Wednesday, September 30, 2020

ಅಯೋಧ್ಯಾ ಪ್ರಕರಣ: ಇತಿಹಾಸದ ಮೈಲಿಗಲ್ಲುಗಳು

 ಅಯೋಧ್ಯಾ ಪ್ರಕರಣ: ಇತಿಹಾಸದ ಮೈಲಿಗಲ್ಲುಗಳು

೧೫೨೮ : ಮೊಘಲ್ ಸಾಮ್ರಾಟ್ ಬಾಬರ್ನಿಂದ ಮಸೀದಿಯ ನಿರ್ಮಾಣ. ಅದಕ್ಕೆ ಬಾಬರಿ ಮಸೀದಿ ಎಂಬ ಹೆಸರು. ಆದರೆ ಹಿಂದೂಗಳ ಪ್ರಕಾರ ಮಸೀದಿಯನ್ನು ಹಿಂದೂ ಮಂದಿರವನ್ನು ಕೆಡವಿ ನಿರ್ಮಿಸಲಾಗಿದೆ

೧೮೫೩: ನಿರ್ಮೋಹಿ ಅಖಾಡದಿಂದ ಬಲವಂತವಾಗಿ ಬಾಬರಿ ಮಸೀದಿ ವಶಕ್ಕೆ. ಮೂಲಕ ಮೊದಲ ಬಾರಿಗೆ ಅಯೋಧ್ಯಾದಲ್ಲಿ ಕೋಮು ಗಲಭೆ ಸೃಷ್ಠಿ.

೧೮೫೯: ವಿವಾದಿತ ಸ್ಥಳವನ್ನು ಹಿಂದೂ-ಮುಸ್ಲಿಮರಿಗೆ ಹಂಚಿಕೆ ಮಾಡಿ ದೈವಾರಾಧನೆ ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ ಬ್ರಿಟಿಷ್ ಸರ್ಕಾರ.

೧೮೮೫: ಹಿಂದೂ ಪೂಜಾರಿ ಮಹಾಂತ ರಘುವರ್ ದಾಸ್ ರಿಂದ ವಿವಾದಿತ ಸ್ಥಳದ ಮಾಲೀಕತ್ವಕ್ಕಾಗಿ ಮತ್ತು ಮಸೀದಿಯ ಹೊರಗಿನ ರಾಮ ಚಬುತ್ರಾಕ್ಕೆ ಮೇಲ್ಚಾವಣಿ ಹಾಕಲು ಅವಕಾಶ ಕೋರಿ ಫೈಜಾಬಾದ್ ಕೋರ್ಟಿಗೆ  ಅರ್ಜಿ, ಅರ್ಜಿ ತಿರಸ್ಕೃತ.

೧೯೪೯: ಡಿಸೆಂಬರ್ನಲ್ಲಿ ವಿವಾದಿತ ಸ್ಥಳದ ಗುಂಬಜ್ ಒಳಗೆ ರಾಮನ ಮೂರ್ತಿ ಪ್ರತಿಷ್ಠಾಪನೆ. ಉಭಯ ಕಡೆಯಿಂದ ಕೋರ್ಟಿಗೆ ಅರ್ಜಿ, ಅಯೋಧ್ಯೆಯನ್ನು ವಿವಾದಿತ ಭೂಮಿಯೆಂದು ಪರಿಗಣಿಸಿ, ನಿರ್ಬಂಧ ಹೇರಿದ ಕೋರ್ಟ್.

೧೯೫೯: ರಾಮ ಮಂದಿರವನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಕೋರಿ ಫೈಜಾಬಾದ್ ನ್ಯಾಯಾಲಯಕ್ಕೆ ನಿರ್ಮೋಹಿ ಆಖಾಡ ಅರ್ಜಿ

೧೯೬೧: ಅಯೋಧ್ಯಾ ಭೂಮಿಯನ್ನು ತಮ್ಮ ವಶಕ್ಕೆ ಕೋರಿ ಮತ್ತು ರಾಮ ಮೂರ್ತಿಯನ್ನು ತೆಗೆಯಲು ಅನುಮತಿ ಕೋರಿ ಸುನ್ನಿ ವಕ್ಫ್  ಕಮಿಟಿ ಅರ್ಜಿ .

೧೯೮೪: ವಿಶ್ವಹಿಂದೂ ಪರಿಷತ್ನಿಂದ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಚಾರ ಸಭೆ ಆರಂಭ.

೧೯೮೬: ಮಸೀದಿ ದ್ವಾರಗಳನ್ನು ತೆರೆದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ಫೈಜಾಬಾದ್ ಕೋರ್ಟ್. ನ್ಯಾಯಾಲಯದ ತೀರ್ಪು ವಿರೋಧಿಸಿದ ಬಾಬರಿ ಮಸೀದಿ ಕಮಿಟಿ.

೧೯೮೯: ಬಾಬರಿ ಮಸೀದಿ ಪಕ್ಕದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿದ ವಿಶ್ವಹಿಂದೂ ಪರಿಷತ್ .

೧೯೯೦: ಸೋಮನಾಥದಿಂದ ಅಯೋಧ್ಯಾವರೆಗೆ ರಥ ಯಾತ್ರೆ ಆಯೋಜಿಸಿ ರಾಮ ಜನ್ಮ ಭೂಮಿ ಕುರಿತು ಜನರಲ್ಲಿ ಅರಿವು ಮೂಡಿಸಲು ಮುಂದಾದ ಆಗಿನ ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ.

೧೯೯೧: ಅಯೋಧ್ಯಾ ಮುಂದೆ ಒಗ್ಗಟ್ಟಾದ ಸಾವಿರಾರು ಮಂದಿ ಕರಸೇವಕರು.

೧೯೯೨: ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಕರಸೇವಕರು ಮತ್ತು ಸಮಯದಲ್ಲಿ ೨೦೦೦ಕ್ಕೂ ಹೆಚ್ಚು ಕಾರ್ಯಕರ್ತರ ಸಾವು. ಜೊತೆಗೆ ಆಗ ಆಡಳಿತದಲ್ಲಿದ್ದ ಪಿ.ವಿ.ನರಸಿಂಹ ರಾವ್ ಸರ್ಕಾರದಿಂದ  ಲಿಬರ್ಹಾನ್ ಆಯೋಗ ರಚನೆ, ಅಯೋಧ್ಯಾ ಮತ್ತು ಬಾಬರಿ ಮಸೀದಿ ವಿವಾದ ಕುರಿತು ವರದಿ ನೀಡಲು ಸೂಚನೆ.

೧೯೯೩: ಎಲ್.ಕೆ.ಅಡ್ವಾಣಿ ಸೇರಿ ಹಲವರ ಮೇಲೆ ಚಾರ್ಜ್ಶೀಟ್ ಹಾಕಿದ ಸಿಬಿಐ.

೧೯೯೭: ಎಲ್.ಕೆ.ಅಡ್ವಾಣಿ ಸೇರಿದಂತೆ ೪೯ ಜನರ ಮೇಲೆ ಅಯೋಧ್ಯಾ ವಿವಾದದ ಕುರಿತು ಆರೋಪಪಟ್ಟಿ ಬಿಡುಗಡೆ ಮಾಡಿದ ವಿಶೇಷ ನ್ಯಾಯಾಲಯ.

೨೦೦೧: ಅಡ್ವಾಣಿ ಸೇರಿದಂತೆ ೧೩ ಜನರ ಮೇಲಿನ ಪಿತೂರಿ ಆರೋಪವನ್ನು ತಳ್ಳಿಹಾಕಿದ ನ್ಯಾಯಾಧೀಶ ಎಸ್.ಕೆ.ಶುಕ್ಲಾ.

೨೦೦೨: ಅಯೋಧ್ಯಾ ಭೂ ವಿವಾದದ ಕುರಿತು ವರದಿ ನೀಡಲು ಪುರಾತತ್ವ ಇಲಾಖೆಗೆ ಸೂಚನೆ ನೀಡಿದ ಲಕ್ನೋ ಅಲಹಾಬಾದ್ ಪೀಠ.

೨೦೦೩: ಮಸೀದಿಯ ಕೆಳಗೆ ದೇವಾಲಯ ಇರುವ ವಿಚಾರವನ್ನು ನ್ಯಾಯಾಲಯದ ಮುಂದಿಟ್ಟ ಪುರಾತತ್ವ ಇಲಾಖೆ.

೨೦೧೦: ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಮೂರನೇ ಒಂದು ಭಾಗವನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ಸುರ್ಪದಿಗೆ, ಮೂರನೇ ಒಂದು ಭಾಗವನ್ನು ಸುನ್ನಿ ವಕ್ಫ್ ಕಮಿಟಿಗೆ ಹಾಗೂ ಉಳಿದ ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಲು ಹೈಕೋರ್ಟ್ ತೀರ್ಪು.

೨೦೧೧: ಭೂಮಿ ಭಾಗ ಮಾಡುವ ವಿಚಾರವನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ ಹಿಂದೂ ಮುಸ್ಲಿಂ ಸಂಘಟನೆಗಳು. ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.

೨೦೧೭: ಅಡ್ವಾಣಿ ಸೇರಿ ೧೩ ಜನರ ಮೇಲಿನ ಪಿತೂರಿ ಪ್ರಕರಣವನ್ನು ಮರುಪರಿಶೀಲಿಸಿ ಫೆಬ್ರುವರಿ ೮ಕ್ಕೆ ವಿಚಾರಣೆಯನ್ನು ಕಾಯ್ದಿರಿಸಿದ ಸುಪ್ರೀಂಕೋರ್ಟ್ .

೨೦೧೮: ಜುಲೈಯಲ್ಲಿ ೧೯೯೪ರ ಮಸೀದಿ ಇಸ್ಲಾಂನ ಅಂತರ್ಗತ ಭಾಗವಲ್ಲ ಎಂಬ ತೀರ್ಪನ್ನು ಪ್ರಶ್ನಿಸುವ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಜನವರಿ ಮೊದಲ ವಾರದಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿಕೆ.

೨೦೧೯: ಜನವರಿ ೮ರಂದು ಅಯೋಧ್ಯಾ ವಿವಾದ ವಿಚಾರಣೆ ನಡೆಸಲು ಪಂಚ ಸದಸ್ಯ ಪೀಠ ರಚನೆ, ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆಯನ್ನು ಜನವರಿ ೨೯ಕ್ಕೆ ಮುಂದೂಡಿದ ಪೀಠ.

೨೦೧೯: ಜನವರಿ ೨೯ ರಂದು ಅಯೋಧ್ಯಾ ಹೆಚ್ಚುವರಿ ಭೂಮಿಯನ್ನು ಹಕ್ಕುದಾರರಿಗೆ ನೀಡಲು ಅನುಮತಿ ಕೇಳಿದ ಮೋದಿ ಸರ್ಕಾರ.

 ೨೦೧೯: ಮಾರ್ಚ್ ರಂದು ಸಂಧಾನ ಸಮಿತಿ ರಚಿಸಿ, ಮಾತುಕತೆಯ ಮೂಲಕ ಪರಿಹಾರ ಕಂಡುಕೊಂಡು ವಾರಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ.

೨೦೧೯: ಆಗಸ್ಟ್ ೧ರಂದು ಕೋರ್ಟ್ ಸಂಧಾನ ಸಮಿತಿಯಿಂದ ವರದಿ ಸಲ್ಲಿಕೆ. ಸಂಧಾನ ವಿಫಲವಾಗಿದೆ ಎಂದ ಕೋರ್ಟ್. ಪ್ರತಿದಿನ ವಿಚಾರಣೆ ನಡೆಸಿ ಪ್ರಕರಣ ಮುಕ್ತಾಯಗೊಳಿಸಲು ಮುಂದಾದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ.

೨೦೧೯: ಆಗಸ್ಟ್ ೬ರಿಂದ ಪ್ರತಿ ದಿನ ೪೦ ದಿನಗಳ ಸತತ ವಿಚಾರಣೆ ನಡೆಸಿದ ಐದು ಮಂದಿಯ ಸಂವಿಧಾನ ಪೀಠ, ಅಕ್ಟೋಬರ್ ೧೬ರಂದು ವಿಚಾರಣೆ ಮುಕ್ತಾಯ.

೨೦೧೯: ನವೆಂಬರ್ ೯ಕ್ಕೆ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಪಂಚ ಸದಸ್ಯಪೀಠ, .೭೭ ಎಕರೆ ವಿವಾದಿತ ಜಮೀನು ರಾಮಲಲ್ಲಾಗೆ ಸೇರಿದ್ದು , ಮೂರು ತಿಂಗಳೊಳಗೆ ಟ್ರಸ್ಟ್ ರಚಿಸಿ ಸರ್ಕಾರವೇ ಮಂದಿರ ನಿರ್ಮಿಸಬೇಕು . ಜೊತೆಗೆ ಸುನ್ನಿ ವರ್ಕ್ ಬೋರ್ಡ್ಗೆ ಮಸೀದಿ ನಿರ್ಮಾಣ ಮಾಡಲು ಎಕರೆ ಭೂಮಿ ನೀಡಬೇಕು ಎಂದು ಆದೇಶ.

೨೦೨೦: ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಎಲ್ಕೆ ಆಡ್ವಾಣಿ, ಮುರಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಸತೀಶ್ ಪ್ರಧಾನ್ ಮತ್ತು ಮಹಂತ ನೃತ್ಯ ಗೋಪಾಲದಾಸ್ ಸೇರಿ ಎಲ್ಲಾ ೩೨ ಆರೋಪಿಗಳನ್ನು ನಿರ್ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು.

ಕೋರ್ಟ್ ಹೇಳಿದ್ದೇನು?

.           ಸಮಾಜ ವಿರೋಧಿ ಶಕ್ತಿಗಳು ಕಟ್ಟಡವನ್ನು ನೆಲಸಮ ಮಾಡಿವೆ. ಆರೋಪಿತ ನಾಯಕರು ಜನರನ್ನು ತಡೆಯಲು ಯತ್ನಿಸಿದರು. ಸಿಬಿಐ ಒದಗಿಸಿದ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳು ಸಂಚು ಆರೋಪವನ್ನು ಸಾಬೀತು ಪಡಿಸುವುದಿಲ್ಲ. ಆಡಿಯೋ ಭಾಷಣಗಳು ಸ್ಪಷ್ಟವಾಗಿಯೂ ಇಲ್ಲ.

.           ವಿವಾದಿತ ಕಟ್ಟಡವನ್ನು ಉರುಳಿಸು ಸಾಮಾನ್ಯ ಕೆಲಸದಲ್ಲಿ ಸಮಾಜವಿರೋಧಿ ಕರ ಸೇವಕರೊಂದಿಗೆ ಆರೋಪಿಗಳು ಸೇರಿದ್ದರು ಎಂಬದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ.

.           ನಾಯಕರು ರಾಮಚಬೂತ್ರ ಸಮೀಪದ ವೇದಿಕೆಯಲ್ಲಿ ಕುಳಿತಿದ್ದರು. ಕರಸೇವಕರ ಒಂದು ಗುಂಪು ಆಕ್ರೋಶಗೊಂಡು ವಿವಾದಿತ ಕಟ್ಟಡದ ಮೇಲೇರಬಹುದು ಎಂಬ ಅನುಮಾನ ವಿಎಚ್ ಪಿ ನಾಯಕರಾದ ಅಶೋಕ ಸಿಂಘಲ್ ಮತ್ತು ಬಿಜೆಪಿಯ ವಿಜಯ ರಾಜೇ ಸಿಂಧಿಯಾ ಅವರಿಗೆ ಇರಲಿಲ್ಲ.

.           ವಿವಾದಾತ್ಮಕ ಕಟ್ಟಡದ ಹಿಂಭಾಗದಿಂದ ಕಲ್ಲುಗಳ ತೂರಾಟ ಆರಂಭವಾಗಿತ್ತು.

.           ನೆಲಸಮ ಕೃತ್ಯವು ಪೂರ್ವ ಯೋಜಿತ ಎಂಬುದಕ್ಕೆ ಆಧಾರವಿಲ್ಲ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಬಲವಾಗಿಲ್ಲ

No comments:

Advertisement