Monday, October 5, 2020

ಕಾಶ್ಮೀರದಲ್ಲಿ ಉಗ್ರದಾಳಿ: ಇಬ್ಬರು ಯೋಧರು ಹುತಾತ್ಮ

 ಕಾಶ್ಮೀರದಲ್ಲಿ ಉಗ್ರದಾಳಿ: ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು 2020 ಅಕ್ಟೋಬರ್ 05 ಸೋಮವಾರ ಹುತಾತ್ಮರಾದರು.

ದಾಳಿಯಲ್ಲಿ ಗಾಯಗೊಂಡಿದ್ದ ಐವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯ ಪೈಕಿ ಇಬ್ಬರು ತೀವ್ರ ಗಾಯಗಳ ಪರಿಣಾಮವಾಗಿ ಕೊನೆಯುಸಿರು ಎಳೆದಿದ್ದಾರೆ ಅಧಿಕಾರಿಗಳು ತಿಳಿಸಿದರು.

ಭಾನುವಾರ ಶ್ರೀನಗರ ಬಳಿಯ ಪಾಂಪೋರ್ ಬೈಪಾಸ್ನಲ್ಲಿ ಬೆಟಾಲಿಯನ್ ರಸ್ತೆ ತೆರೆಯುವ ತಂಡದ (ಆರ್ಒಪಿ) ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಗಾಯಗೊಂಡ ಸಿಆರ್ಪಿಎಫ್ ಸಿಬ್ಬಂದಿಯನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸಿಆರ್ಪಿಎಫ್ ಪಡೆಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಯೊಂದಿಗೆ ರಸ್ತೆ ತೆರೆಯುವ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಧ್ಯಾಹ್ನ ೧೨: ೫೦ ಸುಮಾರಿಗೆ ಭಯೋತ್ಪಾದಕರು ತಂಡದ ಮೇಲೆ ಗುಂಡು ಹಾರಿಸಿದ್ದರು.

ದಾಳಿಯ ನಂತರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ.

"೧೧೦ ಬಿಎನ್ ಸಿಆರ್ಪಿಎಫ್ ಸೈನಿಕರು ಮತ್ತು ಜೆಕೆಪಿ ರಸ್ತೆ ತೆರೆಯುತ್ತಿದ್ದರು. ಸಮಯದಲ್ಲಿ ಅಪರಿಚಿತ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ಒಟ್ಟು ಐವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡರು. ಬಳಿಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಸಿಆರ್ಪಿಎಫ್ ಹೇಳಿಕೆ ತಿಳಿಸಿದೆ.

No comments:

Advertisement