ಚುನಾವಣೆಗೆ ಮುನ್ನ ಆಘಾತ: ಡೊನಾಲ್ಡ್ ಟ್ರಂಪ್, ಮೆಲಾನಿಯಾಗೆ ಕೊರೋನಾ
ವಾಷಿಂಗ್ಟನ್: ಚುನಾವಣಾ ಪ್ರಚಾರದ ಅಂತಿಮ ಘಳಿಗೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ಅವರಿಗೆ ಕೋವಿಡ್-೧೯ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಬೆನ್ನಲ್ಲೇ ತಾವಿಬ್ಬರೂ ಪ್ರತ್ಯೇಕತಾವಾಸದ ನಿರ್ಬಂಧಕ್ಕೆ ಒಳಗಾಗಿರುವುದಾಗಿ ಟ್ರಂಪ್ 2020 ಅಕ್ಟೋಬರ್ 02ರ ಶುಕ್ರವಾರ ತಿಳಿಸಿದ್ದಾರೆ.
ಕೊರೋನಾ ಸೋಂಕಿನ ಪರಿಣಾಮವಾಗಿ ಟ್ರಂಪ್ ಅವರು ಚುನಾವಣಾ ಪ್ರಚಾರದ ನಿರ್ಣಾಯಕ ಹಂತದಲ್ಲಿ ಪ್ರಚಾರದಿಂದ ದೂರ ಉಳಿಯಬೇಕಾಗಿ ಬಂದಿದ್ದು, ನಿಗದಿತ ಸಾರ್ವಜನಿಕ ಸಭೆಗಳಿಗೆ ಅಡ್ಡಿ ಉಂಟಾಗಿದೆ.
ಟ್ರಂಪ್ ಚುನಾವಣಾ ಪ್ರಚಾರದ ಹಿರಿಯ ಸಹಾಯಕ ಹೋಪ್ ಹಿಕ್ಸ್ ಈ ವಾರ ಅಧ್ಯಕ್ಷರೊಂದಿಗೆ ಹಲವಾರು ಬಾರಿ ಪ್ರಯಾಣಿಸಿದ ನಂತರ ಸೋಂಕಿಗೆ ಒಳಗಾಗಿದ್ದಾರೆ ಎಂಬುದಾಗಿ ಶ್ವೇತಭವನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರಿಗೂ ಸೋಂಕು ತಗುಲಿದ್ದು ಬೆಳಕಿಗೆ ಬಂದಿದೆ. ಗುರುವಾರ ಸಂಜೆ ವರದಿಗಾರರು ಶ್ವೇತಭವನಕ್ಕೆ ತೆರಳಿದ್ದಾಗ ಟ್ರಂಪ್ ಆರೋಗ್ಯವಾಗಿದ್ದುದನ್ನು ಕಂಡಿದ್ದರು.
ಟ್ರಂಪ್ ಅವರಿಗೆ ಈಗ ೭೪ ವರ್ಷ ವಯಸ್ಸಾಗಿದ್ದು, ದೇಶಾದ್ಯಂತ ೨,೦೦,೦೦೦ ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ವೈರಸ್ನಿಂದ ಗಂಭೀರ ತೊಂದರೆಯಾಗಬಹುದಾದ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
’ಇಂದು ರಾತ್ರಿ ನನಗೆ ಕೋವಿಡ್ -೧೯ ಪಾಸಿಟಿವ್ ವರದಿ ಬಂದಿದೆ. ನಾವು ತತ್ ಕ್ಷಣವೇ ಸಂಪರ್ಕ ತಡೆ ಮತ್ತು ಚೇತರಿಕೆ ಪ್ರಕ್ರಿಯೆ ಆರಂಭಿಸುತ್ತೇವೆ. ನಾವಿಬ್ಬರೂ ಒಟ್ಟಾಗಿ ಇದನ್ನು ಮಾಡುತ್ತೇವೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಹಿಕ್ಸ್ ಅವರಿಗೆ ಕೊರೋನಾವೈರಸ್ ತಗುಲಿದ ಹಿನ್ನೆಲೆಯಲ್ಲಿ ತಾವು ಮತ್ತು ಪ್ರಥಮ ಮಹಿಳೆ ಮೆಲಾನಿಯಾ ’ಸಂಪರ್ಕ ತಡೆ’ ಆರಂಭಿಸುತ್ತಿರುವುದಾಗಿ ಟ್ರಂಪ್ ಗುರುವಾರ ತಡವಾಗಿ ಘೋಷಿಸಿದರು. ಆದರೆ ವಾಸ್ತವ ಸ್ಥಿತಿ ಏನು ಎಂಬುದು ಸ್ಪಷ್ಟವಾಗಿಲ್ಲ. ಪರೀಕ್ಷೆಯ ಮೂಲಕ ಸೋಂಕನ್ನು ಪತ್ತೆಹಚ್ಚಲು ಕೆಲವು ದಿನಗಳು ಬೇಕಾಗುತ್ತವೆ.
ಚುನಾವಣಾ ದಿನಕ್ಕಿಂತ ನಾಲ್ಕು ತಿಂಗಳಿಗಿಂತಲೂ ಕಡಿಮೆ ಅವಧಿ ಉಳಿದಿದ್ದು, ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ರೋಗವು ಬೆನ್ನ ಹಿಂದೆಯೇ ಇದೆ ಎಂದು ಅಮೆರಿಕಾದ ಸಾರ್ವಜನಿಕರಿಗೆ ಮನವರಿಕೆ ಮಾಡಲು ತೀವ್ರ ಯತ್ನ ನಡೆಸುತ್ತಿರುವ ಅಧ್ಯಕ್ಷರಿಗೆ ಈ ರೋಗನಿರ್ಣಯವು ಒಂದು ದೊಡ್ಡ ಹೊಡೆತವಾಗಿದೆ.
ಇತ್ತೀಚಿನ ಇತಿಹಾಸದಲ್ಲಿ ಅಮೆರಿಕದ ಯಾವುದೇ ಅಧ್ಯಕ್ಷರು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಸಾರ್ವಜನಿಕ ಆರೋಗ್ಯ ಬೆದರಿಕೆ ಇದಾಗಿದೆ.
ಕೋವಿಡ್-೧ರ ಲಕ್ಷಣಗಳು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಒಳಗೊಂಡಿರಬಹುದು. ಹೆಚ್ಚಿನ ಜನರಲ್ಲಿ ಸೌಮ್ಯ ರೋಗಲಕ್ಷಣಗಳು ಮಾತ್ರ ಕಾಣುತ್ತವೆ. ಆದರೆ ಕೆಲವು ಜನರು, ಸಾಮಾನ್ಯವಾಗಿ ನ್ಯುಮೋನಿಯಾ ಸೇರಿದಂತೆ ಇತರ ವೈದ್ಯಕೀಯ ತೊಡಕುಗಳನ್ನು ಹೊಂದಿರುವವರಲ್ಲಿ ಕೊರೋನಾ ರೋಗಲಕ್ಷಣ ತೀವ್ರವಾಗಿ ಕಂಡು ಬರುತ್ತದೆ. ಅವರಿಗೆ ಇದು ಮಾರಕವಾಗಲೂ ಬಹುದು.
ಸುದ್ದಿ ಸಂಸ್ಥೆಯೊಂದಕ್ಕೆ ಗುರುವಾರ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಕೋವಿಡ್-೧೯ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದರು. "ನಾವು ಸಂಪರ್ಕತಡೆಯನ್ನು ಹೊಂದಿದ್ದೇವೆ. ಆದರೆ ನಮ್ಮಲ್ಲಿ ಅದು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ಟ್ರಂಪ್ ಹೇಳಿದ್ದರು. ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಹ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ.
ಅಧ್ಯಕ್ಷರ ಹೆಲಿಕಾಪ್ಟರ್ ಮೆರೈನ್ ಒನ್ ಮತ್ತು ಏರ್ ಫೋರ್ಸ್ ಒನ್ ನಲ್ಲಿ ಮಿನ್ನೆಸೋಟದಲ್ಲಿ ಬುಧವಾರ ನಡೆದ ರ್ಯಾಲಿಯಲ್ಲಿ ಮತ್ತು ಇತರ ಈವಾರ ಹಲವಾರು ಸಂದರ್ಭಗಳಲ್ಲಿ ಅಧ್ಯಕ್ಷರ ಜೊತೆಗೆ ಹಿಕ್ಸ್ ಜೊತೆಗೆ ಪ್ರಯಾಣಿಸಿದ್ದರು ಮತ್ತು ಕ್ಲೀವ್ಲ್ಯಾಂಡಿನಲ್ಲಿ ಏರ್ ಫೋರ್ಸ್ ಒನ್ ನಿಂದ ಮಂಗಳವಾರ ರಾತ್ರಿಯ ಮೊದಲ ಅಧ್ಯಕ್ಷೀಯ ಚರ್ಚೆಯಲ್ಲೂ ಹಿಕ್ಸ್ ಪಾಲ್ಗೊಂಡಿದ್ದರು.
ವೈಯಕ್ತಿಕವಾಗಿ ಅಸ್ವಸ್ಥತೆಗೆ ಗುರಿಯಾಗಬಹುದೆಂದು ಶ್ವೇತಭವನದ ಸಿಬ್ಬಂದಿ ಮತ್ತು ಮಿತ್ರರು ವ್ಯಕ್ತ ಪಡಿಸಿದ್ದ ಕಳವಳವನ್ನು ಟ್ರಂಪ್ ನಿರ್ಲಕ್ಷಿಸಿದ್ದರು. "ನಾನು ಯಾವುದೇ ದುರ್ಬಲತೆಯನ್ನು ಅನುಭವಿಸಲಿಲ್ಲ’ ಎಂದು ಅವರು ಮೇ ತಿಂಗಳಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಬದಲಿಗೆ ತಮ್ಮ ಪ್ರಾಂತಗಳನ್ನು ಪುನಃ ತೆರೆಯುವಂತೆ ಅವರು ಗವರ್ನರ್ಗಳನ್ನು ಪ್ರೋತ್ಸಾಹಿಸಿದ್ದರು ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳ ಮೇಲೆ ರಾಷ್ಟ್ರದ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿದ್ದರು.
ಕೆಲವು ಅಧ್ಯಯನಗಳು ಬೊಜ್ಜು ಹೊಂದಿರುವ ಕೋವಿಡ್-೧೯ ರೋಗಿಗಳು ವೈರಸ್ನಿಂದ ಗಂಭೀರವಾಗಿ ಕಾಯಿಲೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸೂಚಿಸುತ್ತವೆ. ಆದರೂ ಅದಕ್ಕೆ ಅಂತಹವರು ಹೃದಯ ಕಾಯಿಲೆ ಅಥವಾ ಮಧುಮೇಹದಂತಹ ಸಮಸ್ಯೆಗಳನ್ನು ಹೊಂದಿರುವುದು ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ಟ್ರಂಪ್ ಅವರಿಗೆ ಬೊಜ್ಜು ಇರುವುದೂ ಕಳವಳಕ್ಕೆ ಕಾರಣವಾಗಿದೆ.
No comments:
Post a Comment