ಚೀನಾ ಜೊತೆ ಮಾತುಕತೆ ಪ್ರಯೋಜನವಿಲ್ಲ: ಅಮೆರಿಕ
ನವದೆಹಲಿ: ಚೀನಾವು ತನ್ನ ಪ್ರಾದೇಶಿಕ ಆಕ್ರಮಣದ ಭಾಗವಾಗಿ ಭಾರತ ಜೊತೆಗಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ನಿಯಂತ್ರಣವನ್ನು "ವಶಪಡಿಸಿಕೊಳ್ಳಲು" ಪ್ರಯತ್ನಿಸಿದೆ. ಸಂವಾದ ಮತ್ತು ಒಪ್ಪಂದಗಳ ಮೂಲಕ ಚೀನಾದ ಮನವೊಲಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಮೆರಿಕ 2020 ಅಕ್ಟೋಬರ್ 10ರ ಶನಿವಾರ ಹೇಳಿತು.
ಉತಾಹ್‌ನಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯೆನ್ ಅವರು ಈ ಮಾತನ್ನು ಹೇಳಿದ್ದಾರೆ.
ಭಾರತ ಮತ್ತು ಚೀನಾ ಪೂರ್ವ ಲಡಾಖ್‌ನಲ್ಲಿ ಐದು ತಿಂಗಳುಗಳಿಂದ ಗಡಿ ಬಿಕ್ಕಟ್ಟಿನ ಪರಿಣಾಮವಾಗಿ ಉದ್ವಿಗ್ನತೆ ಎದುರಿಸುತ್ತಿವೆ. ಇದು ಉsಯ ರಾಷ್ಟ್ರಗಳ ಬಾಂಧವ್ಯಗಳನ್ನು ಗಮನಾರ್ಹವಾಗಿ ಕುಂಠಿತಗೊಳಿಸಿದೆ. ಗಡಿ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಿಕೊಳ್ಳಲು ಉಭಯ ಕಡೆಯವರೂ ಉನ್ನತ ಮಟ್ಟದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದ್ದಾರೆ. ಆದಾಗ್ಯೂ, ನಿಲುವನ್ನು ಕೊನೆಗೊಳಿಸುವಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ.
"ಸಿಸಿಪಿಯ (ಚೀನೀ ಕಮ್ಯುನಿಸ್ಟ್ ಪಾರ್ಟಿ) ಪ್ರಾದೇಶಿಕ ಆಕ್ರಮಣವು ಅದರ ಭಾರತೀಯ ಗಡಿಯಲ್ಲಿ ಸ್ಪಷ್ಟವಾಗಿದೆ, ಅಲ್ಲಿ ಚೀನಾ ನೈಜ ನಿಯಂತ್ರಣ ರೇಖೆಯ ನಿಯಂತ್ರಣವನ್ನು ಬಲ ಪ್ರಯೋಗದಿಂದ ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ’ ಎಂದು ಒ’ಬ್ರಿಯೆನ್ ಹೇಳಿದ್ದಾರೆ.
ಭಾರತ-ಚೀನಾ ಗಡಿ ವಿವಾದವು ೩,೪೮೮ ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಒಳಗೊಂಡಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡರೆ, ಭಾರತ ಇದನ್ನು ವಿರೋಧಿಸುತ್ತದೆ. ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ನೌಕಾಪಡೆ ಮತ್ತು ವಾಯುಪಡೆಯು ಬೆದರಿಕೆ ಹಾಕುವ ಮಿಲಿಟರಿ ಕಸರತ್ತುಗಳನ್ನು ಮುಂದುವರೆಸುತ್ತಿರುವ ತೈವಾನ್ ಜಲಸಂಧಿಯಲ್ಲಿಯೂ ಚೀನಾದ ಪ್ರಾದೇಶಿಕ ಆಕ್ರಮಣವು ನಿಜವಾಗಿದೆ ಎಂದು ಒ’ಬ್ರೇನ್ ಹೇಳಿದ್ದಾರೆ.
"ಬೀಜಿಂಗ್‌ನ ಸಹಿ ಅಂತರರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮ, ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್), ಬಡ ಕಂಪೆನಿಗಳು ತಮ್ಮ ಮೂಲಸೌಕರ್ಯಗಳನ್ನು ನಿರ್ಮಿಸಲು ಚೀನೀ ಕಾರ್ಮಿಕರನ್ನು ನೇಮಿಸಿಕೊಳ್ಳುವ ಚೀನೀ ಸಂಸ್ಥೆಗಳಿಗೆ ಪಾವತಿಸಲು ಅಪಾರದರ್ಶಕ ಮತ್ತು ಸಮರ್ಥನೀಯವಲ್ಲದ ಚೀನೀ ಸಾಲಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
ಈ ಯೋಜನೆಗಳು ಹಲವು ಅನಗತ್ಯ, ಕಳಪೆ ನಿರ್ಮಿತ ಮತ್ತು "ಬಿಳಿ ಆನೆಗಳು’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೇಳಿದರು.
"ಈಗ ಈ ದೇಶಗಳು ಚೀನಾದ ಸಾಲದ ಮೇಲೆ ಅವಲಂಬಿತವಾಗಿರುವುದು ಅವುಗಳ ಸಾರ್ವಭೌಮತ್ವವನ್ನು ಸವೆಸುತ್ತದೆ ಮತ್ತು ವಿಶ್ವಸಂಸ್ಥೆ ಮತದಾನದ ಸಂದರ್ಭ ಅಥವಾ ಬೇರಾವುದೇ ಸಂದರ್ಭಗಳಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷದ ಮಾರ್ಗ ಬೆಂಬಲಿಸುವುದು ಬಿಟ್ಟು ಬೇರೆ ಮಾರ್ಗಗಳು ಅವುಗಳಿಗೆ ಇಲ್ಲವಾಗಿದೆ’ ಎಂದು ಒ’ಬ್ರಿಯನ್ ನುಡಿದರು.
ಚೀನಾದ ಇತರ ಅಂತರರಾಷ್ಟ್ರೀಯ ನೆರವು ಪ್ರಯತ್ನಗಳಲ್ಲಿ ವೆನಿಜುವೆಲಾದ ನಿಕೋಲಸ್ ಮಡ್ಯುರೊ ಸೇರಿದಂತೆ ವಿಶ್ವದಾದ್ಯಂತ "ಪರಿಯಾ ಪ್ರಭುತ್ವಗಳಿಗೆ’ ಕಣ್ಗಾವಲು ವ್ಯವಸ್ಥೆಗಳು ಮತ್ತು ದಮನದ ಸಾಧನಗಳನ್ನು ಮಾರಾಟ ಮಾಡುವುದು ಸೇರಿದೆ ಎಂದು ಬ್ರಿಯಾನ್ ಬೊಟ್ಟು ಮಾಡಿದರು.
"ಸಂವಾದ ಮತ್ತು ಒಪ್ಪಂದಗಳು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಬದಲಿಸಲು ಸಾಧ್ಯವಿಲ್ಲ ಅಥವಾ ಅದರ ಮೇಲೆ ಒತ್ತಡ ಉಂಟು ಮಾಡುವುದಿಲ್ಲ ಎಂಬುದಾಗಿ ಒಪ್ಪಿಕೊಳ್ಳುವ ಸಮಯ ಬಂದಿದೆ. ಬೇರೆ ದಾರಿ ನೋಡುವುದರಿಂದ ಅಥವಾ ಇನ್ನೊಂದು ಕೆನ್ನೆ ತೋರಿಸುವುದರಿಂದಲೂ ಪ್ರಯೋಜನವಿಲ್ಲ. ನಾವು ಅದನ್ನು ಬಹಳ ಸಮಯದಿಂದ ಮಾಡುತ್ತಿದ್ದೇವೆ’ ಅವರು ನುಡಿದರು.
No comments:
Post a Comment