ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಸ್ವಾಮಿತ್ವ ಯೋಜನೆಯ ಮೂಲಕ ಆಸ್ತಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಅಕ್ಟೋಬರ್ ೧೧ರ ಭಾನುವಾರ ಚಾಲನೆ ನೀಡಿದರು.
ಈ ಕಾರ್ಡ್ಗಳು ಹಳ್ಳಿಗರ ಮನೆಗಳು ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ಹಕ್ಕುಪತ್ರಗಳ ಭೌತಿಕ ಪ್ರತಿಗಳಾಗಲಿವೆ.
ಏಪ್ರಿಲ್
ನಲ್ಲಿ ಆರಂಭಿಸಿದ ಸ್ವಾಮಿತ್ವ ಯೋಜನೆಯು ಗ್ರಾಮೀಣ ಜನರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಅವಕಾಶ ನೀಡಲಿದೆ. ಯೋಜನೆಯಿಂದ ೬.೬೨ ಲಕ್ಷ ಗ್ರಾಮಗಳಿಗೆ ಲಾಭವಾಗಲಿದ್ದು, ಯೋಜನೆಯಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ. ಯೋಜನೆಯಲ್ಲಿ ಉತ್ತರಪ್ರದೇಶದ ೩೪೬, ಹರಿಯಾಣದ ೨೨೧, ಮಹಾರಾಷ್ಟ್ರದ ೧೦೦, ಮಧ್ಯಪ್ರದೇಶದ ೪೪, ಉತ್ತರಾಖಂಡದ ೫೦ ಮತ್ತು ಕರ್ನಾಟಕದ ೨ ಗ್ರಾಮಗಳು ಸೇರಿ ಒಟ್ಟು ೭೬೩ ಗ್ರಾಮಗಳು ಫಲಾನುಭವಿಸಿಗಳು ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.
No comments:
Post a Comment