Wednesday, August 12, 2020

ಸೌದಿ ಸಾಂತ್ವನಕ್ಕೆ ಪಾಕ್ ಸರ್ಕಸ್, ಸೇನಾ ಮುಖ್ಯಸ್ಥನ ದೌಡು

 ಸೌದಿ ಸಾಂತ್ವನಕ್ಕೆ ಪಾಕ್ ಸರ್ಕಸ್, ಸೇನಾ ಮುಖ್ಯಸ್ಥನ ದೌಡು

ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಅಂತಿಮ ಎಚ್ಚರಿಕೆ ನೀಡಿದ ಬಳಿಕ ಕೆಂಡಾಮಂಡಲ ಸಿಟ್ಟಿಗೆದ್ದಿರುವ ಸೌದಿ ಅರೇಬಿಯಾದ ಕೋಪ ಶಮನಗೊಳಿಸಲು ಯತ್ನಿಸುವ ಸಲುವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಅಹ್ಮದ್ ಬಜ್ವಾ ಮುಂದಿನ ವಾರ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಾಕಿಸ್ತಾನ ಪತ್ರಿಕೆದಿ ನ್ಯೂಸ್2020 ಆಗಸ್ಟ್ 12ರ ಬುಧವಾರ ವರದಿ ಮಾಡಿತು.

ಕಳೆದ ವಾರ ಸಂದರ್ಶನವೊಂದರಲ್ಲಿ ವಿದೇಶಾಂಗ ಸಚಿವರು ಸೌದಿ ನೇತೃತ್ವದ ಇಸ್ಲಾಮಿಕ್ ಸಮ್ಮೇಳನದ ಸಂಘಟನೆಯ ವಿದೇಶಾಂಗ ಮಂತ್ರಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದರು.

"ನೀವು ಸಭೆ ಕರೆಯಲು ಸಾಧ್ಯವಾಗದಿದ್ದರೆ, ಕಾಶ್ಮೀರದ ವಿಷಯದಲ್ಲಿ ನಮ್ಮೊಂದಿಗೆ ನಿಲ್ಲಲು ಮತ್ತು ತುಳಿತಕ್ಕೊಳಗಾದ ಕಾಶ್ಮೀರಿಗಳನ್ನು ಬೆಂಬಲಿಸಲು ಸಿದ್ಧವಾಗಿರುವ ಇಸ್ಲಾಮಿಕ್ ರಾಷ್ಟ್ರಗಳ ಸಭೆಯನ್ನು ಕರೆಯಲು ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೇಳಿಕೊಳ್ಳುತ್ತೇನೆ" ಎಂದು ಖುರೇಷಿ ಟಿವಿ ಮಾಧ್ಯಮಕ್ಕೆ ತಿಳಿಸಿದ್ದರು.

ವಿದೇಶಾಂಗ ಸಚಿವಾಲಯವು ನಂತರ ಸಚಿವರ ಅಂತಿಮ ಎಚ್ಚರಿಕೆಯನ್ನು ಅನುಸರಿಸಿ, ಇದು ಬಾಯ್ತಪ್ಪಿನ ಹೇಳಿಕೆಯಲ್ಲ ಎಂಬುದನ್ನು ಸಂಕೇತಿಸಿತ್ತು. ವಿದೇಶಾಂಗ ಸಚಿವರ ಹೇಳಿಕೆ ರಾಜತಾಂತ್ರಿಕ ಮಾನದಂಡಗಳಿಗೆ ವಿರುದ್ಧವಾಗಿದೆ ಎಂಬ ಸಲಹೆಗಳನ್ನು ವಿದೇಶಾಂಗ ಕಚೇರಿ ತಿರಸ್ಕರಿಸಿತ್ತು.

ಬಳಿಕ ವಿದೇಶಾಂಗ ಸಚಿವ ಖುರೇಷಿ ಸ್ಪಷ್ಟೀಕರಣ ನೀಡಲು ಎರಡು ಬಾರಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಆದರೆ ನಂತರ ಆಹ್ವಾನಗಳನ್ನು ರದ್ದುಪಡಿಸಿದ್ದರು. ಇಸ್ಲಾಮಾಬಾದಿನಲ್ಲಿ ರದ್ದಾದ ಸುದ್ದಿಗೋಷ್ಠಿಗಳು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೆ ಸುಸ್ಥಿತಿಗೆ ತರಲು ಕೇವಲ ಸ್ಪಷ್ಟೀಕರಣವು ಸಾಕಾಗುವುದಿಲ್ಲ ಎಂಬ ಸರ್ಕಾರದ ನಿರ್ಣಯವನ್ನು ಪ್ರತಿಬಿಂಬಿಸಿದೆ.

ಜನರಲ್ ಬಜ್ವಾ ಅವರ ಸೌದಿ ಭೇಟಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

ಆದಾಗ್ಯೂ, ಜನರಲ್ ಬಜ್ವಾ ಸೋಮವಾರ ಸೌದಿ ರಾಯಭಾರಿ ಅಡ್ಮಿರಲ್ ನವಾಫ್ ಬಿನ್ ಸೈದ್ ಅಲ್-ಮಾಲಿಕಿ ಅವರನ್ನು ಭೇಟಿ ಮಾಡಿದ್ದಾರೆ. ಆಗ ಸೇನೆಯು "ಪರಸ್ಪರ ಹಿತಾಸಕ್ತಿಯ ವಿಷಯಗಳು, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಮತ್ತು ದ್ವಿಪಕ್ಷೀಯ ರಕ್ಷಣಾ ಸಂಬಂಧಗಳ ಬಗ್ಗೆ ಚರ್ಚಿಸಲು ಸಭೆ ನಡೆಯಿತು ಎಂದು ಸೇನೆ ವಿವರಿಸಿದೆ.

ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿದ ಪತ್ರಿಕೆ, ಭೇಟಿಯು ಸೌದಿ ಜೊತೆಗಿನ ಇತ್ತೀಚಿನ ತಪ್ಪು ಗ್ರಹಿಕೆಗಳನ್ನು ನಿವಾರಿಸುವ ಭರವಸೆಯನ್ನು ಇಸ್ಲಾಮಾಬಾದಿನಲ್ಲಿ ಹುಟ್ಟು ಹಾಕಿದೆ ಎಂದು ಬರೆಯಿತು.

೨೦೧೮ರಲ್ಲಿ ಆರ್ಥಿಕತೆಗೆ ನೆರವಾಗಲು ಇಮ್ರಾನ್ ಖಾನ್ ಕೋರಿಕೆಯ ಮೇರೆಗೆ ಸೌದಿ ಅರೇಬಿಯಾವು ೨೦೧೮ರಲ್ಲಿ ನೀಡಿದ್ದ ಬಿಲಿಯನ್ (೧೦೦ ಕೋಟಿ) ಡಾಲರ್ ಸಾಲವನ್ನು ವಸೂಲಿ ಮಾಡಿದ ರೀತಿ ಗಮನಿಸಿದರೆ, ಪಾಕಿಸ್ತಾನವು ಅದನ್ನು ಸಾಂತ್ವನಗೊಳಿಸುವುದು ಕಠಿಣ ಕಾರ್ ಎಂದು ಸುದ್ದಿ ಮೂಲಗಳು ವಿಶ್ಲೇಷಿಸಿವೆ.

ಏಷ್ಯನ್ ನಿಕ್ಕಿ ರಿವ್ಯೂ ಪ್ರಕಾರ, ಸೌದಿ ಅರೇಬಿಯಾ ಘೋಷಿಸಿದ್ದ ಪ್ಯಾಕೇಜ್ನಲ್ಲಿ ಬಿಲಿಯನ್ (೩೦೦ ಕೋಟಿ) ಡಾಲರ್ ಸಾಲ ಮತ್ತು . (೩೨೦ ಕೋಟಿ) ಬಿಲಿಯನ್ ಡಾಲರ್ ತೈಲ ಸಾಲ ಸೌಲಭ್ಯವಿತ್ತು.

ತೈಲ ಸಾಲ ಸೌಲಭ್ಯವನ್ನು ಮೇ ತಿಂಗಳಲ್ಲಿ ಸ್ಥಗಿತಗೊಳಿಸಲಾಯಿತು ಮತ್ತು ನಂತರ ಸೌದಿ ಅರೇಬಿಯಾವು ಸಾಲವನ್ನು ಪೂರ್ಣವಾಗಿ ಮರುಪಾವತಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತು. ಪಾಕಿಸ್ತಾನವು ತನ್ನಉಕ್ಕಿನ ಸಹೋದರ ಚೀನಾದಿಂದ ಎರವಲು ಪಡೆದು ಬಿಲಿಯನ್ (೧೦೦ ಕೋಟಿ) ಡಾಲರ್ ಸಾಲವನ್ನು ಮರುಪಾವತಿ ಮಾಡಿತ್ತು.

No comments:

Advertisement