ದಕ್ಷಿಣ ಕಾಶ್ಮೀರ: 5 ಭಯೋತ್ಪಾದಕರ ಹತ್ಯೆ
ನವದೆಹಲಿ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ (ಎನ್ಕೌಂಟರ್) ಭದ್ರತಾ ಪಡೆಗಳು 2020 ಅಕ್ಟೋಬರ್ 20ರ ಮಂಗಳವಾರ ಮತ್ತೊಬ್ಬ ಭಯೋತ್ಪಾದಕನನ್ನು ಕೊಂದಿದ್ದು, ಸೋಮವಾರ ಆರಂಭವಾದ ಗುಂಡಿನ ಘರ್ಷಣೆಯಲ್ಲಿ ಈವರೆಗೆ ಒಟ್ಟು ೫ ಭಯೋತ್ಪಾದಕರನ್ನು ಕೊಂದು ಹಾಕಿವೆ.
ಪ್ರದೇಶವನ್ನು ಸುತ್ತುವರಿಯಲಾಗಿದ್ದು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಇದರೊಂದಿಗೆ ದಕ್ಷಿಣ ಕಾಶ್ಮೀರದಲ್ಲಿ ಎರಡು ದಿನಗಳಲ್ಲಿ ಒಟ್ಟು ಐದು ಭಯೋತ್ಪಾದಕರು ಹತರಾಗಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ಪ್ರಾರಂಭವಾದ ಗುಂಡಿನ ಕಾಳಗ ಪ್ರಾರಂಭವಾಯಿತು, ಮಂಗಳವಾರ ಬೆಳಗ್ಗಿನವರೆಗೂ ಮುಂದುವರೆಯಿತು.
ಈ ಗುಂಡಿನ ಘರ್ಷಣೆಯಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಯಿತು. ಗುಂಡಿನ ಸಮರ ನಡೆದ ಸ್ಥಳದಿಂದ ಪೊಲೀಸರು ಎಕೆ ರೈಫಲ್ ಮತ್ತು ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಜೈನಪೋರಾದ ಮೆಲ್ಹುರಾಕ್ಕೆ ಮುತ್ತಿಗೆ ಹಾಕಿ, ಶೋಧ ಕಾರ್ಯಾಚರಣೆ ನಡೆಸಿದವು. ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆಯು ಗುಂಡಿನ ಘರ್ಷಣೆಯಾಗಿ ಮಾರ್ಪಟ್ಟಿತು ಎಂದು ಪೊಲೀಸರು ಹೇಳಿದರು.
ಭಯೋತ್ಪಾದಕರ ಗುರುತು ಮತ್ತು ಅವರು ಯಾವ ಗುಂಪಿಗೆ ಸೇರಿದವರು ಎಂಬುದನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ.
ಮಂಗಳವಾರ ಬೆಳಗ್ಗೆ ಒಬ್ಬ ಭಯೋತ್ಪಾದಕ ಹತನಾಗುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೆಲ್ಹುರಾ ಪ್ರದೇಶದಲ್ಲಿ ಆರಂಭವಾದ ಮುಖಾಮುಖಿ ಕದನ ಕೊನೆಗೊಂಡಿತು ಎಂದು ಭಾರತೀಯ ಸೇನೆ ತಿಳಿಸಿದೆ.
ಪಡೆಗಳು ಎಕೆ ರೈಫಲ್ ಮತ್ತು ಪಿಸ್ತೂಲನ್ನು ಹತನಾದ ಭಯೋತ್ಪಾದಕನ ಬಳಿಯಿಂದ ವಶಪಡಿಸಿಕೊಂಡವು. ಇದಕ್ಕೆ ಮುನ್ನ, ಭದ್ರತಾ ಪಡೆಗಳು ಅನಂತ್ನಾಗ್ನಲ್ಲಿ ಗಾಯಗೊಂಡ ಮತ್ತೊಬ್ಬ ಭಯೋತ್ಪಾದಕನನ್ನು ಸಹ ಬಂಧಿಸಿವೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದರು.
ಅನಂತ್ನಾಗ್ ಜಿಲ್ಲೆಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿತು. ಅಕ್ಟೋಬರ್ ೧೯ ರಂದು ಜಿಲ್ಲೆಯ ಬಿಜ್ಬೆಹರಾ ಪ್ರದೇಶದಲ್ಲಿ ಈ ಘಟನೆ ಘಟಿಸಿತು.
ಇನ್ಸ್ಪೆಕ್ಟರ್ ಮೊಹಮ್ಮದ್ ಅಶ್ರಫ್ ಭಟ್ ಅವರನ್ನು ಬಿಜ್ಬೆಹರಾ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಮೃತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಭಟ್ ಅವರನ್ನು ಪ್ರಸ್ತುತ ಪುಲ್ವಾಮಾ ಜಿಲ್ಲೆಯ ಲೆಥ್ಪೊರಾದ ಪೊಲೀಸ್ ತರಬೇತಿ ಕೇಂದ್ರದಲ್ಲಿ ನೇಮಿಸಲಾಗಿತ್ತು. ಅನಂತ್‌ನಾಗ್‌ನ ಬಿಜ್‌ಬೆಹರಾದ ಸುಂಡ್ಪೋರಾ ಕನೆಲ್ವಾನ್ ಪ್ರದೇಶದ ನಿವಾಸದ ಬಳಿ ಇನ್ಸ್ಪೆಕ್ಟರ್ ಭಟ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು.
ದಾಳಿಕೋರರನ್ನು ಬಂಧಿಸಲು ಪ್ರದೇಶವನ್ನು ಸುತ್ತುವರಿಯಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭಯೋತ್ಪಾದಕ ಅಪರಾಧ ಸ್ಥಳವನ್ನು ತಲುಪಿದ್ದು, ತನಿಖೆ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
"ಸುಮಾರು ೧೮.೩೦ ಗಂಟೆಯಲ್ಲಿ ಭಯೋತ್ಪಾದಕರು ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಗುಂಡು ಹಾರಿಸಿದ್ದಾರೆ, ಅವರ ನಿವಾಸದ ಬಳಿಯ ಚಂದ್ಪೊರಾ ಕನೆಲ್ವಾನ್ ನಿವಾಸಿ ಮೊಹಮ್ಮದ್ ರಂಜಾನ್ ಭಟ್ ಅವರ ಪುತ್ರ ಇನ್ಸ್ಪೆಕ್ಟರ್ ಮೊಹಮ್ಮದ್ ಅಶ್ರಫ್ ಭಟ್ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಅಧಿಕಾರಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ, ಗಾಯಗಳ ಪರಿಣಾಮವಾಗಿ ಅವರು ಹುತಾತ್ಮರಾದರು’ ಎಂದು ಪೊಲೀಸರ ಅಧಿಕೃತ ಹೇಳಿಕೆ ತಿಳಿಸಿದೆ.
ಈ ಸಂಬಂಧ ಪೊಲೀಸರು ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. "ತನಿಖೆ ಪ್ರಗತಿಯಲ್ಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
No comments:
Post a Comment