12 ಕಡೆ ನಿತೀಶ ಕುಮಾರ್ ಜೊತೆಗೆ ಪ್ರಧಾನಿ ಮೋದಿ ರಾಲಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೨೩ ರಂದು ಸಾಸರಾಮ್ ನ ಡೆಹ್ರಿಯಲ್ಲಿ ಮೊದಲ ಹಂತದ ಮತದಾನಕ್ಕೆ ಮುನ್ನವೇ ರಾಲಿಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಬಿಹಾರ ಚುನಾವಣಾ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಲಿದ್ದು, ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯವರೆಗೂ ಅದನ್ನು ಮುಂದುವರೆಸಲಿದ್ದಾರೆ.
ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಪ್ರಭಾವವನ್ನು ಸೀಮಿತಗೊಳಿಸುವ ಅಭಿಯಾನ ನಡೆಸಬೇಕೆಂದು ಜೆಡಿಯು ಬಯಸುತ್ತಿರುವ ಸಮಸ್ಟಿಪುರದ ಸ್ಥಾನಗಳು ಸೇರಿದಂತೆ ಬಿಹಾರದಲ್ಲಿ ೧೨ ರಾಲಿಗಳನ್ನು ಪ್ರಧಾನಿ ನಡೆಸಲಿದ್ದಾರೆ. ಸಮಸ್ಟಿಪುರವನ್ನು ಎಲ್ಜೆಪಿಯ ಭದ್ರಕೋಟೆಯೆಂದು ಪರಿಗಣಿಸಲಾಗಿದೆ.
ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಏಕತೆಯನ್ನು ಪ್ರಸ್ತುತಪಡಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ಮತ್ತು ಮೂರನೇ ಹಂತದ ರ್ಯಾಲಿಗಳಲ್ಲಿ ಸೇರಿಕೊಳ್ಳಲಿದ್ದಾರೆ.
ಮೊದಲ ದಿನ, ಅಂದರೆ, ಅಕ್ಟೋಬರ್ ೨೩ ರಂದು ಪ್ರಧಾನಿ ಮೂರು ರಾಲಿಗಳನ್ನು ನಡೆಸಲಿದ್ದಾರೆ, ಉಳಿದ ಎರಡು ಗಯಾ ಮತ್ತು ಭಾಗಲ್ಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವೇಶ್ ಕುಮಾರ್ 2020 ಅಕ್ಟೋಬರ್ 16ರ ಶುಕ್ರವಾರ ಹೇಳಿದರು.
ಅಕ್ಟೋಬರ್ ೨೮ ರಂದು ವಿಜಯದಶಮಿಯ ನಂತರ ಅವರ ಎರಡನೇ ಹಂತದ ಅಭಿಯಾನ ನಡೆಯಲಿದ್ದು, ಅವರು ದಭಾsಂಗಾ, ಮುಜಾಫ್ಫರಪುರ ಮತ್ತು ಪಾಟ್ನಾದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನವೆಂಬರ್ ೧ ರಂದು ಅವರು ಚಪ್ರಾ, ಮೋತಿಹಾರಿ ಮತ್ತು ಸಮಸ್ಟಿಪುರದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನವೆಂಬರ್ ೩ ರಂದು ಅವರು ಪಶ್ಚಿಮ ಚಂಪಾರನ್, ಸಹರ್ಸಾ ಮತ್ತು ಫೋರ್ಬೆಸ್ಗಂಜ್ (ಅರೇರಿಯಾ) ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜೆಡಿಯು ಸಂಸದ ಬೈದ್ಯನಾಥ್ ಮಹತೋ ಅವರ ಸಾವಿನಿಂದಾಗಿ ಅನಿವಾರ್ಯ ವಾಲ್ಮೀಕಿನಗರ ಸ್ಥಾನದ ಉಪಚುನಾವಣೆಯಲ್ಲಿ ದಿವಂಗತ ಸಂಸದ ಬೈದ್ಯನಾಥ್ ಮಹತೋ ಅವರ ಪುತ್ರ ಸುನಿಲ್ ಕುಮಾರ್ ಅವರನ್ನು ಜೆಡಿಯು ಕಣಕ್ಕಿಳಿಸಿದೆ. ಉಪಚುನಾವಣೆ ನವೆಂಬರ್ ೭ ರಂದು ನಡೆಯಲಿದೆ.
ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ನಡೆಯುತ್ತಿರುವ ಮೊದಲ ರಾಜ್ಯ ಚುನಾವಣೆಯಾಗಿರುವುದರಿಂದ, ಪ್ರಧಾನ ಮಂತ್ರಿಗಳ ರ್ಯಾಲಿಗಾಗಿ ಎಲ್ಲ ಸ್ಥಳಗಳಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ಹೊರಡಿಸಿದ ಕೋವಿಡ್ -೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸಾರ್ವಜನಿಕ ಸಭೆಗಳಿಗೂ ಹೆಚ್ಚಾಗಿ ಮನೆ-ಮನೆ ಪ್ರಚಾರವೇ ಚುನಾವಣೆಯಲ್ಲಿ ಮುಖ್ಯವಾಗಿ ಇರಲಿದೆ.
"ಆಡಳಿತವು ಸಾಮಾಜಿಕ ಅಂತರ ಪಾಲನೆಯನ್ನು ಖಚಿತಪಡಿಸುತ್ತದೆ ಮತ್ತು ಅದರಲ್ಲಿ ಪಾಲ್ಗೊಳ್ಳುವ ಜನರು ಮುಖಗವಸುಗಳನ್ನು ಧರಿಸುವ ಅಗತ್ಯವಿರುತ್ತದೆ. ಮುಖಗವಸು ಮತ್ತು ನೈರ್ಮಲ್ಯೀಕರಣವಿಲ್ಲದೆ (ಸ್ಯಾನಿಟೈಸೇಷನ್) ಸ್ಥಳಕ್ಕೆ ಯಾವುದೇ ಪ್ರವೇಶವಿರುವುದಿಲ್ಲ ಮತ್ತು ಪಾಲ್ಗೊಳ್ಳುವವರ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತದೆ’ ಎಂದು ಬಿಜೆಪಿ ಮುಖಂಡರು ಹೇಳಿದರು.
೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮತ್ತು ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ತಲಾ ೧೦ ಚುನಾವಣಾ ರ್ಯಾಲಿಗಳನ್ನು ನಡೆಸಿದರೆ, ಬಿಹಾರ ಬಿಜೆಪಿಯ ಅತ್ಯುನ್ನತ ನಾಯಕ ಸುಶೀಲ್ ಕುಮಾರ್ ಮೋದಿ ೮೯ ರ್ಯಾಲಿಗಳು ಮತ್ತು ೪೩ ರೋಡ್ ಶೋಗಳೊಂದಿಗೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದರು. ನಿತೀಶ್ ಕುಮಾರ್ ೧೭೧ ಚುನಾವಣಾ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದರು. ಪರಿಣಾಮವಾಗಿ ಎನ್ಡಿಎ ೪೦ ಲೋಕಸಭಾ ಸ್ಥಾನಗಳಲ್ಲಿ ೩೯ ಸ್ಥಾನಗಳನ್ನು ಗೆದ್ದಿತ್ತು.
ನಿತೀಶ್ ಕುಮಾರ್ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೇ ಬಿಹಾರದಲ್ಲಿ ರ್ಯಾಲಿಗಳನ್ನು ಪ್ರಾರಂಭಿಸಿದ್ದರೆ, ಕೇಂದ್ರದಲ್ಲಿ ಭಾಗವಾಗಿದ್ದರೂ ಸಹ ಬಿಹಾರದಲ್ಲಿ ಮೈತ್ರಿಕೂಟದಿಂದ ಹೊರನಡೆಯಲು ಎಲ್ಜೆಪಿ ನಿರ್ಧರಿಸಿದ ನಂತರ ಉಂಟಾದ ಗೊಂದಲವನ್ನು ನಿವಾರಿಸುವಲ್ಲಿ ನರೇಂದ್ರ ಮೋದಿಯವರ ರ್ಯಾಲಿಗಳು ನಿರ್ಣಾಯಕವಾಗಲಿವೆ.
ಏಷ್ಯನ್ ಡೆವಲಪ್ಮೆಂಟ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಡಿಆರ್ಐ) ಯ ಶೈಬಲ್ ಗುಪ್ತ ಅವರು ಪ್ರಧಾನ ಮಂತ್ರಿಯ ಜನಪ್ರಿಯತೆ ಇನ್ನೂ ಅಪಾರವಾಗಿದೆ, ಮತ್ತು ಇದು ಖಂಡಿತವಾಗಿಯೂ ಎನ್ಡಿಎ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಮತ್ತು ಚುನಾವಣೆಯನ್ನು ದ್ವಿ-ಧ್ರುವವಾಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
"ಅವರು ಹೇಳುವುದು ನಿರ್ಣಾಯಕವಾಗಿರುತ್ತದೆ. ಅವರು ಜನಪ್ರಿಯರಾಗಿದ್ದಾರೆ ಮತ್ತು ಜನರು ಅರ ಮಾತನ್ನು ಕೇಳಲು ಬಯಸುತ್ತಾರೆ ಮತ್ತು ಅವರು ಏನು ಹೇಳಿದರೂ ಚುನಾವಣೆಯ ಸ್ವರ ಮತ್ತು ಅವಧಿಯನ್ನು ಹೊಂದಿಸಬಹುದು. ಎಲ್ಜೆಪಿಯ ಭಂಗಿಗಳಿಂದಾಗಿ ಉಂಟಾಗಿರುವ ಗೊಂದಲಕಾರಿ ಸಂಕೇತಗಳ ಪರಿಣಾಮವನ್ನು ಬದಲಾಯಿಸಲು ಅದು ಸಹಾಯ ಮಾಡುತ್ತದೆ’ ಎಂದು ಗುಪ್ತ ಹೇಳಿದರು.
No comments:
Post a Comment