ನಾನು ‘ಮೊಮೊ’ ಕೊಡ್ತೇನೆ: ಪ್ರಧಾನಿಗೆ ಗಾಡಿ ವ್ಯಾಪಾರಿ ಆಹ್ವಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿ ವಾರಾಣಸಿ ಮೂಲದ ಬೀದಿ ವ್ಯಾಪಾರಿ ಅರವಿಂದ ಮೌರ್ಯ ಅವರ ’ಮೊಮೊ ಉಪಕ್ರಮ’ಕ್ಕೆ 2020 ಅಕ್ಟೋಬರ್ 27ರ ಮಂಗಳವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ -೧೯ನ್ನು ದೂರ ಇರಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಮ್ಮ ಗಾಡಿಯಲ್ಲಿ ಮೊಮೊ ಖರೀದಿಸುವವರಿಗೆ ಮೌರ್ಯ ಅವರು ಮುಖವಾಡಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ.
ಪ್ರಧಾನಿಯವರು ತಮ್ಮ ಮೊಮೊವನ್ನು ಉಚಿತವಾಗಿ ನೀಡುವುದಾಗಿ ಹೇಳಿರುವ ಅರವಿಂದ ಮೌರ್ಯ ಅವರ ಕಾಳಜಿಯನ್ನು ಪ್ರಧಾನಿ ಮೆಚ್ಚಿದರು.
ಪ್ರಧಾನಮಂತ್ರಿಯೊಂದಿಗೆ ಸಂವಹನ ನಡೆಸಿದ ಅರವಿಂದ, "ನಾನು ಮೊಮೊಗಳು ಮತ್ತು ಕಾಫಿಯನ್ನು ಮಾರುತ್ತೇನೆ ಮತ್ತು ದುರ್ಗಾ ಕುಂಡ್ ಪ್ರದೇಶದಲ್ಲಿ ನನ್ನ ವಿತರಣಾ ಕಾರ್ಟ್ ಹೊಂದಿದ್ದೇನೆ’ ಎಂದು ಹೇಳಿದರು.
ಯೋಜನೆಯಡಿ ಸಾಲ ಪಡೆಯುವಲ್ಲಿ ಏನಾದರೂ ತೊಂದರೆಗಳನ್ನು ಎದುರಿಸಿದಿರಾ? ಎಂಬುದಾಗಿ ಪ್ರಧಾನಿ ಕೇಳಿದ ಪ್ರಶ್ನೆಗೆ ಅರವಿಂದ, ’ಇಲ್ಲ. ವಾರಣಾಸಿ ನಗರ ನಿಗಮ್ ಮತ್ತು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಮೀಕ್ಷೆ ನಡೆಸಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದರು. ಒಂದು ವಾರದ ನಂತರ, ನನ್ನ ಬ್ಯಾಂಕ್ ಶಾಖೆಯಿಂದ ೧೦,೦೦೦ ರೂ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ನನಗೆ ಕರೆ ಬಂತು. ನನ್ನ ಆಧಾರ್ ಕಾರ್ಡ್ ಮತ್ತು ನಗರ ನಿಗಮ್ ನೀಡಿದ ಪ್ರಮಾಣಪತ್ರದೊಂದಿಗೆ ನಾನು ಬ್ಯಾಂಕಿಗೆ ಹೋದೆ ಮತ್ತು ಹಣವನ್ನು ನನ್ನ ಖಾತೆಗೆ ವರ್ಗಾಯಿಸಲಾಗಿತ್ತು’ ಎಂದು ಹೇಳಿದರು.
ಪಿಎಂ ಮೋದಿ ಅವರು ಹಗರವಾದ ಧಾಟಿಯಲ್ಲಿ ’ವಾರಣಾಸಿಗೆ ಭೇಟಿ ನೀಡಿದಾಗ ನನಗೆ ಯಾರೂ ಮೊಮೋಗಳನ್ನು ನೀಡುವುದಿಲ್ಲ’ ಎಂದು ಹೇಳಿದರು. ತತ್ ಕ್ಷಣವೇ ಸ್ಪಂದಿಸಿದ ಅರವಿಂದ ಮೌರ್ಯ ತಮ್ಮ ಮಾರಾಟದ ಕಾರ್ಟ್ಗೆ ಪ್ರಧಾನಿಯವರನ್ನು ಆಹ್ವಾನಿಸಿದರು.
ಈ ಯೋಜನೆಯಡಿ ತನ್ನ ಸಾಲದ ಬಡ್ಡಿಯನ್ನು ಮುಕ್ತಗೊಳಿಸಬಹುದು ಎಂಬುದು ನಿಮಗೆ ತಿಳಿದಿದೆಯೇ ಎಂದು ಪ್ರಧಾನಿ ಅವರನ್ನು ಕೇಳಿದಾಗ, ಫಲಾನುಭವಿ, ‘ಹೌದು, ನಾನು ನನ್ನ ಕಂತನ್ನು ಸಮಯಕ್ಕೆ ಪಾವತಿಸಿದರೆ, ನಾನು ಅದನ್ನು ಬಡ್ಡಿರಹಿತ ಸಾಲವನ್ನಾಗಿ ಮಾಡಬಹುದು ಮತ್ತು ವರ್ಷಕ್ಕೆ ೨೦,೦೦೦ ರೂಪಾಯಿಗಳ ಹೆಚ್ಚಿನ ಸಹಾಯವನ್ನು ಪಡೆಯಬಹುದು ಎಂಬುದು ನನಗೆ ತಿಳಿದಿದೆ’ ಎಂದು ಉತ್ತರಿಸಿದರು.
ಕಂಪೆನಿಯ ಮೂಲಕ, ಮೊಮೊಗಳನ್ನು ಮನೆ ಮನೆಗೆ ವಿತರಿಸುವುದನ್ನೂ ಖಾತರಿಪಡಿಸಿದ್ದೇನೆ ಎಂದು ಅವರು ಪ್ರಧಾನಿಯವರಿಗೆ ತಿಳಿಸಿದರು.
ಸರ್ಕಾರದ ಯಾವುದೇ ಯೋಜನೆಯ ಲಾಭವನ್ನು ಪಡೆಯುತ್ತೀರಾ ಎಂದು ಪ್ರಧಾನಿ ವಿಚಾರಿಸಿದಾಗ, ಅರವಿಂದ ಅವರು ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆಯಡಿ ಉಚಿತ ಪಡಿತರವನ್ನು ಪಡೆದಿರುವುದಾಗಿ ಹೇಳಿದರು.
ಶ್ರಮಯೋಗಿ ಯೋಜನೆಯನ್ನು ಮೌರ್ಯ ಶ್ಲಾಘಿಸಿದರು. ಶ್ರಮಯೋಗಿ ಯೋಜನೆಯಡಿಯಲ್ಲಿ ತಿಂಗಳಿಗೆ ೧೫೦ ರೂ.ಗಳ ಕೊಡುಗೆ ನೀಡಬಹುದಾಗಿದ್ದು, ೬೦ ವರ್ಷದವರಾದಾಗ ತಿಂಗಳಿಗೆ ೩,೦೦೦ ರೂ. ಪಡೆಯಬಹುದು. ಅರವಿಂದ ಅವರು ಅನೇಕ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿಯವರು ಕಾಶಿಯ ಜನರಿಗೆ ಮೌರ್ಯ ಮೂಲಕ ತಮ್ಮ ’ಪ್ರಣಾಮ’ವನ್ನು ತಿಳಿಸಿದರು.
No comments:
Post a Comment