಲ ಐದು ಜನರಿಗೆ ಅವಕಾಶ ನೀಡಲಾಗುವುದು ಎಂಬಿತ್ಯಾದಿ ಹೆಚ್ಚುವರಿ ಷರತ್ತುಗಳ ಮೇಲೆ ದಾದರ್, ಚೆಂಬೂರ್ ಮತ್ತು ಬೈಕುಲ್ಲಾದಲ್ಲಿ ಮೂರು ಜೈನ ದೇವಾಲಯಗಳನ್ನು ತೆರೆಯಲು ನ್ಯಾಯಪೀಠ ಅನುಮತಿ ನೀಡಿತು.
ಅದೇ ಸಮಯದಲ್ಲಿ, ಈ ಆದೇಶವು ಒಂದು ಪೂರ್ವನಿದರ್ಶನವಾಗುವುದಿಲ್ಲ ಮತ್ತು ಬೇರೆ ಯಾವುದೇ ಪ್ರಕರಣಗಳಲ್ಲಿ ಬಳಸಲಾಗದು ಎಂದು ಉನ್ನತ ನ್ಯಾಯಾಲಯ ಸ್ಪಷ್ಟಪಡಿಸಿತು.
"ನಮ್ಮ ಆದೇಶವನ್ನು ಬೇರೆ ಯಾವುದೇ ಸಂದರ್ಭದಲ್ಲಿ, ಅದರಲ್ಲೂ ವಿಶೇಷವಾಗಿ ಜನರ ಸ್ವಭಾವವನ್ನು ನಿಯಂತ್ರಿಸಲಾಗದ ಜನರ ಸಭೆಯ ಸಂದರ್ಭದಲ್ಲಿ ಅನ್ವಯಿಸಲಾಗದು. ನಾವು ನಿರ್ದಿಷ್ಟವಾಗಿ ಗಣೇಶ ಚತುರ್ಥಿಯಲ್ಲಿ ನಡೆಯುವ ಸಭೆಯನ್ನು ಉಲ್ಲೇಖಿಸುತ್ತಿದ್ದೇವೆ. ಗಣೇಶ ಉತ್ಸವಕ್ಕೆ ಸಂಬಂಧಿಸಿದಂತೆ ಅರ್ಹತೆಯನ್ನು ಆಧರಿಸಿ ರಾಜ್ಯ ಸರ್ಕಾರವೇ ನಿರ್ಧರಿಸುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿತು.
ಗಣಪತಿ ಉತ್ಸವವು ಮಹಾರಾಷ್ಟ್ರದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಗಣೇಶ ವಿಗ್ರಹಗಳ ಸ್ಥಾಪನೆಯೊಂದಿಗೆ ಇದು ಶನಿವಾರ ಪ್ರಾರಂಭವಾಗಲಿದ್ದು, ಭವ್ಯ ಹಬ್ಬಗಳು ನಡೆದರೆ ಹತ್ತು ದಿನಗಳ ನಂತರ ಕೊನೆಗೊಳ್ಳುತ್ತದೆ.
ರಾಜ್ಯ ಸರ್ಕಾರ ಕೂಡ ಈ ವರ್ಷ ಯಾವುದೇ ದೊಡ್ಡ ಕೂಟಗಳು ಮತ್ತು ಪಂಡಾಲ್‌ಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
No comments:
Post a Comment