ನ್ಯಾಯಾಂಗ ನಿಂದನೆ: ಕ್ಷಮೆ ಕೋರಲು ಪ್ರಶಾಂತ ಭೂಷಣ್ ನಕಾರ
ಗ್ರಾಹಕರ ಸುಖ-ದುಃಖ
My Blog List
Monday, August 24, 2020
ನ್ಯಾಯಾಂಗ ನಿಂದನೆ: ಕ್ಷಮೆ ಕೋರಲು ಪ್ರಶಾಂತ ಭೂಷಣ್ ನಕಾರ
ನವದೆಹಲಿ: ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಕ್ಷಮೆಯಾಚಿಸಲು ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್ 2020
ಆಗಸ್ಟ್
24ರ ಸೋಮವಾರ ನಿರಾಕರಿಸಿದರು.
ತಾವು ವ್ಯಕ್ತಪಡಿಸಿದ ಸಂಗತಿಗಳು ತಮ್ಮ ನಂಬಿಕೆಯನ್ನು ಪ್ರತಿನಿಧಿಸುತ್ತಿವೆ ಎಂದು ಭೂಷಣ್ ಹೇಳಿದರು.
‘ಅಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರೆ ನನ್ನ ಆತ್ಮಸಾಕ್ಷಿಯನ್ನು ನಿಂದಿಸಿದಂತಾಗುತ್ತದೆ’ ಎಂದು ಪ್ರಶಾಂತ ಭೂಷಣ್ ಹೇಳಿದ್ದಾದರು.
ಈ ಬಗ್ಗೆ ನ್ಯಾಯಾಲಯಕ್ಕೆ ಪೂರಕ ಹೇಳಿಕೆಯನ್ನು ಸೋಮವಾರ ಸಲ್ಲಿಸಿರುವ ಅವರು, ‘ನನ್ನ ನಂಬಿಕೆಗಳ ವಿರುದ್ಧವಾಗಿ, ಷರತ್ತುಬದ್ಧ ಅಥವಾ ಬೇಷರತ್ ಆಗಿ ಕ್ಷಮೆಯಾಚಿಸುವುದು ಅಪ್ರಾಮಾಣಿಕತೆಯಾಗುತ್ತದೆ’ ಎಂದು ತಿಳಿಸಿದರು.
ನ್ಯಾಯಾಲಯದ ಅಧಿಕಾರಿಯಾಗಿ ಸ್ಟರ್ಲಿಂಗ್ ದಾಖಲೆಯಿಂದ ವಿಚಲವಾಗಿದೆ ಎಂದು ನಂಬಿದಾಗ ಮಾತನಾಡುವುದು ಕರ್ತವ್ಯ ಎಂದು ಭಾವಿಸಿದ್ದೇನೆ. ಹೀಗಾಗಿ ನಾನು ಸದಭಿಪ್ರಾಯದಿಂದ ಈ ಹೇಳಿಕೆ ನೀಡಿದ್ದೇನೆ, ಸುಪ್ರೀಂ ಕೋರ್ಟ್ ಅಥವಾ ಯಾವುದೇ ನಿರ್ದಿಷ್ಟ ಮುಖ್ಯ ನ್ಯಾಯಮೂರ್ತಿಯನ್ನು ನ್ಯಾಯಮೂರ್ತಿಯವರನ್ನು ಕೆಣಕುವುದಕ್ಕಾಗಿ ಅಲ್ಲ. ರಚನಾತ್ಮಕ ಟೀಕೆಗಳನ್ನು ಮಾಡುವುದರಿಂದ ನ್ಯಾಯಾಲಯವು ಸಂವಿಧಾನದ ರಕ್ಷಕ ಮತ್ತು ಜನರ ಹಕ್ಕುಗಳ ಪಾಲಕನಾಗಿ ತನ್ನ ದೀರ್ಘಕಾಲದ ಪಾತ್ರದಿಂದ ದೂರವಾಗುವ ಯಾವುದೇ ದಿಕ್ ಚ್ಯುತಿಯನ್ನು ನಿವಾರಿಸಬಹುದು ಎಂದು ನಂಬಿದ್ದೇನೆ’ ಎಂದು ಭೂಷಣ್ ಹೇಳಿದರು.
‘ನನ್ನ ಟ್ವೀಟ್‌ಗಳು ನಾನು ನಂಬಿರುವ ಈ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ಈ ನಂಬಿಕೆಗಳ ಸಾರ್ವಜನಿಕ ಅಭಿವ್ಯಕ್ತಿಯು ನಾಗರಿಕ ಮತ್ತು ಈ ನ್ಯಾಯಾಲಯದ ನಿಷ್ಠಾವಂತ ಅಧಿಕಾರಿಯಾಗಿ ನನ್ನ ಉನ್ನತ ಜವಾಬ್ದಾರಿಗಳಿಗೆ ಅನುಗುಣವಾಗಿದೆ ಎಂದು ನಾನು ನಂಬಿದ್ದೇನೆ. ಆದ್ದರಿಂದ, ಷರತ್ತುಬದ್ಧ ಅಥವಾ ಬೇಷರತ್ತಾಗಿ ಕ್ಷಮೆಯಾಚಿಸುವುದು ಕಪಟವಾಗುತ್ತದೆ. ಕ್ಷಮೆಯಾಚನೆಯು ಕೇವಲ ಮಂತ್ರವಲ್ಲ ಮತ್ತು ಯಾವುದೇ ಕ್ಷಮೆಯಾಚನೆಯನ್ನು ನ್ಯಾಯಾಲಯವು ಹೇಳಿದಂತೆ ಪ್ರಾಮಾಣಿಕವಾಗಿ ಮಾಡಬೇಕಾಗುತ್ತದೆ ಎಂದು ಭೂಷಣ್ ಹೇಳಿದರು.
"ಇದು ವಿಶೇಷವಾಗಿ, ನಾನು ಹೇಳಿಕೆಗಳನ್ನು ಪ್ರಾಮಾಣಿಕವಾಗಿ ಮಾಡಿದಾಗ ಮತ್ತು ಪೂರ್ಣ ವಿವರಗಳೊಂದಿಗೆ ಸತ್ಯಗಳನ್ನು ಸಮರ್ಥಿಸಿದಾಗ, ಅದನ್ನು ನ್ಯಾಯಾಲಯವು ಪರಿಗಣಸದೇ ಇರುವ ಹೊತ್ತಿನಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ನಾನು ಈ ನ್ಯಾಯಾಲಯದ ಮುಂದೆ ನನ್ನ ಹೇಳಿಕೆಯನ್ನು ಹಿಂತೆಗೆದುಕೊಂಡರೆ, ನಾನು ನಿಜವೆಂದು ನಂಬಿರುವ ನನ್ನ ಮನಸ್ಸಾಕ್ಷಿ ಮತ್ತು ಅಪಾರ ಗೌರವವನ್ನು ಇಟ್ಟುಕೊಂಡಿರುವ ಈ ಸಂಸ್ಥೆಯನ್ನು ನಿಂದಿಸಿದಂತಾಗುತ್ತದೆ’ ಎಂದು ಭೂಷಣ್ ಹೇಳಿದರು.
ತಾನು ಸ್ವ ಇಚ್ಛೆಯಿಂದ ದಾಖಲಿಸಿದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯನ್ನು ಮರು ಪರಿಶೀಲಿಸಲು ಪ್ರಶಾಂತ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ ಆಗಸ್ಟ್ ೨೦ರಂದು ಸೂಚಿಸಿತ್ತು. ಇದಕ್ಕಾಗಿ ಆಗಸ್ಟ್ ೨೪ರವರೆಗೆ ಗಡುವು ನೀಡಿತ್ತು.
ಪ್ರಶಾಂತ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ತೀರ್ಪು ನೀಡಿತ್ತು.
ಪ್ರಶಾಂತ ಭೂಷಣ್ ಅವರು ಮಾಡಿದ್ದ ಒಂದು ಟ್ವೀಟ್ ಸುಪ್ರೀಂ ಕೋರ್ಟಿನ ಈ ಹಿಂದಿನ ಕೆಲವು ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಸಂಬಂಧಿಸಿದ್ದಾಗಿದ್ದರೆ, ಇನ್ನೊಂದು ಟ್ವೀಟನ್ನು ಹಾಲಿ ಸಿಜೆಐ ಅವರ ಚಿತ್ರವೊಂದನ್ನು ಉಲ್ಲೇಖಿಸಿ ಮಾಡಲಾಗಿತ್ತು. ಟ್ವೀಟ್‌ಗಳ ಮೂಲಕ ಪ್ರಶಾಂತ ಭೂಷಣ್ ಅವರು ಆಡಿರುವ ಮಾತುಗಳು ‘ಕೀಳು ಹಾಗೂ ಹಗೆತನದಿಂದ ಕೂಡಿದವು’ ಎಂದು ಕೋರ್ಟ್ ಹೇಳಿತ್ತು.
ಸುಪ್ರೀಂಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಪ್ರಶಾಂತ ಭೂಷಣ್ ತಪ್ಪಿತಸ್ಥರು ಎಂದು ಆಗಸ್ಟ್ ೧೪ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಶಿಕ್ಷೆಯಿಂದ ಪಾರು ಸಾಧ್ಯತೆ ಕಡಿಮೆ
ತಮ್ಮ ಟ್ವೀಟ್‌ಗಳ ಬಗ್ಗೆ ಕ್ಷಮೆಯಾಚಿಸುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿರುವುದರಿಂದ, ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್ ಅವರು ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಭೂಷಣ್ ಅವರು ಅವಹೇಳನಕಾರಿ ಟ್ವೀಟುಗಳನ್ನು ಪ್ರಕಟಿಸಿದ್ದರು. ಈ ಕಾರಣದಿಂದ ಅವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ, ಭೂಷಣ್ ತಪ್ಪಿತಸ್ಥರು ಎಂದು ಹೇಳಿತ್ತು. ಕ್ಷಮೆಯಾಚಿಸಲು ಆಗಸ್ಟ್ ೨೪ ರವರೆಗೆ ಕಾಲಾವಕಾಶವನ್ನು ಕೋರ್ಟ್ ನೀಡಿತ್ತು. ಕ್ಷಮೆಯಾಚಿಸದಿದ್ದರೆ, ಪೀಠವು ಶಿಕ್ಷೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಹೀಗಾದಲ್ಲಿ, ಭೂಷಣ್ ಅವರು ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ೨,೦೦೦ ರೂ.ಗಳ ದಂಡ ಅಥವಾ ಎರಡನ್ನೂ ಶಿಕ್ಷೆಯಾಗಿ ಎದುರಿಸಬೇಕಾಗುತ್ತದೆ.
Labels:
Flash News,
India,
Nation,
News,
Supreme Court,
ಭಾರತ,
ರಾಷ್ಟ್ರೀಯ,
ಸುದ್ದಿ,
ಸುಪ್ರೀಂಕೋರ್ಟ್
Subscribe to:
Post Comments (Atom)
No comments:
Post a Comment