ನೇಪಾಳ ಪ್ರಧಾನಿ ಒಲಿಯಿಂದ ಮೋದಿಗೆ ಫೋನ್, ಶುಭಾಶಯ
ನವದೆಹಲಿ: ಭಾರತದ ೭೪ ನೇ ಸ್ವಾತಂತ್ರ್ಯ ದಿನದಂದು ತಮ್ಮ ಶುಭಾಶಯಗಳನ್ನು ತಿಳಿಸಲು ನೇಪಾಳದ ಪ್ರಧಾನಿ ಕೆ.ಪಿ.ರ್ಮ ಒಲಿ ಅವರು 2020 ಆಗಸ್ಟ್ 15ರ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದರು ಎಂದು ಪ್ರಧಾನ ಮಂತ್ರಿಗಳ ಕಚೇರಿಯು ಹೇಳಿಕೆ ಒಂದರಲ್ಲಿ ತಿಳಿಸಿತು.
ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಿ ಇತ್ತೀಚೆಗೆ ಭಾರತವು ಚುನಾಯಿತವಾದುದಕ್ಕಾಗಿಯೂ ಒಲಿ ಅವರು ಅಭಿನಂದನೆ ವ್ಯಕ್ತಪಡಿಸಿದರು ಎಂದು ಹೇಳಿಕೆ ತಿಳಿಸಿತು.
"ಉಭಯ ದೇಶಗಳಲ್ಲಿ ಕೋವಿಡ್ -೧೯ ಸಾಂಕ್ರಾಮಿಕದ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಯಕರು ಪರಸ್ಪರ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಈ ವಿಷಯದಲ್ಲಿ ನೇಪಾಳಕ್ಕೆ ಭಾರತದ ನಿರಂತರ ಬೆಂಬಲದ ಭರವಸೆವನ್ನು ಪ್ರಧಾನಿ ನೀಡಿದರು’ ಎಂದು ಹೇಳಿಕೆ ತಿಳಿಸಿತು.
ಆಗಸ್ಟ್ ೯ರಂದು ಭಾರತವು ಕೋವಿಡ್-೧೯ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ ೧೦ ವೆಂಟಿಲೇಟರ್‌ಗಳನ್ನು ನೇಪಾಳಕ್ಕೆ ಹಸ್ತಾಂತರಿಸಿತ್ತು.
ತಮ್ಮ ದೂರವಾಣಿ ಕರೆಗಾಗಿ ಮೋದಿ ತಮ್ಮ ನೇಪಾಳದ ಪ್ರಧಾನಿಗೆ ಧನ್ಯವಾದ ಸಲ್ಲಿಸಿದರು ಮತ್ತು ಭಾರತ ಮತ್ತು ನೇಪಾಳ ಹಂಚಿಕೊಂಡಿರುವ ನಾಗರಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ನೆನಪಿಸಿಕೊಂಡರು ಎಂದು ಹೇಳಿಕೆ ತಿಳಿಸಿದೆ.
ಹಿಮಾಲಯದ ದೇಶವು ಇತ್ತೀಚೆಗೆ ಉತ್ತರಾಖಂಡದ ಕೆಲವು ಭಾಗಗಳನ್ನು ತನ್ನ ಪ್ರದೇಶವೆಂದು ತೋರಿಸುವ ಹೊಸ ನಕ್ಷೆಯನ್ನು ಅನಾವರಣಗೊಳಿಸಿದ ನಂತರ ಭಾರತ-ನೇಪಾಳ ಸಂಬಂಧಗಳು ಬಿಗಡಾಯಿಸಿರುವುದರ ಮಧ್ಯೆಯೇ ಒಲಿ ಅವರ ದೂರವಾಣಿ ಕರೆ ಬಂದಿದೆ.
ಶುಕ್ರವಾರ ಮೋದಿಯವರನ್ನು ಅಭಿನಂದಿಸಲು ಒಲಿ ಟ್ವಿಟ್ಟರ್ ಬಳಸಿದ್ದರು.
‘೭೪ ನೇ ಸ್ವಾತಂತ್ರ್ಯ ದಿನಾಚರಣೆಯ ಸಂತೋಷದ ಸಂದರ್ಭದಲ್ಲಿ ಪ್ರಧಾನಿ ಶ್ರೀ @ ನರೇಂದ್ರಮೋದಿ ಜಿ, ಸರ್ಕಾರ ಮತ್ತು ಭಾರತದ ಜನರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಭಾರತದ ಜನರ ಹೆಚ್ಚಿನ ಪ್ರಗತಿ ಮತ್ತು ಸಮೃದ್ಧಿಗೆ ಶುಭಾಶಯಗಳು’ ಎಂದು ಒಲಿ ಟ್ವೀಟ್ ಮಾಡಿದ್ದರು.
No comments:
Post a Comment