ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಚುನಾವಣೆ: ಭಾರತದ ವಿರೋಧ
ನವದೆಹಲಿ: ವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಚುನಾವಣೆ ನಡೆಸುವ ಮತ್ತು ನೆರೆಯ ತನ್ನ ಐದನೇ ಪ್ರಾಂತ್ಯವನ್ನಾಗಿ ಮಾಡುವ ಪಾಕಿಸ್ತಾನದ ಯೋಜನೆಯನ್ನು ಭಾರತ 2020 ಸೆಪ್ಟೆಂಬರ್ 29ರ ಮಂಗಳವಾರ ತೀವ್ರವಾಗಿ ವಿರೋಧಿಸಿತು, ಇಸ್ಲಾಮಾಬಾದ್ ತಾನು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ವಸ್ತುಸ್ಥಿತಿ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿತು.
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾದ ಗಿಲ್ಗಿಟ್-ಬಾಲ್ಟಿಸ್ತಾನದ ಸ್ಥಾನಮಾನದ ಬಗ್ಗೆ ಉಭಯ ದೇಶಗಳು ಇತ್ತೀಚಿನ ವಾರಗಳಲ್ಲಿ ಹಲವಾರು ಬಾರಿ ವಿಶ್ವಸಂಸ್ಥೆಯಂತಹ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಈ ವಿಷಯವನ್ನು ಕಿಡಿಕಾರಿವೆ.
ಗಿಲ್ಗಿಟ್-ಬಾಲ್ಟಿಸ್ತಾನದ ಶಾಸಕಾಂಗ ಸಭೆಗೆ ನವೆಂಬರ್ ೧೫ ರಂದು ಚುನಾವಣೆ ನಡೆಸಲು ಪಾಕಿಸ್ತಾನ ಸರ್ಕಾರ ಯೋಜಿಸಿದೆ. ಆ ಬಳಿಕ ಈ ಪ್ರದೇಶವನ್ನು ಪೂರ್ಣ ಪ್ರಮಾಣದ ಪ್ರಾಂತ್ಯವನ್ನಾಗಿ ಮಾಡುವತ್ತ ಸಾಗಲು ಪಾಕಿಸ್ತಾನ ಉದ್ದೇಶಿಸಿದೆ.
"’ಗಿಲ್ಗಿಟ್-ಬಾಲ್ಟಿಸ್ತಾನ್’ ಶಾಸಕಾಂಗ ಸಭೆಗಾಗಿ ೨೦೨೦ರ ನವೆಂಬರ್ ೧೫ರಂದು ನಡೆಯಲಿರುವ ಚುನಾವಣೆ ಘೋಷಣೆಯ ಕುರಿತ ವರದಿಗಳನ್ನು ನಾವು ನೋಡಿದ್ದೇವೆ. ಭಾರತ ಸರ್ಕಾರ ಇದರ ವಿರುದ್ಧ ತನ್ನ ಬಲವಾದ ಪ್ರತಿಭಟನೆಯನ್ನು ಪಾಕಿಸ್ತಾನ ಸರ್ಕಾರಕ್ಕೆ ತಿಳಿಸಿದೆ ಮತ್ತು ೧೯೪೭ರಲ್ಲಿ ಇಡೀ ಪ್ರದೇಶ ಭಾರತಕ್ಕೆ ಸೇರ್ಪಡೆಯಾಗುವುದರೊಂದಿಗೆ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಎಂದು ಕರೆಯಲ್ಪಡುವ ಪ್ರದೇಶಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿz’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಸರ್ಕಾರವು "ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೆ ಯಾವುದೇ ಅಧಿಕಾರವನ್ನೂ ಹೊಂದಿಲ್ಲ" ಎಂದು ಹೇಳಿಕೆ ತಿಳಿಸಿದೆ.
ಭಾರತ ಸರ್ಕಾರವು "ಗಿಲ್ಗಿಟ್-ಬಾಲ್ಟಿಸ್ತಾನ್ (ಚುನಾವಣೆಗಳು ಮತ್ತು ಉಸ್ತುವಾರಿ ಸರ್ಕಾರ) ತಿದ್ದುಪಡಿ ಆದೇಶ ೨೦೨೦ ’ರಂತಹ ಇತ್ತೀಚಿನ ಕ್ರಮಗಳು ಮತ್ತು ತನ್ನ ಅಕ್ರಮ ಮತ್ತು ಬಲವಂತದ ಕ್ರಮಗಳ ಮೂಲಕ ಈ ಪ್ರದೇಶಗಳಲ್ಲಿನ ವಸ್ತುಸ್ಥಿತಿ ಬದಲಾವಣೆ ತರಲು ಪಾಕಿಸ್ತಾನಿ ಆಡಳಿತವು ನಡೆಸುತ್ತಿರುವ ನಿರಂತರ ಯತ್ನಗಳನ್ನು ಭಾರತ ತಿರಸ್ಕರಿಸಿದೆ ಎಂದು ಹೇಳಿಕೆ ತಿಳಿಸಿದೆ.
No comments:
Post a Comment