Tuesday, October 20, 2020

ಮಲಬಾರ್ ನೌಕಾ ಕವಾಯತಿಗೆ ಆಸ್ಟ್ರೇಲಿಯಾ: ಚೀನಾ ಪ್ರತಿಕ್ರಿಯೆ

 ಮಲಬಾರ್ ನೌಕಾ ಕವಾಯತಿಗೆ ಆಸ್ಟ್ರೇಲಿಯಾ: ಚೀನಾ ಪ್ರತಿಕ್ರಿಯೆ

ಬೀಜಿಂಗ್: ಅಮೆರಿಕ ಮತ್ತು ಜಪಾನ್ ಜೊತೆಗೆ ಆಸ್ಟ್ರೇಲಿಯಾವು ವಾರ್ಷಿಕ ಮಲಬಾರ್ ನೌಕಾ ಕವಾಯತಿಗೆ ಸೇರಲಿದೆ ಎಂಬ ಭಾರತದ ಘೋಷಣೆಯನ್ನು "ಗಮನಿಸಿರುವುದಾಗಿಎಂದು ಚೀನಾ 2020 ಅಕ್ಟೋಬರ್ 20 ಮಂಗಳವಾರ ಹೇಳಿತು. ’ಮಿಲಿಟರಿ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ "ಅನುಕೂಲಕರ" ವಾಗಿರಬೇಕು ಎಂದು ಅದು  ಒತ್ತಿಹೇಳಿತು.

ಮುಂಬರುವ ಮಲಬಾರ್ ನೌಕಾ ಕವಾಯತಿಗೆ ಆಸ್ಟ್ರೇಲಿಯಾ ಸೇರಲಿದೆ ಎಂಬುದಾಗಿ ಭಾರತ ಸೋಮವಾರ ಪ್ರಕಟಿಸಿದೆ, ಇದರರ್ಥಕ್ವಾಡ್ಅಥವಾಚತುರ್ಭುಜಒಕ್ಕೂಟದ ನಾಲ್ಕು ಸದಸ್ಯ ರಾಷ್ಟ್ರಗಳು ಮೆಗಾ ಡ್ರಿಲ್ನಲ್ಲಿ ಭಾಗವಹಿಸಲಿವೆ.

ಅಮೆರಿಕ ಮತ್ತು ಜಪಾನ್ ವಾರ್ಷಿಕ ಸಮರಾಭ್ಯಾಸದಲ್ಲಿ ಭಾಗವಹಿಸುವ ಇತರ ದೇಶಗಳು, ಇದು ಮುಂದಿನ ತಿಂಗಳು ಬಂಗಾಳಕೊಲ್ಲಿಯಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ನಡೆಯಲಿದೆ.

ಭಾರತದ ಪ್ರಕಟಣೆಯ ಕುರಿತು ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಚೀನಾ " ಬೆಳವಣಿಗೆಯನ್ನು ಗಮನಿಸಿದೆಎಂದು ಹೇಳಿದರು.

"ದೇಶಗಳ ನಡುವಣ ಮಿಲಿಟರಿ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾಗಿರಬೇಕು ಎಂದು ನಾವು ಯಾವಾಗಲೂ ನಂಬುತ್ತೇವೆಎಂದು ಅವರು ಸಂಕ್ಷಿಪ್ತ ಪ್ರತಿಕ್ರಿಯೆಯಲ್ಲಿ ಹೇಳಿದರು.

ಮೆಗಾ ನೌಕಾ ಕವಾಯತಿನ ಭಾಗವಾಗಬೇಕೆಂಬ ಆಸ್ಟ್ರೇಲಿಯಾದ ಮನವಿಗೆ ಕಿವಿಗೊಡುವ ಭಾರತದ ನಿರ್ಧಾರವು ಚೀನಾದ ಜೊತೆಗೆ ನಡೆಯುತ್ತಿರುವ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಒತ್ತಡಗಳ ಮಧ್ಯೆ ಬಂದಿದೆ.

ಹಿಂದೂ ಮಹಾಸಾಗರ- ಶಾಂತ ಸಾಗರ (ಇಂಡೋ-ಪೆಸಿಫಿಕ್) ಪ್ರದೇಶದಲ್ಲಿ ತನ್ನ ಪ್ರಭಾವವನ್ನು ತಡೆಯುವ ಉದ್ದೇಶದ ವಾರ್ಷಿಕ ಯುದ್ಧದ ಆಟ ಎಂದು ಚೀನಾವು ಮಲಬಾರ್ ಕವಾಯತಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಮಲಬಾರ್ ಕವಾಯತು ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆ ಮತ್ತು ಅಮೆರಿಕ ನೌಕಾಪಡೆಯ ನಡುವೆ ದ್ವಿಪಕ್ಷೀಯ ಕವಾಯತು ಆಗಿ ೧೯೯೨ ರಲ್ಲಿ ಪ್ರಾರಂಭವಾಯಿತು. ಜಪಾನ್ ೨೦೧೫ ರಿಂದ ಕವಾಯತಿನಲ್ಲಿ  ಶಾಶ್ವತ ಪಾಲುದಾರನಾಗಿತ್ತು.

ವಾರ್ಷಿಕ ಕವಾಯತನ್ನು ೨೦೧೮ ರಲ್ಲಿ ಫಿಲಿಪೈನ್ ಸಮುದ್ರದಲ್ಲಿನ ಗುವಾಮ್ ತೀರದಲ್ಲಿ ಮತ್ತು ೨೦೧೯ ರಲ್ಲಿ ಜಪಾನ್ ಕರಾವಳಿಯಲ್ಲಿ ನಡೆಸಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ, ಆಸ್ಟ್ರೇಲಿಯಾ ಕವಾಯತಿಗೆ ಸೇರಲು ತೀವ್ರ ಆಸಕ್ತಿ ತೋರಿಸಿತ್ತು.

ಚೀನಾದ ಹೆಚ್ಚುತ್ತಿರುವ ಸೇನಾ ತೋಳು ತಿರುಚುವಿಕೆ ಹಿನ್ನೆಲೆಯಲ್ಲಿ ಇಂಡೋ-ಪೆಸಿಫಿಕ್ನಲ್ಲಿ  ಉದ್ಭವಿಸುತ್ತಿರುವ ಪರಿಸ್ಥಿತಿ ಪ್ರಮುಖ ಜಾಗತಿಕ ಶಕ್ತಿಗಳಲ್ಲಿ ಮುಖ್ಯವಾಗಿ ಚರ್ಚೆಯಾಗಿದೆ.

ಆಯಕಟ್ಟಿನ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಬಲವರ್ಧನೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕ್ವಾಡ್ ಒಕ್ಕೂಟವನ್ನು ಭದ್ರತಾ ವ್ಯವಸ್ಥೆಯಾಗಿ ರೂಪಿಸಲು ಅಮೆರಿಕ ಒಲವು ಹೊಂದಿದೆ.

No comments:

Advertisement