Thursday, August 27, 2020

ಗಡಿ ವಿಚಾರ ಬಿಟ್ಟು ‘ದೊಡ್ಡ ಚಿತ್ರ’ವನ್ನು ಭಾರತ ನೋಡಬೇಕಂತೆ..!

 ಗಡಿ ವಿಚಾರ ಬಿಟ್ಟು ‘ದೊಡ್ಡ ಚಿತ್ರ’ವನ್ನು
ಭಾರತ ನೋಡಬೇಕಂತೆ..!


ಬೀಜಿಂಗ್: ಭಾರತವು ದ್ವಿಪಕ್ಷೀಯ ಸಂಬಂಧಗಳದೊಡ್ಡ ಚಿತ್ರವನ್ನು ನೋಡಬೇಕು ಮತ್ತು ಬಾಂಧವ್ಯವನ್ನು  ಮತ್ತೆ ಹಾದಿಗೆ ತರಲು ಚೀನಾದೊಂದಿಗೆ ಕೆಲಸ ಮಾಡಬೇಕು, ಅದು ತಪ್ಪು ನಿರ್ಣಯಗಳನ್ನು ತಪ್ಪಿಸಬೇಕುಎಂದು ಚೀನಾದ ರಕ್ಷಣಾ ಸಚಿವಾಲಯ 2020 ಆಗಸ್ಟ್ 27ರ ಗುರುವಾರ ಭಾರತಕ್ಕೆ ಬೋಧನೆ ಮಾಡಿತು.

ಗಡಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಬೇಕಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವೂ ಕಿಯಾನ್ ಹೇಳಿದ್ದು, ಕಳೆದ ವಾರ ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದಂತೆ ಪೂರ್ವ ಲಡಾಕ್ ಘರ್ಷಣೆಯ ಸ್ಥಳಗಳ ಕುರಿತ ಭಿನ್ನಾಭಿಪ್ರಾಯಗಳನ್ನು ಇನ್ನೂ ಬಗೆಹರಿಲಾಗಿಲ್ಲ ಎಂಬುದನ್ನು ಸೂಚಿಸಿತು.

ರಕ್ಷಣಾ ಸಚಿವಾಲಯದ ತಮ್ಮ ಮಾಸಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೂ, ಉಭಯ ದೇಶಗಳ ನಡುವಣ ವಾಸ್ತವಿಕ ಗಡಿಯಾದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್ಎಸಿ) ಪರಿಸ್ಥಿತಿ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಅಧಿಕೃತ ಮಿಲಿಟರಿ ವೆಬ್ಸೈಟ್ನಲ್ಲಿ ಪ್ರಕಟವಾದ ವೂ ಅವರ ಹೇಳಿಕೆಯು ಚೀನಾದ ವಿದೇಶಾಂಗ ಸಚಿವಾಲಯದಂತೆಯೇ, ಪ್ರಸ್ತುತ ಪಾತಾಳಕ್ಕೆ ಮುಟ್ಟಿರುವ ಸಂಬಂಧಗಳನ್ನು ಮರುಹೊಂದಿಸುವ ಹೊಣೆಗಾರಿಕೆಯನ್ನು ಭಾರತದ ಮೇಲೆ ಹೊರಿಸಿತು.

ಗಡಿ ಪಡೆಗಳ ನಡುವಿನ ಮುಖಾಮುಖಿ ಘರ್ಷಣೆಯು ಜೂನ್ ೧೫ ರಂದು ಗಲ್ವಾನ್ ಕಣಿವೆಯಲ್ಲಿ ೨೦ ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿಸಿದ ಮಾರಣಾಂತಿಕ ಘರ್ಷಣೆಗೆ ಕಾರಣವಾಗುವುದಕ್ಕೆ ಮುಂಚೆ ಏಪ್ರಿಲ್ ತಿಂಗಳಲ್ಲಿ ಇದ್ದ ಪರಿಸ್ಥಿತಿಗೆ ಮರಳಲು ನಡೆದ ಹಲವಾರು ಸುತ್ತಿನ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳು ಯಥಾಸ್ಥಿತಿ ಪುನಃಸ್ಥಾಪಿಸುವಲ್ಲಿ ಯಶಸ್ಸು ಗಳಿಸಿಲ್ಲ.

ದ್ವಿಪಕ್ಷೀಯ ಸಂಬಂಧಗಳ ದೊಡ್ಡ ಚಿತ್ರವನ್ನು ಗಮನದಲ್ಲಿಟ್ಟುಕೊಂಡು ಗಡಿ ಸಮಸ್ಯೆಯನ್ನು ದೊಡ್ಡ ಚಿತ್ರದಲ್ಲಿ ಸೂಕ್ತ ಸ್ಥಾನದಲ್ಲಿ ಇರಿಸುವ ಮೂಲಕ, ತಪ್ಪು ನಿರ್ಣಯವನ್ನು ತಪ್ಪಿಸಿ. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಿ ಮತ್ತು ಸಾಮಾನ್ಯ ಅಭಿವೃದ್ಧಿಗಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಸರಿಯಾದ ಹಾದಿಗೆ ತರಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಿಎಂದು ವೂ ಹೇಳಿಕೆ ಭಾರತಕ್ಕೆ ಬೋಧನೆ ಮಾಡಿದೆ. ಚೀನಾದ ರಾಜತಾಂತ್ರಿಕ ನಿರೂಪಣೆಯಲ್ಲಿ ಭಾರತಕ್ಕೆದೊಡ್ಡ ಚಿತ್ರಸಲಹೆಯು, ಗಡಿಯಲ್ಲಿನ ಉದ್ವೇಗವು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಆರ್ಥಿಕ ಸಹಕಾರದಂತಹ ಉಳಿದ ಘಟಕಗಳ ಮೇಲೆ ಪರಿಣಾಮ ಬೀರಬಾರದು ಎಂದು ಸೂಚಿಸುತ್ತದೆ.

ಗಡಿ ವ್ಯವಹಾರಗಳ ಕುರಿತಾದ ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್ (ಡಬ್ಲ್ಯುಎಂಸಿಸಿ) ಕೊನೆಯ ಸಭೆಯ ಅಂತ್ಯದಲ್ಲಿ ಎಲ್ಎಸಿಯಲ್ಲಿ ಸೇನಾ ಜಮಾವಣೆ ನಿಲ್ಲಿಸುವ ಬಗ್ಗೆ ಭಾರತ ಮತ್ತು ಚೀನಾಕ್ಕೆ ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸಾಧ್ಯವಾಗಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಸಭೆಯಲ್ಲಿ ಶೀಘ್ರವಾಗಿ ಪರಿಹರಿಸಬೇಕಾದ "ಮಹೋನ್ನತ ಸಮಸ್ಯೆಗಳುಇವೆ ಎಂದು ನವದೆಹಲಿ ಒತ್ತಿ ಹೇಳಿತ್ತು.

ಆದಾಗ್ಯೂ, ಚೀನಾದ ರಕ್ಷಣಾ ಸಚಿವಾಲಯವು ಬೀಜಿಂಗ್ ನಿರೂಪಣೆಯೊಂದಿಗೆ ಮುಂದುವರಿಯಿತು, ಇದು ನವದೆಹಲಿಯ ಕಾಳಜಿಗಳನ್ನು ಮುಚ್ಚಿಹಾಕಿತ್ತು.

ಚೀನಾ ಮತ್ತು ಭಾರತ ಎರಡೂ ದೇಶಗಳ ನಾಯಕರು ತಲುಪಿದ ಪ್ರಮುಖ ಒಮ್ಮತ ಮತ್ತು ಇತರ ಸಂಬಂಧಿತ ಒಪ್ಪಂದಗಳನ್ನು ಅನುಸರಿಸಲು ಒಪ್ಪಿಕೊಂಡಿವೆ ಎಂದು ವೂ ಗುರುವಾರ ಹೇಳಿದರು.

ಉಭಯ ದೇಶಗಳುಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ಮತ್ತು ಸಂವಹನವನ್ನು ಕಾಪಾಡಿಕೊಳ್ಳುವುದು, ಚೀನಾ-ಭಾರತ ಗಡಿ ಪರಿಸ್ಥಿತಿಯನ್ನು ಮತ್ತಷ್ಟು ಸರಾಗಗೊಳಿಸವುದು ಮತ್ತು ಉದ್ವಿಗ್ನತೆಯನ್ನು ತಣ್ಣಗಾಗಿಸುವುದು, ಉಳಿದ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸುವುದು ಮತ್ತು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಕಾಪಾಡುವುದುಇತ್ಯಾದಿ ಬಗ್ಗೆ ಒಮ್ಮತ ಸಾಧಿಸಲಾಗಿದೆ ಎಂದು ವೂ ನುಡಿದರು.

ಚೀನಾ ಮತ್ತು ಭಾರತ ಪ್ರಮುಖ ನೆರೆಹೊರೆಯವರು ಎಂದು ಅವರ ಹೇಳಿದರು.

"ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಉಭಯ ಕಡೆಯವರಿಗೂ ತಮ್ಮ ತಮ್ಮ ಕಡೆಯಲ್ಲಿನ ಅಭಿವೃದ್ಧಿಗೆ ಅನುಕೂಲಕರವಾಗಿದೆ. ಅಲ್ಲದೆ ಪ್ರಾದೇಶಿಕ ಮತ್ತು ವಿಶ್ವ ಶಾಂತಿ ಹಾಗೂ ಸ್ಥಿರತೆಗೆ ಸಹಕಾರಿಯಾಗಿದೆ" ಎಂದು ಅವರು ಹೇಳಿದರು.

No comments:

Advertisement