ರೆಸ್ಟೋರೆಂಟ್, ಕಿರಾಣಿ ಶಾಪಿಂಗ್ ಹೆಚ್ಚು ಅಪಾಯಕರ
ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರಿಗಿಂತ ರೆಸ್ಟೋರೆಂಟ್ಗಳಲ್ಲಿ ತಿನ್ನುವ ಮತ್ತು ಕಿರಾಣಿಗಾಗಿ ಶಾಪಿಂಗ್ ಮಾಡಲು ಹೊರಡುವ ವ್ಯಕ್ತಿಗಳು ಹೆಚ್ಚಾಗಿ ಕೊರೊನಾವೈರಸ್ ಕಾಯಿಲೆಗೆ (ಕೋವಿಡ್ -೧೯) ತುತ್ತಾಗುವ ಅಪಾಯವಿದೆ ಎಂದು ಹಾರ್ವರ್ಡ್ ಸಂಶೋಧಕರ ವರದಿ 2020 ಅಕ್ಟೋಬರ್ 30ರ ಶುಕ್ರವಾರ ಬಹಿರಂಗ ಪಡಿಸಿತು.
ಹಾರ್ವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ವಿಜ್ಞಾನಿಗಳು ಈ ವಾರ ‘ಏವಿಯೇಷನ್ - ಪಬ್ಲಿಕ್ ಹೆಲ್ತ್ ಇನಿಶಿಯೇಟಿವ್’ ಎಂಬ ಹೆಸರಿನ ಅಧ್ಯಯನವನ್ನು ಪ್ರಕಟಿಸಿದರು.
ಈ ಅಧ್ಯಯನದಲ್ಲಿ ವಿಜ್ಞಾನಿಗಳು ಸಾಂಕ್ರಾಮಿಕವನ್ನು ಮುಂಚಿತವಾಗಿ ತಡೆಗಟ್ಟುವ ಕ್ರಮಗಳನ್ನು ಅನುಸರಿಸಲು ಪ್ರೋತ್ಸಾಹಿಸಿದರೆ ಪ್ರಯಾಣಿಕರಲ್ಲಿ ಕೋವಿಡ್ -೧೯ ರ ಹರಡುವಿಕೆಯ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ವೈರಸ್ ಹರಡುವುದನ್ನು ತಡೆಯುವ ಮಾರ್ಗಸೂಚಿಗಳಾದ ಆಗಾಗ್ಗೆ ಸೋಪಿನಿಂದ ಕೈ ತೊಳೆಯುವುದು, ಎಲ್ಲಾ ಸಮಯದಲ್ಲೂ ಮುಖಗವಸು ಧರಿಸುವುದು, ವಿಮಾನ ಮತ್ತು ವಿಮಾನ ನಿಲ್ದಾಣದಲ್ಲಿ ನಿರಂತರ ಗಾಳಿ ಮತ್ತು ಗಾಳಿಯ ಹರಿವನ್ನು ಖಾತ್ರಿಪಡಿಸುವುದು ಮತ್ತು ನಿಯಮಿತವಾಗಿ ವಿಮಾನಗಳನ್ನು ಸ್ವಚ್ಛಗೊಳಿಸುವುದು ಇವುಗಳನ್ನು ಅನುಸರಿಸುವುದು ಸೋಂಕು ಪ್ರಸರಣವನ್ನು ತಡೆಗಟ್ಟಲು ಪರಿಣಾಮಕಾರಿ ಆಗಬಲ್ಲುದು ಎಂದು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಕಿರಾಣಿ ಶಾಪಿಂಗ್ ಅಥವಾ ಹೊರಗೆ ಊಟ ಮಾಡುವಂತಹ ದಿನನಿತ್ಯದ ಚಟುವಟಿಕೆಗಳಿಗಿಂತ, ವಿಮಾನದಲ್ಲಿನ ಪಯಣವು ಸಾರ್ಸ್ ಕೋವ್-೨ ಪ್ರಸರಣ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ತಿಳಿಸಿದೆ.
ಕೊರೋನಾವೈರಸ್ ಹರಡುವುದನ್ನು ನಿಯಂತ್ರಿಸುವಲ್ಲಿ ಶಿಕ್ಷಣ ಮತ್ತು ಅರಿವು ಸಹ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
"ವಿಮಾನಯಾನ ಮತ್ತು ವಿಮಾನ ನಿಲ್ದಾಣಗಳು ತಮ್ಮ ಪ್ರಯಾಣದಲ್ಲಿ ರೋಗ ಹರಡುವುದನ್ನು ಕಡಿಮೆ ಮಾಡಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಪ್ರಚಾರ ಮಾಡುತ್ತಿವೆ. ಬುಕಿಂಗ್ ಮಾಡುವಾಗ, ಚೆಕ್-ಇನ್ ಮಾಡುವಾಗ, ಬೋರ್ಡಿಂಗ್ ಮಾಡುವಾಗ ಮತ್ತು ವಿಮಾನದಲ್ಲಿ ಸಾರ್ವಜನಿಕ ಆರೋಗ್ಯ ಸುರಕ್ಷತೆಯ ಮಾಹಿತಿಯನ್ನು ಇದು ಒಳಗೊಂಡಿದೆ. ವಿಮಾನದಲ್ಲಿ ಸೋಂಕು ಪ್ರಕರಣ ಕಾಣಿಸಿಕೊಂಡರೆ ಸೋಂಕಿತ ವ್ಯಕ್ತಿಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಕ್ಯಾಬಿನ್ ಸಿಬ್ಬಂದಿ ತರಬೇತಿ ಪಡೆಯುತ್ತಾರೆ’ ಎಂದು ಅದು ಹೇಳಿದೆ.
ಜಾಗತಿಕ ಕೊರೋನವೈರಸ್ ಕಾಯಿಲೆ ಪ್ರಕರಣಗಳು ೪೫ ದಶಲಕ್ಷಕ್ಕಿಂತ ಹೆಚ್ಚಾಗಿದೆ ಎಂದು ಈ ಅಧ್ಯಯನವು ಹೇಳಿದೆ. ವೆಬ್ಸೈಟ್ ವರ್ಲ್ಡ್ಮೀಟರ್ ಪ್ರಕಾರ, ಕೋವಿಡ್ -೧೯ ಪರಿಣಾಮವಾಗಿ ೧೧,೮೭,೦೨೯ ಸಾವುಗಳು ವಿಶ್ವದಾದ್ಯಂತ ವರದಿಯಾಗಿವೆ. ಭಾರತದಲ್ಲಿ, ಸಾವಿನ ಸಂಖ್ಯೆ ೧೨೧,೦೯೦ ರಷ್ಟಿದ್ದರೆ, ಸೋಂಕು ಪ್ರಮಾಣ ಶುಕ್ರವಾರ ೮,೦೮೮,೮೫೧ ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
No comments:
Post a Comment