Tuesday, October 6, 2020

‘ಭಯಾನಕ’: ಹತ್ರಾಸ್ ಪ್ರಕರಣ ಬಗ್ಗೆ ಸುಪ್ರೀಂಕೋರ್ಟ್

 ‘ಭಯಾನಕ: ಹತ್ರಾಸ್ ಪ್ರಕರಣ ಬಗ್ಗೆ ಸುಪ್ರೀಂಕೋರ್ಟ್

ನವದೆಹಲಿ: ಹತ್ರಾಸ್ ಮೂಲದ ೨೦ ವರ್ಷದ ಯುವತಿಯ ಮೇಲೆ ಚಿತ್ರಹಿಂಸೆ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಕುಟುಂಬ ಮತ್ತು ಸಾಕ್ಷಿಗಳ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳು 2020 ಅಕ್ಟೋಬರ್ 06ರ ಮಂಗಳವಾರ ಸುಪ್ರೀಂಕೋರ್ಟ್ ಮುಂದೆ ಬಂದಿದ್ದು, ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.

ಕುಟುಂಬಕ್ಕೆ ವಕೀಲರ ನೆರವು ಪಡೆಯಲು ಸಾಧ್ಯವಾಗಿದೆಯೇ ಎಂದೂ ಸುಪ್ರೀಂಕೋರ್ಟ್ ಪ್ರಶ್ನಿಸಿತು.

ರಾಷ್ಟ್ರಮಟ್ಟದಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಸತ್ಯಮಾ ದುಬೆ ಮತ್ತು ಇತರರು ಅರ್ಜಿ ಸಲ್ಲಿಸಿದ್ದು, ಪ್ರಕರಣದ ಬಗ್ಗೆ ಕೇಂದ್ರ ತನಿಖಾ ದಳ ಅಥವಾ ವಿಶೇಷ ತನಿಖಾ ತಂಡವು ತನಿಖೆ ನಡೆಸಬೇಕು ಎಂದು ಕೋರಿತ್ತು.

ಪ್ರಕರಣದ "ನ್ಯಾಯಯುತ ತನಿಖೆ ನಡೆಯಬೇಕು ಎಂದು ಕೋರಿರುವ ಅರ್ಜಿಯು, ಪ್ರಕರಣ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ನಸುಕಿನ .೩೦ರ ವೇಳೆಗೆ ನಡೆದ ರಹಸ್ಯ ಸ್ವರೂಪದ ಅಂತ್ಯ ಸಂಸ್ಕಾರ ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡದಂತೆ ವಿರೋಧಿ ನಾಯಕರನ್ನು ತಡೆಯುವಲ್ಲಿ ಪೊಲೀಸರ ಪಾತ್ರವನ್ನು ಪ್ರಶ್ನಿಸಿದೆ.

ನೀವು ಏಕೆ ಅಲಹಾಬಾದ್ ಹೈಕೋರ್ಟನ್ನು ಸಂಪರ್ಕಿಸಿಲ್ಲ ಎಂದು ಅರ್ಜಿ ಸಲ್ಲಿಸಿದ ಮಹಿಳಾ ಗುಂಪನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತು.

ಅಲಹಾಬಾದ್ ಹೈಕೋರ್ಟ್ನಲ್ಲಿ ಈಗಾಗಲೇ ಬಾಕಿ ಇರುವ ಪ್ರಕರಣವನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸಬೇಕು ಎಂಬುದಾಗಿ ಮಹಿಳಾ ಅರ್ಜಿದಾರರ ಪರ ವಕೀಲರಾದ ವಕೀಲ ಕೀರ್ತಿ ಸಿಂಗ್ ಹೇಳಿದಾಗ, ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೊಬ್ಡೆ, "ಅಲಹಾಬಾದ್ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದೆ ... ನಾವು ಹೈಕೋರ್ಟ್ ಅಭಿಪ್ರಾಯಗಳನ್ನು ಪಡೆಯಬಹುದೇ? ಹೈಕೋರ್ಟ್ ತಪ್ಪೆಸಗಿದರೆ ಎಸಗಿದರೆ, ನಾವು ಇಲ್ಲಿದ್ದೇವೆ ಎಂದು ಹೇಳಿದರು. ಪ್ರಕರಣದ "ಸುಗಮ ತನಿS’ಯನ್ನು ಖಚಿತಪಡಿಸುವುದಾಗಿ ನ್ಯಾಯಾಲಯ ಅರ್ಜಿದಾರರಿಗೆ ಭರವಸೆ ನೀಡಿತು.

"ಅಲಹಾಬಾದ್ ಹೈಕೋಟಿನ ವಿಚಾರಣೆಯ ಪ್ರಸ್ತುತ ವ್ಯಾಪ್ತಿ ಏನು ಎಂಬುದರ ಕುರಿತು ನಿಮ್ಮೆಲ್ಲರಿಂದ ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ನ್ಯಾಯಾಲಯ ಹೇಳಿತು. ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಹೈಕೋರ್ಟ್ ಮುಂದಿರುವ ಪ್ರಕರಣದ ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಸಲಹೆಗಳನ್ನು ಕೋರಿದರು.

ನ್ಯಾಯಾಲಯಕ್ಕೆ ನೀಡಿದ ಪ್ರಮಾಣಪತ್ರದಲ್ಲಿ, ರಾಜ್ಯ ಸರ್ಕಾರವು ಮಧ್ಯರಾತ್ರಿಯ ನಂತರದ ಅಂತ್ಯಕ್ರಿಯೆಯನ್ನು ಮರುದಿನ ಬೆಳಗಿನ ಸಂಭವಿಸಬಹುದಾಗಿದ್ದ "ದೊಡ್ಡ ಪ್ರಮಾಣದ ಹಿಂಸಾಚಾರವನ್ನು ತಪ್ಪಿಸಲು ಉದ್ದೇಶದಿಂದ ನಡೆಸಲಾಗಿದೆ ಎಂದು ತಿಳಿಸಿತು.

"ಅಸಾಧಾರಣ ಸಂದರ್ಭಗಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತು ಸಮ್ಮತಿಯೊಂದಿಗೆ ರಾತ್ರಿಯಲ್ಲಿ ಸಂತ್ರಸ್ತೆಯ ಅಂತ್ಯಕ್ರಿಯೆ ನೆರವೇರಿಸುವ ಅಸಾಧಾರಣ ಹೆಜ್ಜೆ ಇಡಲು ಜಿಲ್ಲಾಡಳಿತದ ಮೇಲೆ ಒತ್ತಡ ಉಂಟು ಮಾಡಿತ್ತು ಎಂದು ಸರ್ಕಾರದ ಪ್ರಮಾಣ ಪತ್ರ ತಿಳಿಸಿತು.

ಒಂದು ದಿನದ ನಂತರ ಬರಲಿದ್ದ ಬಾಬರಿ ಮಸೀದಿ ತೀರ್ಪನ್ನು ಗಮನದಲ್ಲಿಟ್ಟುಕೊಂಡು "ಪ್ರಮುಖ ಕಾನೂನು ಸುವ್ಯವಸ್ಥೆ ಸಮಸ್ಯೆ ಬಗ್ಗೆ ಗುಪ್ತಚರ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಘೋಷಿಸಲಾಗಿತ್ತು ಎಂದು ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.

ಕುಟುಂಬದ ಆಶಯಗಳನ್ನು ಬದಿಗೊತ್ತಿ ಪೊಲೀಸರು ನಡೆಸಿದ ಅವಸರದ, ರಹಸ್ಯ ಅಂತ್ಯಕ್ರಿಯೆ, ಕುಟುಂಬ ಸದಸ್ಯರನ್ನು ಮನೆಯೊಳಗೆ ಬಂಧಿಸಿ ಇಟ್ಟಿರುವುದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.

ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇದು ಪ್ರಕರಣವನ್ನು "ಮುಚ್ಚಿಹಾಕುವ ಕೃತ್ಯ ಎಂದು ಆಪಾದಿಸಿವೆ.

ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಧರಣಿ ನಡೆದ ರೀತಿಯ ಬಗ್ಗೆ ಸೆಪ್ಟೆಂಬರ್ ೨೯ ಬೆಳಿಗ್ಗೆಯಿಂದ ಹತ್ರಾಸ್ ಸ್ನಲ್ಲಿನ ಜಿಲ್ಲಾಡಳಿತವು ಹಲವಾರು ಗುಪ್ತಚರ ಮಾಹಿತಿಯನ್ನು ಪಡೆದಿದೆ ಮತ್ತು  ಜಾತಿ/ ಕೋಮು ಬಣ್ಣ ನೀಡಲು ಇಡೀ ಸಮಸ್ಯೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿತು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ "ಉಭಯ ಸಮುದಾಯಗಳು / ಜಾತಿಗಳ ಲಕ್ಷಾಂತರ ಪ್ರತಿಭಟನಾಕಾರರು ಮತ್ತು ಮಾಧ್ಯಮಗಳು ಮರುದಿನ ಬೆಳಗ್ಗೆ ಹಳ್ಳಿಯಲ್ಲಿ ಸಮಾವೇಶಗೊಳ್ಳುವ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಮಾಹಿತಿ ಲಭಿಸಿತ್ತು.  ಅದು ಹಿಂಸಾತ್ಮಕ ಹಾಗೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿಗಳಿಗೆ ಕಾರಣವಾಗುವ ಸ್ಥಿತಿ ಇತ್ತು ಎಂದೂ ಪ್ರಮಾಣಪತ್ರ ಹೇಳಿದೆ.

"ಇಂತಹ ಅಸಾಮಾನ್ಯ ಸನ್ನಿವೇಶದಲ್ಲಿ ಬೆಳಗ್ಗೆ ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ತಪ್ಪಿಸಲು ರಾತ್ರಿಯಲ್ಲಿಯೇ ಎಲ್ಲಾ ಧಾರ್ಮಿಕ ವಿಧಿಗಳೊಂದಿಗೆ ಅಂತ್ಯಕ್ರಿಯೆ ಮಾಡಲು ಮೃತರ ಪೋಷಕರ ಮನವೊಲಿಸುವ ನಿರ್ಧಾರವನ್ನು ಜಿಲ್ಲಾಡಳಿತ ತೆಗೆದುಕೊಂಡಿತು. ಆಕೆಯ ಸಾವು ಮತ್ತು ಮರಣೋತ್ತರ ಪರೀಕ್ಷೆಯ ೨೦ ಗಂಟೆಗಳ ನಂತರ ಇದನ್ನು ನಡೆಸಲಾಯಿತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿತು.

ಮರಣೋತ್ತರ ಪರೀಕ್ಷೆಯನ್ನು ಒಮ್ಮೆ ಮಾಡಿದ ನಂತರ, "ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಯೋಜಿತ ಜಾತಿ ವಿಭಜನೆಯಿಂದ ಉಂಟಾಗುವ ಸಂಭಾವ್ಯ ಹಿಂಸಾತ್ಮಕ ಪರಿಸ್ಥಿತಿಯನ್ನು ತೊಡೆದುಹಾಕುವುದನ್ನು ಹೊರತುಪಡಿಸಿ ಶವಸಂಸ್ಕಾರವನ್ನು ತ್ವರಿತಗೊಳಿಸಲು "ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ" ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತು.

No comments:

Advertisement