ಏಕತಾ ಪ್ರತಿಮೆಯ ಬಳಿ ‘ಆರೋಗ್ಯ ವನ’ ಉದ್ಘಾಟಿಸಿದ ಪ್ರಧಾನಿ
ಕೆವಾಡಿಯಾ, ಗುಜರಾತ್: ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿರುವ ಏಕತಾ ಪ್ರತಿಮೆಯ ಬಳಿ ಔಷಧೀಯ ಸಸ್ಯ ಮತ್ತು ಗಿಡಮೂಲಿಕೆಗಳ ಉದ್ಯಾನವನ ’ಆರೋಗ್ಯ ವನ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ಅಕ್ಟೋಬರ್ 30ರ ಶುಕ್ರವಾರ ಉದ್ಘಾಟಿಸಿದರು.
‘ಆರೋಗ್ಯ ವನ’ (ಆರೋಗ್ಯ ಅರಣ್ಯ) ಸುಮಾರು ೧೭ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ, ಇದು ಮಾನವರ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವಹಿಸುವ ವ್ಯಾಪಕ ಶ್ರೇಣಿಯ ಔಷಧೀಯ ಸಸ್ಯಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದರು.
ಗುಜರಾತ್ನ ಜನಪ್ರಿಯ ಪ್ರವಾಸೀ ಆಕರ್ಷಣೆಯಾಗಿ ಹೊರಹೊಮ್ಮಿರುವ ಸರ್ದಾರ್ ಪಟೇಲರಿಗೆ ಮೀಸಲಾಗಿರುವ ಅತ್ಯುನ್ನತ ಸ್ಮಾರಕವಾದ ಏಕತಾ ಪ್ರತಿಮೆ (ಸ್ಯಾಚ್ಯೂ ಆಫ್ ಯೂನಿಟಿ) ಬಳಿ ಶುಕ್ರವಾರ ಮತ್ತು ಶನಿವಾರ ಪ್ರಧಾನ ಮಂತ್ರಿಯವರು ಉದ್ಘಾಟಿಸುತ್ತಿರುವ ೧೭ ಯೋಜನೆಗಳಲ್ಲಿ ’ಆರೋಗ್ಯ ವನ’ ಒಂದು.
ಆರೋಗ್ಯ ವನವು ಜನರ ಜೀವನದಲ್ಲಿ ಯೋಗ, ಆಯುರ್ವೇದ ಮತ್ತು ಧ್ಯಾನದ ಮಹತ್ವವನ್ನು ಒತ್ತಿಹೇಳುತ್ತದೆ.
ವಿಸ್ತಾರವಾದ ಉದ್ಯಾನದಲ್ಲಿ ೩೮೦ ಆಯ್ದ ಜಾತಿಗಳ ಐದು ಲಕ್ಷ ಸಸ್ಯಗಳನ್ನು ಬೆಳೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
’ಆರೋಗ್ಯ ವನ’ ನಲ್ಲಿ ಕಮಲದ ಕೊಳ, ಆಲ್ಬಾ ಗಾರ್ಡನ್, ಸುವಾಸನೆಯ ಉದ್ಯಾನ, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ಸ್ಮರಣ ಸಂಚಿಕೆ ಅಂಗಡಿ ಮತ್ತು ಆಯುರ್ವೇದ ಆಹಾರವನ್ನು ಪೂರೈಸುವ ಕೆಫೆಟೇರಿಯಾ ಸೇರಿವೆ.
ಪ್ರಧಾನಿ ಮೋದಿ ಅವರು ಡಿಜಿಟಲ್ ಮಾಹಿತಿ ಕೇಂದ್ರ ಮತ್ತು ’ಆರೋಗ್ಯ ವನ’ ಒಳಗೆ ರಚಿಸಲಾದ ಒಳಾಂಗಣ ಸಸ್ಯ ಉದ್ಯಾನಕ್ಕೂ ಭೇಟಿ ನೀಡಿದರು.
ಪ್ರಧಾನ ಮಂತ್ರಿಯವರು ’ಆರೋಗ್ಯ ವನದ’ ಗಾಲ್ಫ್ ಕೋರ್ರ್ಟಿನಲ್ಲಿ ಸುತ್ತಾಡಿದರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಅಲ್ಲಿ ನಿಯೋಜಿಸಲಾಗಿರುವ ಮಾರ್ಗದರ್ಶಿಗಳೊಂದಿಗೆ ಸಂವಹನ ನಡೆಸಿದರು.
No comments:
Post a Comment