Wednesday, October 21, 2020

ಕೋವಿಡ್-19: ಸಕ್ರಿಯ ಪ್ರಕರಣ ೭.೫ ಲಕ್ಷಕ್ಕಿಂತ ಕಡಿಮೆ

 ಕೋವಿಡ್-19: ಸಕ್ರಿಯ ಪ್ರಕರಣ . ಲಕ್ಷಕ್ಕಿಂತ ಕಡಿಮೆ

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಪ್ರಕರಣಗಳ ದೈಂದಿನ ಸಂಖ್ಯೆಯು ಇಳಿಮುಖವಾಗುತ್ತಿದ್ದು, ಸತತ ಎರಡನೇ ದಿನವೂ ಸಕ್ರಿಯ ಪ್ರಕರಣಗಳು . ಲಕ್ಷಕ್ಕಿಂತಲೂ ಕಡಿಮೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಅಕ್ಟೋಬರ್ 21ರ ಬುಧವಾರ ಹೇಳಿತು.

ದೇಶದಲ್ಲಿ ಕೋವಿಡ್ -೧೯ ಸಾಂಕ್ರಾಮಿಕದ ,೪೦,೦೯೦ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ .೬೭ ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.

ಪ್ರತಿದಿನ ಹೆಚ್ಚಿನ ಸಂಖ್ಯೆಯ ಕೋವಿಡ್ -೧೯ ರೋಗಿಗಳು ಚೇತರಿಸಿಕೊಳ್ಳುತ್ತಿರುವುದರಿಂದ, ಹೆಚ್ಚಿನ ಮಟ್ಟದ ದೈನಂದಿನ ಚೇತರಿಕೆಯಲ್ಲಿ ಸ್ಥಿರ ಪ್ರವೃತ್ತಿಯನ್ನು ಭಾರತ ಮುಂದುವರೆಸಿದೆ ಎಂದು ಸಚಿವಾಲಯ ಹೇಳಿತು.

ದೇಶದಲ್ಲಿ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೬೧,೭೭೫ ಚೇತರಿಕೆ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ ೫೪,೦೪೪ ಹೊಸ ಸೋಂಕುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್‌ಆರ್) ಶೇಕಡಾ .೫೧ ಕ್ಕೆ ಇಳಿದಿದೆ ಎಂದು ಅದು ಹೇಳಿದೆ.

ಛತ್ತೀಸ್‌ಗಢ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಅಸ್ಸಾಂ, ಒಡಿಶಾ ಮತ್ತು ಕೇರಳ ಸೇರಿದಂತೆ ೧೪ ರಾಜ್ಯಗಳಲ್ಲಿ ಪ್ರಕರಣಗಳ ಸಾವಿನ ಪ್ರಮಾಣ ಶೇಕಡಾ ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸಿಎಫ್‌ಆರ್ ಅನ್ನು ಶೇಕಡಾ ಕ್ಕಿಂತ ಕಡಿಮೆಗೊಳಿಸುವ ಗುರಿ ಹೊಂದಬೇಕೆಂದು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳಲ್ಲಿ ಶೇಕಡಾ ೭೭ ರಷ್ಟು ಪ್ರಕರಣಗಳು ೧೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದ ಕೋವಿಡ್ -೧೯ ಪ್ರಕರಣಗಳು ಬುಧವಾರ . ಮಿಲಿಯನ್ ಗಡಿ ದಾಟಿದೆ, ಒಂದು ದಿನದಲ್ಲಿ ೫೪,೦೪೪ ಹೊಸ ಸೋಂಕುಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಾವಿನ ಸಂಖ್ಯೆ ,೧೫,೯೧೪ ಕ್ಕೆ ಏರಿದೆ. ೭೧೭ ಸಾವುಗಳು ೨೪ ಗಂಟೆಗಳ ಅವಧಿಯಲ್ಲಿ ದಾಖಲಾಗಿವೆ.

No comments:

Advertisement