Tuesday, October 13, 2020

ಅಕ್ಟೋಬರ್ ೨೮-೨೯ರಂದು ಲಡಾಖ್‌ಗೆ ಸಂಸದೀಯ ಸಮಿತಿ ಭೇಟಿ

 ಅಕ್ಟೋಬರ್ ೨೮-೨೯ರಂದು ಲಡಾಖ್ಗೆ ಸಂಸದೀಯ ಸಮಿತಿ ಭೇಟಿ

ನವದೆಹಲಿ: ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟನ್ನು ಎದುರಿಸುತ್ತಿರುವ ವೇಳೆ ಹಾಗು ಗಡಿ ಘರ್ಷಣೆ ಕಡಿಮೆ ಮಾಡಲು ಯತ್ನಗಳು ನಡೆಯುತ್ತಿರುವ ವೇಳೆಯಲ್ಲಿ ಸೈನಿಕರಿಗೆ ಒದಗಿಸಲಾಗುವ ಎತ್ತರಪ್ರದೇಶಗಳ ಉಡುಪು, ವಸತಿ ಮತ್ತು ಪಡಿತರ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಂಸತ್ ಸದಸ್ಯರ ಗುಂಪೊಂದು ಲಡಾಖ್ಗೆ ಭೇಟಿ ನೀಡಲು ಜ್ಜಾಗಿದೆ

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸದಸ್ಯರು ಅಕ್ಟೋಬರ್ ೨೮-೨೯ರಂದು ಲೇಹ್ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು 2020 ಅಕ್ಟೋಬರ್ 13ರ ಮಂಗಳವಾರ ತಿಳಿಸಿದರು.

ಕಳೆದ ತಿಂಗಳು ಚೌಧರಿ ಅವರು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದ ನಂತರ ಭೇಟಿಯನ್ನು ಅಂತಿಮಗೊಳಿಸಲಾಗಿದೆ.

ಸಮಿತಿಯು ಪ್ರಸ್ತುತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನೀಡಿದ ಇತ್ತೀಚಿನ ವರದಿಯನ್ನು ಪರಿಶೀಲಿಸುತ್ತಿದೆ. ವರದಿಯು ಸೈನಿಕರನ್ನು ಎತ್ತರದ ಪ್ರದೇಶಗಳಲ್ಲಿನ ಉಡುಪು ಮತ್ತು ಸಲಕರಣೆಗಳ ನ್ಯೂನತೆ ನಿವಾರಿಸಿ ಸರಿಯಾದ ಸಾಧನಗಳೊಂದಿಗೆ ಸಜ್ಜುಗೊಳಿಸುವ ಅಗತ್ಯವನ್ನು ತಿಳಿಸಿದೆ.

ಸೆಪ್ಟೆಂಬರ್ ರಂದು ನಡೆದ ಸಭೆಯಲ್ಲಿ ಪಿಎಸಿ ಪಡಿತರ ಮತ್ತು ಬಟ್ಟೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರೊಂದಿಗೆ ಚರ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ ಪಿಎಸಿ ಅಧ್ಯಕ್ಷರು ಸಿಡಿಎಸ್ ಗೆ ಲಡಾಕ್ ವಲಯದ ಸಂಸದರಿಗೆ ಪ್ರವಾಸವನ್ನು ಪರಿಗಣಿಸುವಂತೆ ಕೇಳಿಕೊಂಡರು, ಅದರ ನಂತರ ಚೌಧರಿಯವರು ಬಿರ್ಲಾ ಅವರಿಗೆ ಪತ್ರ ಬರೆದಿದ್ದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿವರವನ್ನು ಅಂತಿಮಗೊಳಿಸಲು ಅಕ್ಟೋಬರ್ ೨೩ ರಂದು ಸಭೆ ಸೇರುವ ನಿರೀಕ್ಷೆಯಿದೆ.

ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ, ಸಿಯಾಚಿನ್ ಮತ್ತು ಲಡಾಖ್ನಂತಹ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಸೈನಿಕರು ಎದುರಿಸುತ್ತಿರುವ ಅಗತ್ಯ ಬಟ್ಟೆ ಮತ್ತು ಪಡಿತರ ಕೊರತೆಯನ್ನು ನಿವಾರಿಸುವ ಬಗ್ಗೆ ರಾಷ್ಟ್ರೀಯ ಲೆಕ್ಕ ಪರಿಶೋಧಕರು ಗಮನ ಸೆಳೆದಿದ್ದರು.

ಹಿಮ ಕನ್ನಡಕಗಳ ಕೊರತೆಯಿದೆ ಮತ್ತು ನವೆಂಬರ್ ೨೦೧೫ ಮತ್ತು ಸೆಪ್ಟೆಂಬರ್ ೨೦೧೬ ನಡುವೆ ಸೈನಿಕರಿಗೆ ಬಹೂಪಯೋಗಿ ಬೂಟುಗಳನ್ನು ನೀಡಲಾಗಿಲ್ಲ ಎಂದು ಸಿಎಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ, ಸಿಎಜಿ ವರದಿಗೆ ಪ್ರತಿಕ್ರಿಯಿಸಿದ ಸೇನೆಯ ಹಿರಿಯ ಅಧಿಕಾರಿಗಳು, ನ್ಯೂನತೆಗಳನ್ನು ಗಮನಿಸಲಾಗಿದೆ ಮತ್ತು ಸಿಯಾಚಿನ್ನಲ್ಲಿ ನಿಯೋಜಿಸಲಾಗಿರುವ ಪ್ರತಿಯೊಬ್ಬ ಸೈನಿಕನಿಗೆ ಲಕ್ಷ ರೂ.ಗಳ sಯಂತ್ರ ಸಾಧನ ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.

ಭೇಟಿಯ ಸಮಯದಲ್ಲಿ ಸಂಸದರಿಗೆ ಹಿರಿಯ ಸೇನಾಧಿಕಾರಿಗಳು ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿಜ್ಞಾನಿಗಳು ಮಾಹಿತಿ ನೀಡುವ ಸಾಧ್ಯತೆ ಇದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸರ್ಕಾರದ ಸ್ವಾಧೀನ ಖಾತೆಗಳನ್ನು ಮತ್ತು ಸಿಎಜಿ ಸಿದ್ಧಪಡಿಸಿದ ವರದಿಗಳನ್ನು ಪರಿಶೀಲಿಸುತ್ತದೆ. ಪೂರ್ವ ಲಡಾಕ್ ವಲಯದಲ್ಲಿ ಭಾರತೀಯ ಮತ್ತು ಚೀನೀ ಪಡೆಗಳು ದೀರ್ಘಾವಧಿಯವರೆಗಿನ ಸಮರಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ವೇಳೆಯಲ್ಲೇ ಸಮಿತಿಯ ಲೆಹ್ಗೆ ಭೇಟಿ ನೀಡುತ್ತಿದೆ.

No comments:

Advertisement