ಅಮಿತಾಭ್ ಬಚ್ಚನ್ ಕೊರೋನಾದಿಂದ ಗುಣಮುಖ
ಮುಂಬೈ: ಕೊರೋನಾವೈರಸ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಾಲಿವುಡ್ ಚಿತ್ರ ನಟ ಅಮಿತಾಭ್ ಬಚ್ಚನ್ 2020 ಆಗಸ್ಟ್ 02ರ ಭಾನುವಾರ ಬಿಡುಗಡೆಯಾದರು.
ಆಸ್ಪತ್ರೆಗೆ ದಾಖಲಾದ ೨೩ ದಿನಗಳ ಬಳಿಕ ಅಮಿತಾಬ್ ಬಚ್ಚನ್ ಬಿಡುಗಡೆಯಾಗಿದ್ದು, ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
೭೭ ವರ್ಷದ ಅಮಿತಾಬ್ ಬಚ್ಚನ್ ಅವರಿಗೆ ಜುಲೈ ೧೧ ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆ ನಂತರ ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳಿಗೂ ಕೋವಿಡ್ ಇರುವುದು ಬೆಳಕಿಗೆ ಬಂದಿತ್ತು.
ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತಾಬ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿರುವುದಾಗಿ ಟ್ವೀಟ್ ಮಾಡಿದರು.
‘ನನ್ನ ಕೋವಿಡ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಾನು ಮನೆಗೆ ಮರಳಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. ದೇವರ ಕೃಪೆ, ಅಪ್ಪ-ಅಮ್ಮನ ಆಶೀರ್ವಾದ, ಆತ್ಮೀಯ ಸ್ನೇಹಿತರ ಪ್ರಾರ್ಥನೆ, ಅಭಿಮಾನಿಗಳ ಹರಕೆ ಮತ್ತು ನಾನಾವತಿ ಆಸ್ಪತ್ರೆಯ ಅತ್ಯುತ್ತಮ ಆರೈಕೆ ಮತ್ತು ಶುಶ್ರೂಷೆಯಿಂದ ನನಗೆ ಈ ದಿನವನ್ನು ಕಾಣಲು ಸಾಧ್ಯವಾಗಿದೆ’ ಎಂದು ಅಮಿತಾಬ್ ಬಚ್ಚನ್ ಟ್ವಿಟ್ಟರ್ ಸಂದೇಶದಲ್ಲಿ ಬರೆದರು.
No comments:
Post a Comment