ಕೃಷಿ
ಸುಧಾರಣಾ ಕಾನೂನು ಅನುಷ್ಠಾನ:
ಮಹಾರಾಷ್ಟ್ರದಿಂದ ಆದೇಶ ರದ್ದು
ಮುಂಬೈ: ಶಿವಸೇನೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ವಿವಾದಾತ್ಮಕ ಕೃಷಿ ಸುಗ್ರೀವಾಜ್ಞೆಗಳ ಅನುಷ್ಠಾನಕ್ಕಾಗಿ ಆಗಸ್ಟ್ ತಿಂಗಳಲ್ಲಿ ಹೊರಡಿಸಿದ ಅಧಿಸೂಚನೆಯನ್ನು 2020 ಸೆಪ್ಟೆಂಬರ್ 30ರ ಬುಧವಾರ ರದ್ದುಪಡಿಸಿತು. ಸಂಸತ್ತಿನಲ್ಲಿ ಮೂರು ಕಾಯ್ದೆಗಳನ್ನು ಅಂಗೀಕರಿಸುವ ಮೂಲಕ ಕೇಂದ್ರ ಸರ್ಕಾರವು ಈ ಸುಗ್ರೀವಾಜ್ಞೆಗಳನ್ನು ಕಾಯ್ದೆಗಳಾಗಿ ಪರಿವರ್ತಿಸಿದೆ.
ವಿವಾದಾತ್ಮಕ
ಕೃಷಿ ಸುಧಾರಣಾ ಸುಗ್ರೀವಾಜ್ಞೆ ರದ್ದು ಪಡಿಸದಿದ್ದರೆ ರಾಜ್ಯದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸುವುದಾಗಿ ಒಕ್ಕೂಟದ ಪ್ರಮುಖ ಅಂಗಪಕ್ಷವಾಗಿರುವ ಕಾಂಗ್ರೆಸ್ ಬೆದರಿಕೆ ಹಾಕಿದ ನಂತರ ಈ ಕ್ರಮ ಕೈಗೊಳ್ಳಲಾಯಿತು.
ಆಗಸ್ಟ್
೧೦ ರ ಅಧಿಸೂಚನೆಯು ಕೃಷಿ
ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ನಿಯಂತ್ರಿಸುವ ಸ್ಥಳೀಯ ಅಧಿಕಾರಿಗಳಿಗೆ ಜೂನ್ನಲ್ಲಿ ಹೊರಡಿಸಲಾದ ಮೂರು ಕೇಂದ್ರ ಕೃಷಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತರಲು ನಿರ್ದೇಶಿಸಿತ್ತು.
ಕಾಂಗ್ರೆಸ್
ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಪ್ರತಿನಿಧಿಗಳು ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ ಜಾರಿಗೆ ಬಂದ ಕೃಷಿ ಕಾನೂನುಗಳ ಅನುಷ್ಠಾನದ ವಿಷಯವನ್ನು ಎತ್ತುವ ಸಾಧ್ಯತೆ ಇತ್ತು. ಎರಡು ಪಕ್ಷಗಳು ಕಾನೂನುಗಳನ್ನು "ರೈತ ವಿರೋಧಿ’ ಎಂಬುದಾಗಿ ಬಣ್ಣಿಸಿ ರಾಜ್ಯದಲ್ಲಿ ಅವುಗಳ ಅನುಷ್ಠಾನವನ್ನು ವಿರೋಧಿಸಿವೆ.
ಕಾನೂನುಗಳನ್ನು
ಜಾರಿಗೆ ತರುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. "ಕೃಷಿ ವಿರೋಧಿ ಕಾನೂನುಗಳನು ’ನಿರಾಕರಿಸಲು ಮತ್ತು ರೈತರಿಗೆ ಆಗಿರುವ "ಗಂಭೀರ ಅನ್ಯಾಯ" ವನ್ನು ತಡೆಯಲು ಸಂವಿಧಾನದ ವಿಧಿ ೨೫೪ (೨) ರ ಅಡಿಯಲ್ಲಿ
ಶಾಸನ ರಚಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೋಮವಾರ ತಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳಿಗೆ ಸಲಹೆ ಮಾಡಿದ್ದರು.
ರಾಜಸ್ಥಾನ,
ಪಂಜಾಬ್ ಮತ್ತು ಛತ್ತೀಸ್ಗಢ ಮತ್ತು ಪುದುಚೇರಿಯಲ್ಲಿ
ಕಾಂಗ್ರೆಸ್ ಅಧಿಕಾರದಲ್ಲಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ಪಕ್ಷವು ಸಮ್ಮಿಶ್ರ ಸರ್ಕಾರಗಳ ಭಾಗವಾಗಿದೆ.
ಕೃಷಿ
ವ್ಯಾಪಾರವನ್ನು ನಿಯಂತ್ರಣ ಮುಕ್ತಗೊಳಿಸುವ ಸಲುವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಸರ್ಕಾರವು ಮೂರು ಕೃಷಿ ಮಸೂದೆಗಳನ್ನು ಮಂಡಿಸಿತು. ಹೆಚ್ಚಿನ ಪರಿಶೀಲನೆ ಮತ್ತು ಮತ ವಿಭಜನೆಯ ಬೇಡಿಕೆಗಳನ್ನು
ತಿರಸ್ಕರಿಸುವ ಮೂಲಕ ಸಂಸತ್ತಿನಲ್ಲಿ ವಿವಾದಾತ್ಮಕ ರೀತಿಯಲ್ಲಿ ಅವುಗಳನ್ನು ಅಂಗೀಕರಿಸಲಾಗಿತ್ತು.
ರೈತ
ಸಂಘಟನೆಗಳು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ನಿಯಂತ್ರಣ ರದ್ದಿನಿಂದ ಕೃಷಿಕರು ಚೌಕಾಶಿಯಲ್ಲಿ ಇನ್ನಷ್ಟು ದುರ್ಬಲರಾಗಿ, ನಿಯಂತ್ರಣ ಕಾರ್ಪೋರೇಟ್ ಸಂಸ್ಥೆಗಳ ವಶವಾಗಬಹುದು ಎಂದು ದೂರುತ್ತಿವೆ.
ಮಹಾರಾಷ್ಟ್ರದ
ಉಪ ಮುಖ್ಯಮಂತ್ರಿ ಮತ್ತು ಎನ್ಸಿಪಿ ಮುಖಂಡ ಅಜಿತ್ ಪವಾರ್ ಕಳೆದ ವಾರ ಕೃಷಿ ಕಾನೂನುಗಳನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಹೇಳಿದ್ದರು. ಎಲ್ಲಾ ಆಡಳಿತ ಪಕ್ಷಗಳು ಕಾನೂನುಗಳಿಗೆ ವಿರುದ್ಧವಾಗಿವೆ ಮತ್ತು ಸಮರ್ಪಕವಾಗಿ ಚರ್ಚಿಸಿದ ನಂತರ ಅವುಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬಾಲಾಸಾಹೇಬ್ ಥೋರತ್ ಹೇಳಿದ್ದಾರೆ.
ಕಾನೂನುಗಳ
ವಿರುದ್ಧ ಬೆಂಬಲ ಕ್ರೋಡೀಕರಣಕ್ಕಾಗಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ # ಸ್ಪೀಕ್ಅಪ್ ಫಾರ್ ಫಾರ್ಮಸ್’ ಅಭಿಯಾನ ಆರಂಭಿಸಿದೆ. ಅಲ್ಲದೆ ವರ್ಚುವಲ್ ರೈತ ರ್ಯಾಲಿಯನ್ನು ಕೂಡಾ
ಸಂಘಟಿಸಿ, ಕಾನೂನುಗಳನ್ನು
ವಿರೋಧಿಸುವ ೧೦ ಮಿಲಿಯನ್
(೧ ಕೋಟಿ) ರೈತರಿಂದ ಸಹಿಯನ್ನು ಸಂಗ್ರಹಿಸಿದೆ.
ಕಾಂಗ್ರೆಸ್
ನಾಯಕರ ನಿಯೋಗವೊಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ಶಾಸನವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
No comments:
Post a Comment