ಮತ್ತೊಂದು ಕೊರೋನಾ ಲಸಿಕೆಗೆ ವ್ಲಾಡಿಮಿರ್ ಪುಟಿನ್ ಅನುಮೋದನೆ
ಮಾಸ್ಕೊ: ಕೋವಿಡ್-೧೯ ವಿರುದ್ಧ ರಷ್ಯಾವು ಮತ್ತೊಂದು ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಗೂ ಅನುಮೋದನೆ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ೨೦೨೦ ಅಕ್ಟೋಬರ್ ೧೪ರ ಬುಧವಾರ ಘೋಷಿಸಿದರು.
ಸರ್ಕಾರಿ ಸಭೆಯೊಂದರಲ್ಲಿ ಈ ವಿಚಾರ ಘೋಷಿಸಿದ ಅವರು, ವಿಜ್ಞಾನಿಗಳನ್ನು ಅಭಿನಂದಿಸಿದರು. ಸೈಬೀರಿಯಾದ ವೆಕ್ಟರ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಲಸಿಕೆಯ ಮೊದಲ ಹಂತದ ಪ್ರಯೋಗವನ್ನು ಕಳೆದ ತಿಂಗಳು ಕೊನೆಗೊಂಡಿತ್ತು.
‘ಮೊದಲ ಹಾಗೂ ಎರಡನೇ ಹಂತದಲ್ಲಿ ಅಭಿವೃದ್ಧಿಗೊಂಡಿರುವ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ನಾವು ವಿದೇಶಿ ಪಾಲುದಾರರೊಂದಿಗೆ ಸಹಕಾರ ಮುಂದುವರಿಸಲಿದ್ದೇವೆ. ನಮ್ಮ ಲಸಿಕೆಯನ್ನು ವಿದೇಶಗಳಲ್ಲಿಯೂ ಪ್ರಚುರಪಡಿಸಲಿದ್ದೇವೆ’ ಎಂದೂ ಪುಟಿನ್ ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಗಳು ನಡೆಯುವ ಮುನ್ನವೇ ರಷ್ಯಾವು ಆಗಸ್ಟ್ ತಿಂಗಳಲ್ಲಿ ಕೋವಿಡ್ ಲಸಿಕೆ ‘ಸ್ಪುಟ್ನಿಕ್-ವಿ’ಗೆ ಅನುಮೋದನೆ ನೀಡಿತ್ತು. ಈ ನಿರ್ಧಾರಕ್ಕೆ ವಿಶ್ವಮಟ್ಟದಲ್ಲಿ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದರು.
No comments:
Post a Comment