Thursday, August 13, 2020

ದೇಶದಲ್ಲಿ ಚೇತರಿಕೆ ಪ್ರಮಾಣ ೭೦.೭೬ಕ್ಕೆ ಏರಿಕೆ

 ದೇಶದಲ್ಲಿ ಚೇತರಿಕೆ ಪ್ರಮಾಣ ೭೦.೭೬ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಒಂದೇದಿನ ೬೬,೯೯೯ ಕೊರೋನಾವೈಸ್ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 13ರ ಗುರುವಾರ ೨೩,೯೬,೬೩೭ ಕ್ಕೆ ತಲುಪಿತು. ಇದೇ ವೇಳೆಗೆ ಚೇತರಿಕೆಯ ಪ್ರಮಾಣವು ಶೇಕಡಾ ೭೦.೭೬ ಕ್ಕೆ ಏರಿತು.

ದೇಶದಲ್ಲಿ ಒಟ್ಟು ೧೬,೯೫,೯೮೨ ಜನರು ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿದವು.

ಕಳೆದ ೨೪ ಗಂಟೆಗಳಲ್ಲಿ ೯೪೨ ರೋಗಿಗಳು ಸಾವನ್ನಪ್ಪಿದ್ದು, ಇದರೊಂದಿಗೆ ಕೋವಿಡ್ -೧೯ ಸಾವಿನ ಸಂಖ್ಯೆ ೪೭,೦೩೩ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಅಮೆರಿಕ ಮತ್ತು ಬ್ರೆಜಿಲ್ ನಂತರ ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಹಾನಿಗೆ ಒಳಗಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರವು ಸೋಂಕಿನಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿ ಮುಂದುವರೆದಿದೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಇವೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಐದು ರಾಜ್ಯಗಳಲ್ಲಿ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಇದುವರೆಗೆ ,೪೮,೩೧೩ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ,೪೭,೮೨೦ ಸಕ್ರಿಯ ಪ್ರಕರಣಗಳು ಮತ್ತು ೧೩,೪೦೮ ಚೇತರಿಸಿದ ಪ್ರಕರಣಗಳು ಸೇರಿವೆ. ರಾಜ್ಯದಲ್ಲಿ ಬುಧವಾರ ೧೨,೭೧೨ ಹೊಸ ಕೋವಿಡ್ -೧೯ ಪ್ರಕರಣಗಳು ದಾಖಲಾಗಿದ್ದರೆ, ಸಾವಿನ ಸಂಖ್ಯೆ ೧೮,೬೫ಕ್ಕೆ ಏರಿದೆ.

ಎರಡನೇ ಅತಿ ಹೆಚ್ಚು ಪೀಡಿತ ರಾಜ್ಯವಾದ ತಮಿಳುನಾಡಿನಲ್ಲಿ ,೮೭೧ ಹೊಸ ಕೋವಿಡ್-೧೯ ಪ್ರಕರಣಗಳು ಮತ್ತು ೧೧೯ ಸಾವುಗಳು ಬುಧವಾರ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ,೧೪,೫೨೦ ಕ್ಕೆ ತಲುಪಿದೆ.

ಆಂಧ್ರಪ್ರದೇಶ ಬುಧವಾರ ಒಟ್ಟಾರೆ .೫೦ ಲಕ್ಷ ಕೋವಿಡ್ -೧೯ ಪ್ರಕರಣಗಳನ್ನು ದಾಟಿದೆ, ರಾಜ್ಯದಲ್ಲಿ ,೫೯೭ ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೆ ,೫೪,೧೪೬ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದಲ್ಲಿ ,೮೮೩ ಸೋಂಕುಗಳು ಒಂದೇ ದಿನ ವರದಿಯಾಗಿವೆ. ರಾಜ್ಯದ ಕೊರೋನವೈರಸ್ ಪ್ರಕರಣಗಳು ಎರಡು ಲಕ್ಷದ ಸಮೀಪದಲ್ಲಿದೆ. ರಾಜ್ಯದಲ್ಲಿ ೮೦,೦೦೦ ಕ್ಕಿಂತ ಹೆಚ್ಚು ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ.

ಪರಿಣಾಮಕಾರಿ ಸಂಪರ್ಕ ಪತ್ತೆಗಾಗಿ ನವೀನ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಭಾಗವಾಗಿ ಕೋವಿಡ್ -೧೯ ರೋಗಿಗಳ ಫೋನ್ ಕರೆ ವಿವರ ದಾಖಲೆಗಳನ್ನು (ಸಿಡಿಆರ್) ಪೊಲೀಸರು ಕೇರಳದಲ್ಲಿ ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳದಲ್ಲಿ ಬುಧವಾರ ,೨೧೨ ಹೊಸ ಕೋವಿಡ್-೧೯ ಪ್ರಕರಣಗಳು ಮತ್ತು ಆರು ಸಾವುಗಳು ವರದಿಯಾಗಿದ್ದು, ಸೋಂಕಿನ ಸಂಖ್ಯೆ ೩೮,೧೪೪ ಕ್ಕೆ ಮತ್ತು ಸಾವಿನ ಸಂಖ್ಯೆ ೧೨೬ ಕ್ಕೆ ತಲುಪಿದೆ.

ಈಶಾನ್ಯದಲ್ಲಿ, ಅಸ್ಸಾಮಿನಲ್ಲಿ ಅತಿ ಹೆಚ್ಚು ಏಕದಿನ ಏರಿಕೆ ಕಂಡಿದ್ದು, ಬುಧವಾರ ,೫೯೩ ಕೋವಿಡ್-೧೯ ಪ್ರಕರಣಗಳು ದಾಖಲಾಗಿವೆ. ಅಸ್ಸಾಮಿನಲ್ಲಿ ಒಟ್ಟು ೧೬೧ ಸಾವುಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೆ ೬೮,೯೯೯ ಪ್ರಕರಣಗಳು ವರದಿಯಾಗಿವೆ.

ಕೊರೋನವೈರಸ್ ಸಾಂಕ್ರಾಮಿಕ ರೋಗವು ಕಳೆದ ವರ್ಷ ಡಿಸೆಂಬರಿನಲ್ಲಿ ಚೀನಾದಲ್ಲಿ ಹೊರಹೊಮ್ಮಿದಾಗಿನಿಂದ ಜಾಗತಿಕವಾಗಿ .೪೯ ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. .೦೬ ಕೋಟಿಗೂ ಹೆಚ್ಚು ಜನರಿಗೆ ಸಾಂಕ್ರಾಮಿಕ ವೈರಸ್ ಸೋಂಕು ತಗುಲಿದೆ.

ವಿಶ್ವದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ದೇಶವಾದ ಅಮೆರಿಕದಲ್ಲಿ ,೬೩,೩೭೦ ಸಾವುಗಳು ಮತ್ತು ,೦೮೫,೮೨೧ ಸೋಂಕಿನ ಪ್ರಕರಣಗಳು ಸೋಮವಾರ ಸಂಜೆಯ ವೇಳೆಗೆ ದಾಖಲಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಟ್ರ್ಯಾಕರ್ ತಿಳಿಸಿದೆ.

No comments:

Advertisement