ಭಾರತ-ಜಪಾನ್ ಶೃಂಗಸಭೆ ಸೆಪ್ಟೆಂಬರಿನಲ್ಲಿ
ಪ್ರಮುಖ ಸೇನಾ ಒಪ್ಪಂದಕ್ಕೆ ಮೋದಿ, ಅಬೆ ಸಹಿ
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಭಾರತ-ಜಪಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಪ್ರಮುಖ ಸೇನಾ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಮೋದಿ ಮತ್ತು ಅಬೆ ನಡುವಣ ಭಾರತ-ಜಪಾನ್ ಶೃಂಗಸಭೆಯು ಮುಂದಿನ ತಿಂಗಳು ನಡೆಯಲಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 17ರ ಸೋಮವಾರ ತಿಳಿಸಿದವು.
ಉಭಯ ನಾಯಕರು ಪ್ರಮುಖ ಸೇನಾ ಸಾಗಣೆ ಒಪ್ಪಂದ, ಸ್ವಾಧೀನ ಮತ್ತು ಕ್ರಾಸ್ ಸರ್ವಿಂಗ್ ಅಗ್ರಿಮೆಂಟ್‌ಗಳಿಗೆ (ಎಸಿಎಸ್‌ಎ) ಸಹಿ ಹಾಕುವ ನಿರೀಕ್ಷೆಯಿದೆ ಮತ್ತು ಜಪಾನಿನ ಕೆಲವು ಉತ್ಪಾದನಾ ಘಟಕಗಳು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚಿಸಲಿದ್ದಾರೆ.
ಸೌತ್ ಬ್ಲಾಕ್ ಅಧಿಕಾರಿಗಳ ಪ್ರಕಾರ, ವರ್ಚುವಲ್ ಶೃಂಗಸಭೆಯ ಅಂತಿಮ ದಿನಾಂಕಗಳು ಇನ್ನೂ ಚರ್ಚೆಯಲ್ಲಿವೆ. ಉಭಯ ದೇಶಗಳ ರಾಜತಾಂತ್ರಿಕರು ಸೆಪ್ಟೆಂಬರ್ ತಿಂಗಳಿನಲ್ಲಿ ದಿನಾಂಕ ಪರಿಗಣಿಸಲು ಯೋಚಿಸುವ ಮುನ್ನ ಅಕ್ಟೋಬರ್‌ನಲ್ಲಿ ಸಭೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಿದ್ದರು.
ಅಸ್ಸಾಮಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಡಿಸೆಂಬರ್ ೧೫-೧೭ರಂದು ಗುವಾಹಟಿಯಲ್ಲಿ ನಡೆಸಲು ಉದ್ದೇಶಿಸಿದ್ದ ಶೃಂಗಸಭೆಯನ್ನು ಮುಂದೂಡಲಾಗಿತ್ತು.
ಭಾರತದ ಪೂರ್ವ ಲಡಾಕ್ ವಲಯ ಮತ್ತು ಜಪಾನ್‌ನ ಸೆನ್ಕಾಕು ದ್ವೀಪಗಳಲ್ಲಿ ಕ್ರಮವಾಗಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸಿದ ಆಕ್ರಮಣಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಈ ಶೃಂಗಸಭೆ ವ್ಯವಸ್ಥೆಯಾಗಿದೆ.
ಉಭಯ ನಾಯಕರು ಲಡಾಖ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಚೀನಾದ ಆಕ್ರಮಣಶೀಲತೆಯ ಬಗ್ಗೆ ಚರ್ಚಿಸುವುದಲ್ಲದೆ, ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಈ ನಾಲ್ಕು ದೇಶಗಳ ಚತುರ್ಭುಜ ಒಕ್ಕೂಟವಾದ ಕ್ವಾಡ್ ಪರಿಕಲ್ಪನೆಯನ್ನು ಗಟ್ಟಿಗೊಳಿಸಲಿದ್ದಾರೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ.
ನಾಲ್ಕು ಕ್ವಾಡ್ ದೇಶಗಳು ಬೀಜಿಂಗ್‌ನ ’ತೋಳ-ಯೋಧ ರಾಜತಾಂತ್ರಿಕತೆ’ಯನ್ನು ಎದುರಿಸಲು ಮತ್ತು ಸಂಚಾರದ ಸ್ವಾತಂತ್ರ್ಯಕ್ಕಾಗಿ ಸಂವಹನ ಸಮುದ್ರ ಮಾರ್ಗಗಳನ್ನು ಮುಕ್ತವಾಗಿರಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿವೆ.
ಭಾರತ ಮತ್ತು ಜಪಾನ್ ಪರಸ್ಪರರ ಸೇನೆಗೆ ಬೆಂಬಲ ಮತ್ತು ಸಾಗಣೆಯನ್ನು ವಿಸ್ತರಿಸುವ ಪ್ರಮುಖವಾದ ಎಸಿಎಸ್‌ಎಗೆ ಉಭಯ ನಾಯಕರು ಚಾಲನೆ ನೀಡುವ ನಿರೀಕ್ಷೆಯಿದೆ. ನವದೆಹಲಿಯು ಈಗಾಗಲೇ ಇತರ ಇಬ್ಬರು ಕ್ವಾಡ್ ಸದಸ್ಯರಾದ ಆಸ್ಟ್ರೇಲಿಯಾ ಮತ್ತು ಅಮೆರಿಕ ಜೊತೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ.
ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾವನ್ನು ಮಲಬಾರ್ ನೌಕಾ ಕವಾಯತಿಗೆ ಆಹ್ವಾನಿಸುವ ಭಾರತದ ಔಪಚಾರಿಕ ನಿರ್ಧಾರ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಆದರೆ ಇದು ಔಪಚಾರಿಕತೆ ಮಾತ್ರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾವು ಮಿಲಿಟರಿ ಡ್ರಿಲ್‌ಗಳಿಗೆ ಸೇರ್ಪಡೆಗೊಂಡಿದ್ದು, ಇತರ ಮೂರು ಕ್ವಾಡ್ ಸದಸ್ಯರಾದ ಭಾರತ, ಜಪಾನ್ ಮತ್ತು ಅಮೆರಿಕ- ಈ ಗುಂಪನ್ನು ಮಿಲಿಟರಿ ಮಟ್ಟದಲ್ಲಿ ತೊಡಗಿಸಿಕೊಳ್ಳುವುದು ಇದೇ ಮೊದಲು.
ಪ್ರಧಾನಿ ಮೋದಿ ಮತ್ತು ಪ್ರಧಾನಿ ಅಬೆ ಅವರು ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಮಧ್ಯ ಸಾಮ್ರಾಜ್ಯದಿಂದ ಎದುರಾಗುತ್ತಿರುವ ಸವಾಲುಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಸರ್ಕಾರಿ ಅಧಿಕಾರಿಗಳ ಪ್ರಕಾರ, ಉಭಯ ನಾಯಕರು ಭಾರತದೊಂದಿಗೆ ಜಪಾನಿನ ಉತ್ಪಾದನಾ ಚಟುವಟಿಕೆಗೆ ಬಾಗಿಲು ತೆರೆಯುವುದರೊಂದಿಗೆ ಆರ್ಥಿಕ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ ಮತ್ತು ಬಹುಶಃ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಂದರು ಮೂಲಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಟೋಕಿಯೊವನ್ನು ತೊಡಗಿಸಿಕೊಳ್ಳುತ್ತಾರೆ.
ಭಾರತವು ಚೀನಾದೊಂದಿಗಿನ ತನ್ನ ಗಡಿಯಲ್ಲಿನ ಶಾಂತಿ ಮತ್ತು ಸೌಹಾರ್ದವನ್ನು ದ್ವಿಪಕ್ಷೀಯ ಸಂಬಂಧಗಳೊಂದಿಗೆ ಜೋಡಿಸಿದರೆ, ಪ್ರಧಾನಿ ಶಿಂಜೊ ಅಬೆ ಅವರು ತಮ್ಮದೇ ಕ್ಯಾಬಿನೆಟ್ ಸದಸ್ಯರಿಂದ ಚೀನಾದೊಂದಿಗೆ ಕಠಿಣ ಮಾರ್ಗವನ್ನು ಅಳವಡಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿದ್ದಾರೆ.
ಬೀಜಿಂಗ್ ವಿಸ್ತರಣಾವಾದಿ ವಿಧಾನವು ಲಡಾಖ್‌ಗೆ ಸೀಮಿತವಾಗಿಲ್ಲ. ಅದು ಸೆನ್ಕಾಕು ದ್ವೀಪಗಳ ಮಾಲೀಕತ್ವದ ಬಗ್ಗೆ ಜಪಾನ್‌ನೊಂದಿಗೆ ಭದ್ರತಾ ಸಮಸ್ಯೆಗಳನ್ನು ಸೃಷ್ಟಿಸಿದೆ. ಚೀನಾ ತನ್ನ ವಿಶೇಷ ಆರ್ಥಿಕ ವಲಯವನ್ನು ವಿಸ್ತರಿಸುವ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಮೀರಿದ ಹಿಡಿತವನ್ನು ಬಲಪಡಿಸುವ ದೃಷ್ಟಿಯಿಂದ ಡಯೋಯು ದ್ವೀಪಗಳ ಮೇಲೆ ತನ್ನ ಹಕ್ಕು ಪ್ರತಿಪಾದನೆ ಮಾಡಿರುವಂತೆಯೇ ಸನ್ಕಾಕು ದ್ವೀಪಗಳ ಮೇಲೂ ಕಣ್ಣಿಟ್ಟಿದೆ. ಜಪಾನಿನ ಜನರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಟೋಕಿಯೊ ಭೇಟಿಯನ್ನು ರದ್ದುಗೊಳಿಸುವುದರ ಪರವಾಗಿ ಮಾತ್ರವಲ್ಲ, ಹೊಸ ಹಾಂಕಾಂಗ್ ಭದ್ರತಾ ಕಾನೂನಿನ ವಿಚಾರದಲ್ಲಿ ಬೀಜಿಂಗ್ ಬಗ್ಗೆ ಅಬೆ ಸರ್ಕಾರವು ಹೆಚ್ಚು ನಿರ್ಣಾಯಕ ಆಗಿರಬೇಕು ಎಂದು ಬಯಸುತ್ತಾರೆ.
No comments:
Post a Comment