ನಕ್ಷತ್ರ ರಚನೆಯ ವಿದ್ಯಮಾನ ಸೆರೆಹಿಡಿದ ಹಬಲ್ ಟೆಲಿಸ್ಕೋಪ್!
ವಾಷಿಂಗ್ಟನ್: ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ದಿನಕ್ಕೊಂದು ಬ್ರಹ್ಮಾಂಡದ ಅಚ್ಚರಿಯನ್ನು ಉಂಟು ಮಾಡುತ್ತಿದ್ದು, ಭೂಮಿಯಿಂದ ಸುಮಾರು ೬೦ ಮಿಲಿಯನ್ (೬ ಕೋಟಿ) ಜ್ಯೋತಿರ್ವರ್ಷ ದೂರದಲ್ಲಿರುವ ಗ್ರೇಟ್ ಬ್ಯಾರೆಡ್ ಎನ್ಜಿಸಿ--೧೩೬೫ ಸುರಳಿಯಾಕಾರದ ನಕ್ಷತ್ರ ಪುಂಜದಲ್ಲಿ ಹೊಸ ನಕ್ಷತ್ರಗಳ ರಚನೆಯ ಪ್ರಕ್ರಿಯೆಯನ್ನು ಸೆರೆಹಿಡಿದಿದೆ.
ಎನ್ಜಿಸಿ-೧೩೬೫ ನಕ್ಷತ್ರ ಪುಂಜದಲ್ಲಿ ನೀಲಿ ಮತ್ತು ಉರಿಯುತ್ತಿರುವ ಕಿತ್ತಳೆ ಬಣ್ಣದ ಅನಿಲಗಳು ಸುತ್ತುತ್ತಿರುವ ವಿದ್ಯಮಾನವನ್ನು ಹಬಲ್ ಸೆರೆಹಿಡಿದಿದ್ದು, ಈ ನಕ್ಷತ್ರ ಪುಂಜದಲ್ಲಿ ಹೊಸ ನಕ್ಷತ್ರಗಳು ಜನ್ಮ ತಳೆಯುತ್ತಿವೆ ಎಂದು ನಾಸಾ ಖಗೋಳ ವಿಜ್ಷಾನಿಗಳು ಅಂದಾಜು ಮಾಡಿದ್ದಾರೆ.
ನಕ್ಷತ್ರ ಪುಂಜದ ಅಂಚಿನಲ್ಲಿ ಅನಿಲ ಮತ್ತು ಧೂಳನ್ನು ಒಟ್ಟುಗೂಡಿಸುವುದರಿಂದ, ಪ್ರಕಾಶಮಾನವಾದ ತಿಳಿ-ನೀಲಿ ಪ್ರದೇಶ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ನೂರಾರು ನಕ್ಷತ್ರಗಳು ಈಗಷ್ಟೇ ಜನ್ಮ ತಳೆದಿವೆ ಎಂದು ನಾಸಾ 2020 ಅಕ್ಟೋಬರ್ 11ರ ಭಾನುವಾರ ಹೇಳಿದೆ.
No comments:
Post a Comment